ಕೋವಿಡ್ ಲಸಿಕೆ ಶಿಕ್ಷಕರು ಕಡ್ಡಾಯವಾಗಿ ಪಡೆಯಲು ಬಿಇಓ ಕರೆ

ಚಿಂಚೋಳಿ,ಏ.27- ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕೋವಿಡ್ 19 ಲಸಿಕೆ ಉತ್ಸವದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ನಾಗಶೆಟ್ಟಿ ಭದ್ರಶೆಟ್ಟಿ ಲಸಿಕೆ ಪಡೆದು ಮಾತನಾಡಿದ ಅವರು, ಕೋವಿಡ್ ನಿಯಮವಳಿ ಪಾಲಿಸಿ ಕಡ್ಡಾಯ ಲಸಿಕೆ ಪಡೆಯಿರಿ ಎಂದು ಕರೆ ನೀಡಿದರು.
ಕೋವಿಡ್-19 ಲಸಿಕೆಯನ್ನು ತಾಲೂಕಿನ ಎಲ್ಲ ಶಿಕ್ಷಕಬಾಂಧವರು ಕಡ್ಡಾಯವಾಗಿ ಪಡೆಯಬೇಕು ಹಾಗೂ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ .ಚಿಂಚೋಳಿಯ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಅನೀಲಕುಮಾರ ರಾಠೋಡ. ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಡಾ.ಮಹಮ್ಮದ್ ಗಫಾರ್. ಮತ್ತು ಆರೋಗ್ಯ ಸಿಬ್ಬಂದಿಗಳು ಇದ್ದರು.