ಕೋವಿಡ್ ಲಸಿಕೆ ಭಯವಿಲ್ಲದೇ ಪಡೆಯಿರಿ: ಹರ್ಷಾನಂದ ಗುತ್ತೇದಾರ

ಆಳಂದ:ಮಾ.24:ಕೋರೋನಾ ರೋಗಕ್ಕೆ ಭಾರತದಲ್ಲೇ ತಯಾರಿಸಿದ ಮದ್ದು ಇಂದು ಜಗತ್ತಿಗೆ ಜೀವರಕ್ಷಕವಾಗಿ ಕೆಲಸ ಮಾಡುತ್ತಿದೆ ಆದ್ದರಿಂದ ಎಲ್ಲರೂ ಯಾವುದೇ ಭಯವಿಲ್ಲದೇ ಲಸಿಕೆ ತೆಗೆದುಕೊಳ್ಳಲು ಮುಂದೆ ಬರಬೇಕು ಎಂದು ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ ಹೇಳಿದರು.

ಮಂಗಳವಾರ ಆಳಂದ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾರತೀಯ ಜನತಾ ಪಕ್ಷದ ಸಾಮಾಜಿಕ ಜಾಲತಾಣ ಮತ್ತು ಮಂಡಲ ಪದಾಧಿಕಾರಿಗಳ ವತಿಯಿಂದ ಹಮ್ಮಿಕೊಂಡಿದ್ದ ಕೋರೋನಾ ಲಸಿಕೆ ಕುರಿತು ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಲಸಿಕೆ ತೆಗೆದುಕೊಳ್ಳುವುದರ ಮೂಲಕ ಒಂದು ಐತಿಹಾಸಿಕ ನಡೆಗೆ ಮುನ್ನುಡಿ ಬರೆದಿದ್ದಾರೆ ಈಗ ಎರಡನೇ ಹಂತದಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡುವ ಆರೋಗ್ಯ ಕಾರ್ಯಕರ್ತರು ಹಾಗೂ 40 ವರ್ಷ ದಾಟಿದವರಿಗೆ ಲಸಿಕೆ ನೀಡಲಾಗುತ್ತಿದೆ ಎಂದರು.

ಲಸಿಕೆ ಬಗ್ಗೆ ಕೆಲವು ಕುತ್ಸಿತ ಮನೋಭಾವದ ವ್ಯಕ್ತಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಇದಕ್ಕೆ ಯಾರು ಕಿವಿಕೊಡಬಾರದು ಇಂತಹ ಸಮಯದಲ್ಲಿ ಭಾರತೀಯ ಜನತಾ ಪಕ್ಷದ ಸಾಮಾಜಿಕ ಜಾಲತಾಣ ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಆಡಳಿತ ವೈಧಾಧಿಕಾರಿ ಡಾ. ಚಂದ್ರಕಾಂತ ಮಂಡಲ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ, ಚಂದ್ರಕಾಂತ ಘೋಡಕೆ, ಪ್ರ. ಕಾರ್ಯದರ್ಶಿ ಪ್ರಕಾಶ ಮಾನೆ, ಶರಣು ಕುಮಸಿ, ಜಿಲ್ಲಾ ಸಾಮಾಜಿಕ ಜಾಲತಾಣ ಸಹ ಸಂಚಾಲಕ ವೈಜನಾಥ ಕುರಿಕೋಟಾ, ಯುವ ಮೋರ್ಚಾ ಅಧ್ಯಕ್ಷ ಕುಮಾರ ಬಂಡೆ, ಶರಣು ಲಾವಣಿ, ಲಕ್ಷ್ಮೀಪುತ್ರ ಹೇಮಾಜಿ, ಪಿಂಟು ಪಾಟೀಲ, ಸುಜ್ಞಾನಿ ಪೊದ್ದಾರ, ಗೌರಮ್ಮ ಸ್ವಾಮಿ, ಅಪರ್ಣಾ ಹೊದಲೂರಕರ್, ಲಲಿತಾ ಪೊದ್ದಾರ, ಶಿವಲೀಲಾ ಕಾಂಬಳೆ, ವಿರೇಶ ಸೋನಾರ, ಮಲ್ಲಿನಾಥ ಸಿಗರಕಂಟಿ, ಧರೇಪ್ಪ ಜಕಾಪೂರೆ ಸೇರಿದಂತೆ ಇತರರು ಇದ್ದರು.