ಕೋವಿಡ್ ಲಸಿಕೆ ಹಾಕಲು ಮುಗಿಬಿದ್ದ ಜನ, ಗೊಂದಲ ಸ್ಥಳಕ್ಕೆ ಐವನ್ ಭೇಟಿ

ಮಂಗಳೂರು, ಎ.೩೦- ವೆನ್ಲಾಕ್ ಆಸ್ಪತ್ರೆಯೊಂದರಲ್ಲಿ ಕೋವಿಡ್ ಲಸಿಕೆ ನೀಡುಅ ಸುದ್ದಿ ಕೇಳಿದ ಜನರು ಲಸಿಕೆಗಾಗಿ ಮುಗಿಬಿದ್ದು, ವೆನ್ಲಾಕ್ ಆಸ್ಪತ್ರೆಯ ಆಯುಷ್ಮಾನ್ ಕಟ್ಟಡಕ್ಕೆ ಆಗಮಿಸಿ ಲಸಿಕೆ ನೀಡುವಂತೆ ಬೇಡಿಕೆವಿತ್ತಾಗ, ೨ನೇ ಡೋಸ್ ಮಾತ್ರ ನೀಡಲಾಗುವುದು. ಪ್ರಥಮ ಡೋಸ್ ನೀಡಲು ಫಸ್ಟ್ ಡೋಸ್ ನೀಡಲು ಸಾದ್ಯವಿಲ್ಲ ಎಂದು ಹೇಳಿದ ಕಾರಣಕ್ಕಾಗಿ ಗೊಂದಲದ ವಾತವರಣವುಂಟಾದಾಗ ಮಾಜಿ ಶಾಸಕ/ಕೋವಿ ಹೆಲ್ಪ್ ಲೈನ್ ಸಂಚಾಲಕರಾಧ ಶ್ರೀ ಐವನ್ ಡಿ ಸೋಜರವರ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ವೈಧ್ಯಾಧಿಕಾರಿಗಳ ಜೊತೆ ಚರ್ಚೆ ನಡೆಸಿ, ತದನಂತರ ಜಿಲ್ಲಾಧಿಕಾರಿಗಳ ಜೊತೆ ಮಾತುಕಟೆ ನಡೆಸಿ, ಆವರಣದ ಎಲ್ಲರಿಗೂ ಮೊದಲ ಮತ್ತು ದ್ವಿತೀಯ ಲಸಿಕೆ ನೀಡಲು ಆದೇಶಿಸಿ, ಸಮಸ್ಯಯ ಗೊಂದಲವನ್ನು ನಿವಾರಣೆ ಮಾಡಲಾಯಿತು. ಕೋವಿಡ್ ಲಸಿಕೆಯ ಅಭಾವವಿರುವುದರಿಂದ ಈ ಗೊಂದಲವುಂಟಾಗಿದ್ದು, ಇಂದು ಹೆಚ್ಚು ಲಸಿಕೆಯನ್ನು ಪಡೆದು, ನಾಳೆಯಿಂದ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಬೇಕೆಂದು ಶ್ರೀ ಐವನ್ ಡಿ ಸೋಜರವರು ಜಿಲ್ಲಾಧಿಕಾರಿ ಮತ್ತು ಆರೋಗ್ಯ ಇಲಾಖೆಗೆ ಒತ್ತಾಯಿಸಿದರು. ಇದಕ್ಕೆ ಜಿಲ್ಲಾಧಿಕಾರಿಯವರು ಸಮ್ಮತಿಸಿದ್ದು, ಕೇಂದ್ರಿಕೃತವಾಗಿ ಒಂದೇ ಲಸಿಕೆ ನೀಡಿದರೆ ಉಂಟಾಗಿರುವ ಗೊಂದಲವನು ಅಧಿಕಾರಿಯವರ ಗಮನಕ್ಕೆ ಬಂದು ಆರೋಗ್ಯ ಕೇಂದ್ರಗಳ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಐವನ್ ಡಿ ಸೋಜರವರು ವಿನಂತಿಸಿದ್ದಾರೆ.
ನಿಯೋಗದಲ್ಲಿ ಕೋವಿಡ್ ಸದಸ್ಯರು ಗಳಾದ ಶ್ರೀ ಶಶಿಧರ್ ಹೆಗ್ಡೆ, ಪ್ರಕಾಶ್ ಸಾಲಿಯಾನ್, ಶ್ರೀ ಸತೀಶ್ ಪೆಂಗಲ್, ಶ್ರೀ ಮೊಹಮ್ಮದ್ ಕುಂಜತ್ತ್ ಬೈಲ್, ಶ್ರೀ ಮಹೇಶ್ ಕುಮಾರ್, ಶ್ರೀ ಅಭಿಬುಲ್ಲ, ಶ್ರೀ ಅಶೀತ್ ಪಿರೇರಾ, ಶ್ರೀ ಮಿಲಾಝ್ ಅತ್ತಾವರ ಉಪಸ್ಥಿತರಿದ್ದರು.