ಕೋವಿಡ್ ಲಸಿಕೆ ಸದುಪಯೋಗ ಪಡೆದುಕೊಳ್ಳಲು ಕರೆ

ಜಗಳೂರು.ಸೆ.೧೮;ಸರ್ಕಾರ ಸಾವಿರಾರು ಕೋಟಿ ಹಣ ವ್ಯಯಮಾಡಿ ಲಸಿಕೆ ಪೂರೈಕೆಮಾಡುತ್ತಿದ್ದು ಪ್ರತಿಯೊಬ್ಬರೂಲಸಿಕೆ ಹಾಕಿಸಿಕೊಂಡು ಶೇ.100 ಪ್ರಮಾಣದಲ್ಲಿ ಸದುಪಯೋಗ ಪಡೆಯಿರಿ ಎಂದು ನ್ಯಾಯಾಧೀಶ ಜಿ ತಿಮ್ಮಯ್ಯ ಕರೆ ನೀಡಿದರು.   ತಾಲ್ಲೂಕಿನ ಬಿಸ್ತುವಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಕಾನೂನು ಸೇವಾಸಮಿತಿ,ತಾಲೂಕು ಪಂಚಾಯಿತಿ ಆರೋಗ್ಯ ಇಲಾಖೆ,ವಕೀಲರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಕೊವಿಡ್ 19 ಲಸಿಕಾ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮಿಣ ಪ್ರದೇಶಗಳಲ್ಲಿ ಬಡವರ್ಗದವರಿಗೆ ಅಸಹಾಯಕ ಸ್ಥಿತಿಯಲ್ಲಿದ್ದು.ಸರ್ಕಾರದ ಯೋಜನೆಗಳು ಕಟ್ಟಕಡೆಯ ವ್ಯಕ್ತಿ ಗೆ ತಲುಪಬೇಕು.ಈಗಾಗಲೇ ಸರ್ಕಾರ ಕೊವಿಡ್ ತಡೆಗಟ್ಟಲು  ನೀಡುತ್ತಿರುವ ಉಚಿತ ಸೇವೆ ನೀಡುತ್ತಿರುವುದು ಶ್ಲಾಘನೀಯವಾಗಿದೆ. ನ್ಯಾಯಲಯದಿಂದ ಉಚಿತ ಕಾನೂನು ಸೇವಾ ಪ್ರಾದಿಕಾರದಿಂದ ದೊರೆಯುವ ಉಚಿತ ಸೌಲಭ್ಯಗಳ ನೆರವು ಪಡೆದುಕೊಳ್ಳುವಂತೆಸಲಹೆ ನೀಡಿದರು.ಕಳೆದ ದಶಕಗಳಲ್ಲಿ ಗ್ರಾಮೀಣ ಭಾಗಗಳಿಗೆ ನ್ಯಾಯಾಲಯ ಹಾಗೂ ಪೊಲೀಸ್ ಠಾಣೆಯ ಸೇವೆಗಳು ತಲುಪಲು ಸಾಧ್ಯವಾಗಿಲ್ಲ,ಇತ್ತೀಚೆಗೆ ಮನೆಬಾಗಿಲಿಗೆ ಕಾನೂನು ಸೇವಾ ಸಮಿತಿ,ಪೊಲೀಸ್ ಇಲಾಖೆಗಳು ಆಗಮಿಸಿ ಜಾಗೃತಿ ಮೂಡಿಸಿ ಕಾನೂನಿನ ಅರಿವು ಮೂಡಿಸುತ್ತಿವೆ ಎಂದರು.ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಜ್ಜಪ್ಪ ನಾಡಿಗರ್. ವಕೀಲರಾದ ಕರಿಬಸಪ್ಪ.ನಾಗೇಶ್. ಬಿಸ್ತುವಳ್ಳಿ ವಿ ಎಸ್ ಎಸ್ ಎನ್ ಅಧ್ಯಕ್ಷ ಬಿಸ್ತುವಳ್ಳಿ ಬಾಬು.ಪಿ.ಡಿ.ಓ ಕೋಟ್ರೇಶ್.ಮುಖಂಡರಾದ ಮೋಹನ್, ಶಿವು ಸೇರಿದಂತೆ ಉಪಸ್ಥಿತರಿದ್ದರು.