ಕೋವಿಡ್ ಲಸಿಕೆ ೨ ಡೋಸ್‌ಗೆ ಡಬ್ಯುಎಚ್‌ಒ ಸಲಹೆ

ಜಿನೇವಾ,ಜ.೬-ಕೋರೋನಾ ಸೊಂಕಿಗೆ ಅಭಿವೃದ್ಧಿ ಪಡಿಸಲಾಗಿರುವ ಫೈಜರ್ ಮತ್ತು ಬಯೋನ್ ಟೆಕ್ ಲಸಿಕೆಯನ್ನು ೨೧ರಿಂದ ೨೮ ದಿನಗಳ ಅಂತರದಲ್ಲಿ ಎರಡು ಡೋಸ್ ನೀಡಲು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ.

ಸೋಂಕಿತರಿಗೆ ಒಮ್ಮೆ ಲಸಿಕೆ ನೀಡಿದ ನಂತರ ಅದನ್ನು ೨೧ ರಿಂದ ೨೮ ದಿನಗಳ ಒಳಗಾಗಿ ಎರಡನೇ ಡೋಸ್ ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕ್ರಮ ಸಲಹಾ ತಜ್ಞರ ಗುಂಪಿನ ಅಧ್ಯಕ್ಷ ಅಲ್ ಜಾಂಡ್ರೋ ಕ್ರೇವಿಟೋ ಹೇಳಿದ್ದಾರೆ.

ಲಸಿಕೆಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವವರಿಗೆ ಕೊಡುವುದು ಸೂಕ್ತವಲ್ಲ ಒಂದೇ ಕಡೆ ಇರುವವರಿಗೆ ಮಾತ್ರ ೨೧ ರಿಂದ ೨೮ ದಿನಗಳ ಅವಧಿಯಲ್ಲಿ ಲಸಿಕೆ ನೀಡಬೇಕು ಎಂದು ಅವರು ಹೇಳಿದ್ದಾರೆ.

ಫೈಜರ್ ಮತ್ತು ಬಯೋನ್ ಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆ ಸುರಕ್ಷಿತ ಮತ್ತು ದಕ್ಷತೆಯಿಂದ ಕೂಡಿದೆ ಈಗಾಗಲೇ ಎರಡು ಪ್ರಯೋಗ ನಡೆದಿದ್ದು ಪ್ರಯೋಗ ಅಂತಿಮ ಹಂತದಲ್ಲಿದೆ. ಹೀಗಾಗಿ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಲಸಿಕೆಯ ಮೊದಲ ಡೋಸ್ ಪಡೆದ ಬಳಿಕ ೨೧ ರಿಂದ ೨೮ ದಿನಗಳ ಅವಧಿಯಲ್ಲಿ ಎರಡನೇ ಲಸಿಕೆಯನ್ನು ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅದಾನಮ್ ಗ್ಯಾಬ್ರಿಯಾಸಸ್ ಮಾತನಾಡಿ,ಕೊರೋನಾ ಸೋಂಕು ಕಾಣಿಸಿಕೊಂಡ ನಂತರ ಚೀನಾ ತನ್ನ ದೇಶಕ್ಕೆ ಅಂತರಾಷ್ಟ್ರೀಯ ತಜ್ಞರನ್ನು ಪರೀಕ್ಷೆ ಮಾಡಲು ಅವಕಾಶ ನೀಡಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅವರು ಹೇಳಿದ್ದಾರೆ.

ಕೊರೊನಾ ಸೋಂಕು ಬಚ್ಚಿಟ್ಟ ಆರೋಪಕ್ಕೆ ಗುರಿಯಾಗಿರುವ ಚೀನಾಗೆ ಅಮೆರಿಕ ಸೇರಿದಂತೆ ವಿಶ್ವದ ಅನೇಕ ದೇಶಗಳು ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿವೆ.