ಕೋವಿಡ್ ಲಸಿಕೆ ಹಾಕಿಕೊಳ್ಳುವುದು ಅಗತ್ಯವಾಗಿದೆ: ಯಾಮೇರ್

ವಾಡಿ:ಎ.7: ಮಹಾಮಾರಿ ಕೊರೊನಾ ವೈರಸ್ ಸೋಂಕು ಹರಡುವಿಕೆಯಿಂದ ಇಡೀ ವಿಶ್ವ ಬಿಚ್ಚಿ ಬಿದ್ದಿದೆ. ಇದನ್ನು ತಡೆ ಗಟ್ಟುವ ಸಲುವಾಗಿ ಪ್ರತಿಯೊಬ್ಬರು ಕೋವಿಡ್ ಲಸಿಕೆ ಹಾಕಿಕೊಳ್ಳುವುದು ಅಗತ್ಯವಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಯಾಮೇರ್ ಹೇಳಿದರು.

ಪಟ್ಟಣ ಸಮೀಪದ ಇಂಗಳಗಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕೋವಿಡ್ ಲಸಿಕೆ ಜನರಿಗೆ ನೀಡುವ ಸಲುವಾಗಿ ಆಶಾ ಕಾರ್ಯಕರ್ತರ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ನರೇಗಾ ಕಾಯಕ ಬಂದುಗಳಿಗೆ ಕರೆದ ಸಭೆಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ಆರಂಭವಾಗಿದೆ. ಪರಿಣಾಮ ಸರಕಾರ ಮುಂಜ್ರಾಗೃತ ಕ್ರಮವಾಗಿ ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಿದೆ. ಇದರಿಂದ ಸಾವಿನ ಪ್ರಮಾಣ ಕಡಿಮೆ ಮಾಡಬಹುದಾಗಿದೆ. ಆಶಾ, ಅಂಗನವಾಡಿ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಲಸಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಜನರಿಗೆ ಲಸಿಕೆ ಹಾಕಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಯಾಮೇರ್ ಸಲಹೆ ನೀಡಿದರು.

ಗ್ರಾಮದ ಹೊರ ವಲಯದಲ್ಲಿರುವ ಆರೋಗ್ಯ ಉಪಾಕೇಂದ್ರದಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಜನರಿಗೆ ಕರೆದುಕೊಂಡು ಹೋಗುವ ಸಲುವಾಗಿ ಪಂಚಾಯಿತಿಯಿಂದ ಆಟೋ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ವಾರಿಯರ್ಸ್‍ಗಳು ಜನರನ್ನು ಆಟೋ ಮೂಲಕ ಕರೆದುಕೊಂಡು ಹೋಗಬೇಕು ಎಂದು ತಿಳಿಸಿದರು.

ಆರೋಗ್ಯ ಕಿರಿಯ ಸಹಾಯಕಿ ತ್ರೀವೆಣಿ ಮಾತನಾಡಿ, ಗ್ರಾಮದಲ್ಲಿ ಸುಮಾರು 17ನೂರು ಜನರಿಗೆ ಲಸಿಕೆ ನೀಡುವ ಗುರಿ ಇದೆ. 45 ವರ್ಷ ಮೇಲ್ಪಟ್ಟ ಜನರಿಗೆ ಕೋವಿಡ್ ಲಸಿಕೆ ಹಾಕಲಾಗುತ್ತದೆ. ಡೆಂಗೂ, ಹೃದಯ ಚಿಕಿತ್ಸೆ ಒಳಪಟ್ಟವರು ಮತ್ತು ಕೊರೊನಾ ದೃಢ ಪಟ್ಟ ವ್ಯಕ್ತಿಗಳಿಗೆ ಲಸಿಕೆ ಹಾಕುವಂತಿಲ್ಲ ಎಂದು ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರಾದ ಶೇಖಮ್ಮ ಕುರಿ, ಮಲ್ಲಮ್ಮ, ಪಾರ್ವತಿ ಕಟ್ಟಿಮನಿ, ಶಾಂತಾ, ಅಣೆಮ್ಮ, ಲಕ್ಷ್ಮಿ ಮತ್ತು ಆಶಾ ಕಾರ್ಯಕರ್ತೆಯರಾದ ಮಲ್ಲಮ್ಮ ತೆಳಗೆರಿ, ಮಂಜುಳಾ, ಶಕುಂತಲಾ ಹೂಗಾರ್, ಸಾವಿತ್ರಿ, ಕಮಲಾ, ಕೆಪಿಆರ್‍ಎಸ್ ಕಾರ್ಯದರ್ಶಿ ಶಕುಂತಲಾ ಪವಾರ್, ಅಧ್ಯಕ್ಷೆ ಭಾಗಮ್ಮ, ಜ್ಯೋತಿ ಪವಾರ್, ಪಂಚಾಯಿತಿ ಬಿಲ್‍ಕಲೆಕ್ಟರ್ ಉದಯಕುಮಾರ ಅಳ್ಳೋಳ್ಳಿ ಇದ್ದರು.