ಕೋವಿಡ್ ಲಸಿಕೋತ್ಸವ

ಕಲಬುರಗಿ : ಏ.25: ನಗರದ ಬಸವೇಶ್ವರ್ ಕಾಲೋನಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಕೋವಿಡ್ ಲಸಿಕೋತ್ಸವ ಕಾರ್ಯಕ್ರಮ ಜರುಗಿತು.
ಬಸವೇಶ್ವರ್ ಕಾಲೋನಿಯ ವಾರ್ಡ್ ನಂಬರ್ 9ರ ಸಂಖ್ಯೆಯಲ್ಲಿನ 28ರಿಂದ 45 ವರ್ಷ ತುಂಬಿದ ನಾಗರಿಕರು ಅಲ್ಲಿನ ಶಿವಮಂದಿರದಲ್ಲಿ ಲಸಿಕೆ ಪಡೆದರು. ಈ ಸಂದರ್ಭದಲ್ಲಿ ಬಿಜೆಪಿ ಉಪಾಧ್ಯಕ್ಷ ವಿಜಯಕುಮಾರ್ ಹುಲಿ, ಮಲ್ಲಿನಾಥ್ ಬೋಳಶೆಟ್ಟಿ, ಭೀಮರಾವ್ ಅಕ್ಕೋಣಿ, ರಾಜಶೇಖರ್ ಶೀಲವಂತ್ ಹೆಬ್ಬಾಳ್, ಗುಂಡೇರಾವ್ ಪಾಟೀಲ್, ಸಿ.ಎಂ. ದೊಡ್ಡಮನಿ, ಸುಭಾಷ್ ಕಿರಾಣಿ, ಮಾಜಿ ಮೇಯರ್ ಧರ್ಮಪ್ರಕಾಶ್ ಪಾಟೀಲ್, ಅಶೋಕ್ ಇಂಡಿ, ಬಿ.ಎಸ್. ಪಾಟೀಲ್, ರೇವಣಸಿದ್ದಯ್ಯ ಬೇಕರಿಸ್ವಾಮಿ, ಸುಭಾಷ್ ಮಲಶೆಟ್ಟಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.