ಕೋವಿಡ್ ಲಸಿಕೆ ಹಾಕಿಸಿಕೊಂಡ ನ್ಯಾಯಾಧೀಶರು

ಹರಪನಹಳ್ಳಿ,.ಮೇ. ೨೯; ಪಟ್ಟಣದ ಜೆ.ಎಂ.ಎಫ್.ಸಿ. ನ್ಯಾಯಾಲಯದ ಹಿರಿಯ ನ್ಯಾಯಾಧೀsಶರಾದ ಉಂಡಿ ಮಂಜುಳಾ ಶಿವಪ್ಪ ಹಾಗೂ ಕಿರಿಯ ನ್ಯಾಯಾಧೀಶರಾದ ಬಿ.ಜಿ.  ಶೋಭಾ ಹಾಗೂ ಹಿರಿಯ ಮತ್ತು ಕಿರಿಯ ನ್ಯಾಯಾವಾದಿಗಳು ಕಿಲ್ಲರ್ ಕರೋನಾ ವೈರಸ್ ಹಾಗೂ ಇತರೆ ಸಾಂಕ್ರಾಮಿಕ ರೋಗ ಹರಡದಂತೆ ಲಸಿಕೆ ಹಾಕಿಸಿಕೊಂಡು ಜಾಗೃತರಾದರು. ಈ ವೇಳೆ ಹಿರಿಯ ನ್ಯಾಯಾಧೀsಶರಾದ ಉಂಡಿ ಮಂಜುಳಾ ಶಿವಪ್ಪ ಮಾತನಾಡಿ ವಕೀಲರುಗಳ ಕುಟುಂಬ ನಿರ್ವಾಹಣೆಗಾಗಿ ಮತ್ತು ಜೀವ ರಕ್ಷಣೆಗಾಗಿ ಲಸಿಕೆ ಹಾಕಿಸಿಕೊಂಡರೆ ಯಾವುದೇ ರೀತಿಯ ಸಾಂಕ್ರಾಮಿಕ ರೋಗ ಬಂದರೂ  ತಡೆಗಟ್ಟಲು ಸಾಧ್ಯವಾಗುತ್ತದೆ ಎಂಬ ತಜ್ಞನರ ಅಭಿಪ್ರಾಯದಂತೆ ಕಡ್ಡಾವಾಗಿ  ಲಸಿಕೆ ಪಡೆದುಕೊಳ್ಳುವುದರಿಂದ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವುದಕ್ಕೆ ಸಾಧ್ಯವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ. ಚಂದ್ರಗೌಡ್ರು, ಉಪಾಧ್ಯಕ್ಷ ಟಿ. ವೆಂಕಟೇಶ್, ಅಪಾರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶ್ ಗೌಡ, ತಾಲ್ಲೂಕು ವೈದ್ಯಾಧಿಕಾರಿ ವೆಂಕಟೇಶ, ವಕೀಲರಾದ  ಮತ್ತಿಹಳ್ಳಿ ಅಜ್ಜಣ್ಣ ಕೆ.ಜಗದಪ್ಪ, ಟಿ.ಎಂ.ರಮೇಶ್, ಎಸ್.ಎಂ. ರುದ್ರಮನಿಸ್ವಾಮಿ ಮುತ್ತಿಗಿ ರೇವಣಸಿದ್ದಪ್ಪ ವಾಮದೇವ, ವಾಸುದೇವ ನಾಯ್ಕ, ಕೋಡಿಹಳ್ಳಿ ಪ್ರಕಾಶ್, ಸಣ್ಣ ಲಿಂಗನಗೌಡ, ಹೆಚ್. ಹಾಲೇಶ್, ಬಸವರಾಜ್, ಮಂಜುನಾಥ್, ಸೋಮನಾಥ ಪಟೇಲ್. ಸಿರಾಜ್,  ಆರೋಗ್ಯ ಇಲಾಖೆಯ ವೈಧ್ಯರು ಹಾಗೂ ಸಿಬ್ಬಂಧಿಗಳು ಇತರರು ಇದ್ದರು.