ಕೋವಿಡ್ ಲಸಿಕೆ ವ್ಯಾಕ್ಸಿನ್ ಕೊರತೆ ಇಲ್ಲ – ಲಕ್ಷ್ಮಣ ಸವದಿ

ಜನಪ್ರತಿನಿಧಿ ಇಲ್ಲದೆ ತರಾತುರಿಯಲ್ಲಿ ಆರೋಗ್ಯ ಕೇಂದ್ರ ಉದ್ಘಾಟನೆ
ಸಿರವಾರ.ಮೇ.೧೮-ನಮ್ಮ ದೇಶದಲ್ಲಿ ಲಸಿಕೆ ಬೇಡಿಕೆ ಕಡಿಮೆ ಇದ್ದಾಗ ಬೇರೆ ದೇಶಕ್ಕೆ ರಪ್ತು ಮಾಡಿರಬಹುದು, ಆದರೆ ದೇಶದಲ್ಲಿ ಲಸಿಕೆ, ವ್ಯಾಕ್ಸಿನ್ ಕೊರತೆ ಇಲ್ಲಾ ವಿರೋಧ ಪಕ್ಷದವರು ಮಾಡುವ ಆರೋಪದಲ್ಲಿ ಹುರುಳಿಲ ಎಂದು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದರು.
ಪಟ್ಟಣದಲ್ಲಿ ೨ ಕೋ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯಾದಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಅಗತ್ಯ ಕ್ರಮಕೈಗೊಂಡಿದ್ದು, ಪ್ರತಿ ತಾಲ್ಲೂಕಿಗೂ ೫೦ ಆಕ್ಸಿಜನ್ ಬೆಡ್ ಗಳ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ತಾಲ್ಲೂಕಿನ ಯಾವ ರೋಗಿಯೂ ತೊಂದರೆ ಅನುಭವಿಸದಂತೆ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದಿಂದ ಹೋಂ ಐಸುಲೇಷನ್ ವ್ಯವಸ್ಥೆಯನ್ನು ಕೈಬಿಡಲಾಗಿದ್ದು, ಕೋವಿಡ್ ಸೋಂಕಿತರು ತಾಲ್ಲೂಕು ಕೇಂದ್ರದ ಕೋವಿಡ್ ಕೇಂದ್ರದಲ್ಲೆ ಚಿಕಿತ್ಸೆ ಪಡೆಯಬೇಕು ಇಲ್ಲವಾದರೆ ಸ್ವ ಖರ್ಚಿನಲ್ಲಿ ಹೋಟೆಲ್ ಗಳಲ್ಲಿ ಕೊಠಡಿ ಪಡೆದು ಚಿಕಿತ್ಸೆ ಪಡೆಯುವಂತೆ ಸೂಚಿಸಬೇಕು ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿ ಜಿಲ್ಲೆಗೆ ಈಗಾಗಲೇ ೩೦ ಆಕ್ಸಿಜನ್ ಕಾಂಸನ್ಟ್ರೇಟರ್ ಗಳನ್ನು ಮಂಜೂರು ಮಾಡಲಾಗಿದ್ದು ಅವಗಳನ್ನು ಬಸ್ ಗಳಿಗೆ ಅಳವಡಿಸಿ ಆಕ್ಸಿಜನ್ ಕೊರತೆಯನ್ನು ನೀಗಿಸಲಾಗುವುದು.
ಪಟ್ಟಣಕ್ಕೆ ಅವಶ್ಯಕತೆ ಇದ್ದ ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನೆ ಮಾಡಿದ್ದು, ಮುಂದೆ ಕೇಂದ್ರಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಶೀಘ್ರದಲ್ಲಿ ಒದಗಿಸಲಾಗುವುದು. ಸಿರವಾರ ಸೇರಿ ೫೬ ತಾಲೂಕಗಳನ್ನು ಘೋಷಣೆ ಮಾಡಲಾಗಿದೆ, ಆದರೆ ಅವುಗಳ ಅಭಿವೃದ್ದಿಗೆ ಅನುದಾನ ನೀಡದೆ ಇರುವದರಿಂದ ಅಭಿವೃದ್ಧಿಗೆ ತೊಂದರೆಯಾಗಿದೆ. ಈ ಪರಸ್ಥಿತಿಯಲ್ಲಿ ಅನುದಾನ ನೀಡುವುದು ಸಾದ್ಯವಿಲ್ಲ. ಸಿರವಾರ ಬಸ್ ನಿಲ್ದಾಣ ಶಿಥಾಲವಸ್ಥೆಯಲ್ಲಿದ್ದೂ, ನೂತನವಾಗಿ ನಿರ್ಮಾಣಕ್ಕೆ ಶಾಸಕರು ಕೆ.ಕೆ.ಆರ್.ಡಿ.ಬಿಯಿಂದ ಅನುದಾನ ನೀಡುವುದಾಗಿ ಹೇಳಿದ್ದಾರೆ. ಕಾಮಗಾರಿಗೆ ಶೀಘ್ರದಲ್ಲಿಯೆ ಚಾಲನೆ ನೀಡಲಾಗುವುದು. ಮುಂದೆ ಡಿಪೋ ನಿರ್ಮಾಣಕ್ಕೆ ಅನುದಾನ ಕಲ್ಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ರಾಜಾ ವೆಂಕಟಪ್ಪ ನಾಯಕ, ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ, ತಹಶೀಲ್ದಾರ್ ವಿಜಯೇಂದ್ರ ಹುಲಿನಾಯಕ, ಪ.ಪಂ ಮುಖ್ಯಾಧಿಕಾರಿ ಕೆ.ಮುನಿಸ್ವಾಮಿ, ಸಿಪಿಐ ಗುರುರಾಜ ಕಟ್ಟಿಮನಿ, ಮುಖಂಡರಾದ ಜೆ.ಶರಣಪ್ಪಗೌಡ, ಜಿ.ಲೋಕರೆಡ್ಡಿ, ನರಸಿಂಹರಾವ್ ಕುಲಕರ್ಣಿ, ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಗಿ, ನಾಗರಾಜ ಭೋಗಾವತಿ, , ತಾಲ್ಲೂಕು ವೈದ್ಯಾಧಿಕಾರಿ ಡಾ. ಚಂದ್ರಶೇಖರಯ್ಯ, ಡಾ.ಪರಿಮಳಾ ಮೈತ್ರಿ, ಡಾ.ಸುನೀಲ್ ಸರೋದೆ,ಪಿ.ಎಸ್.ಐ ಸುಜಾತ ನಾಯಕ, ವಿಜಯಲಕ್ಷ್ಮಿ ಎಂ.ಪ್ರಕಾಶ, ದಾನಪ್ಪ, ಶಾಂತಪ್ಪ ಪಿತಗಲ್, ಸೇರಿದಂತೆ, ಕಂದಾಯ, ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.