ಕೋವಿಡ್ ಲಸಿಕೆ ಮಹತ್ವ ಅರಿತ ಜನ – 3ನೇ ವಾರ್ಡಿನಲ್ಲಿ 112 ಜನಕ್ಕೆ ಲಸಿಕೆ.

ಕೂಡ್ಲಿಗಿ.ಮೇ. 19 :- ಪಟ್ಟಣದಲ್ಲಿ ಕೋವಿಡ್ ಲಸಿಕೆ ಮಹತ್ವ ಜನರಿಗೆ ತಿಳಿದಿದ್ದು ಶಾಸಕರ ಮೌಖಿಕ ಆದೇಶದಂತೆ ಪಟ್ಟಣ ಪಂಚಾಯತಿ ಅಧ್ಯಕ್ಷರ ಜನಪರ ಕಾಳಜಿಯಲ್ಲಿ ಆರೋಗ್ಯ ಇಲಾಖೆ ಮಂಗಳವಾರ ಪಟ್ಟಣದ 3ನೇ ವಾರ್ಡಿನ ಅಂಗನವಾಡಿ “ಕೆ” ಕೇಂದ್ರದಲ್ಲಿ ಲಸಿಕಾ ಕ್ಯಾಂಪ್ ಹಾಕಲಾಗಿ 112 ಜನರು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಸೋಮವಾರದಂದು ಶಾಸಕ ಎನ್ ವೈ ಗೋಪಾಲಕೃಷ್ಣ ಅಧಿಕಾರಿಗಳ ಸಭೆ ಕರೆದು ಕೋವಿಡ್ ನಿಯಂತ್ರಣದ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸುವಾಗ ಪಟ್ಟಣದಲ್ಲಿ ಕೋವಿಡ್ ಲಸಿಕೆ ಹಾಕಲು ಕೆಲವು ವಾರ್ಡ್ ಗಳಲ್ಲಿ ಈ ಹಿಂದೆ ಕ್ಯಾಂಪ್ ಮಾಡಿದಂತೆ ಎರಡನೇ ಲಸಿಕೆಗೂ ಹಾಕುವಂತೆ ಪಟ್ಟಣ ಪಂಚಾಯತಿ ಸದಸ್ಯರ ಮನವಿಗೆ ಸ್ಪಂದಿಸಿದ ಶಾಸಕರು ಮೌಖಿಕವಾಗಿ ಜನರಿಗೆ ಲಸಿಕೆ ಹಾಕುವಲ್ಲಿ ಮುಂದಾಗಿ ಎಂದು ತಿಳಿಸಿದಂತೆ ಆರೋಗ್ಯ ಇಲಾಖೆಯು ಮಂಗಳವಾರ ಪಟ್ಟಣದ 3ನೇ ವಾರ್ಡಿನ ಅಂಗನವಾಡಿ ಕೆ ಕೇಂದ್ರದ ಮುಂದೆ ಹಾಕಿದ್ದ ಕೋವಿಡ್ ಲಸಿಕಾ ಕ್ಯಾಂಪ್ ನಲ್ಲಿ 45ವರ್ಷ ಮೇಲ್ಪಟ್ಟವರು ಮೊದಲ ಡೋಸ್ ಮತ್ತು ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳುವಲ್ಲಿ ಮುಂದಾದರು ಹಾಗೂ ಶಿಕ್ಷಕರು ಮತ್ತು ಪೊಲೀಸ್ ಕುಟುಂಬ ಸಮೇತರಾಗಿ ಬಂದು ಕೋವಿಡ್ ಲಸಿಕೆ ಹಾಕಿಸಿಕೊಂಡರು. ಲಸಿಕಾ ಕ್ಯಾಂಪ್ ವೀಕ್ಷಿಸಿದ ಪ ಪಂ ಅಧ್ಯಕ್ಷೆ : ಪಟ್ಟಣದ 3ನೇ ವಾರ್ಡಿನ ಅಂಗನವಾಡಿ ಕೆ ಕೇಂದ್ರದ ಮುಂದೆ ಹಾಕಲಾದ ಕೋವಿಡ್ ಲಸಿಕಾ ಕ್ಯಾಂಪ್ ನತ್ತ ಕೂಡ್ಲಿಗಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಶಾರದಾಬಾಯಿ ಮತ್ತು ಪಟ್ಟಣ ಪಂಚಾಯತಿ ಸದಸ್ಯ ಕೆ ಹೆಚ್ ಎಂ ಸಚಿನಕುಮಾರ ಬೇಟಿ ನೀಡಿ ಪರಿಶೀಲನೆ ನಡೆಸಿ ವಾರ್ಡಿನ ಜನತೆ ಕೋವಿಡ್ ಲಸಿಕೆ ಹಾಕಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವಂತೆ ಜನತೆಗೆ ಲಸಿಕಾ ಮಹತ್ವವನ್ನು ತಿಳಿಸಿದರು ಬೇರೆ ವಾರ್ಡಿನಿಂದಲೂ ಲಸಿಕೆಯ ಮಹತ್ವ ಅರಿತ ಜನತೆ ಕ್ಯಾಂಪ್ ನತ್ತ ಬಂದು ಲಸಿಕೆ ಹಾಕಿಸಿಕೊಂಡು ಹೋದರು.
112ಜನಕ್ಕೆ ಕೋವಿಡ್ ಲಸಿಕೆ :-
ಮಂಗಳವಾರ 3ನೇ ವಾರ್ಡಿನ ಲಸಿಕಾ ಕ್ಯಾಂಪ್ ನಲ್ಲಿ ಆರೋಗ್ಯ ಇಲಾಖೆಯ ತಿಮಲಾಪುರ ಪಿ ಹೆಚ್ ಸಿ ಯ ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯರಾದ ಗಿರಿಜಾ, ಸುನೀತಾ, ಭವ್ಯ ಮತ್ತು ಪುರುಷ ಸ್ಟಾಫ್ ನರ್ಸ್ ಗಳಾದ ರಾಧಾಸ್ವಾಮಿ ಹಾಗೂ ಮಹೇಶ ಭಾಗವಹಿಸಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಬಂದವರ ಆಧಾರ್ ಕಾರ್ಡ್ ಮಾಹಿತಿ ಹಾಗೂ ಲಸಿಕಾ ನೊಂದಣಿ ಮತ್ತು ಲಸಿಕೆ ಹಾಕುವಲ್ಲಿ ಮುಂದಾಗಿದ್ದರು ಬೆಳಿಗ್ಗೆಯಿಂದ ಮದ್ಯಾಹ್ನ 3ಗಂಟೆ ಸುಮಾರಿಗೆ 112ಜನರು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆಂದು ತಿಳಿದಿದೆ.