ಕೋವಿಡ್ ಲಸಿಕೆ ಪಡೆಯಲು ಯುವಕರಿಗೆ ನಾಗರಾಜ ಸೀಳಿನ್ ಕರೆ

ಚಿಂಚೋಳಿ,ಮೇ.30- ಕೋವಿಡ ಸೋಂಕಿನ ಅಪಾಯವನ್ನು ತಡೆಗಟ್ಟಲು ಯುವಕು ಕಡ್ಡಾಯವಾಗಿ ಲಸಿಕೆಯನ್ನು ಪಡೆಯುವಂತೆ ತಾಲೂಕಿನ ಬಿಜೆಪಿ ಯುವ ಮೋರ್ಚಾದ ಮುಖಂಡರಾದ ನಾಗರಾಜ ಸೀಳಿನ್ ಅವರು ಕರೆ ನೀಡಿದ್ದಾರೆ.
ಕೋವಿಡ್ -19 ಎರಡನೆ ಅಲೆಯ ಸೋಂಕು ಹರಡುತ್ತಿದ್ದು, ಜನರಲ್ಲಿ ಆತಂಕ ಮೂಡಿದೆ ದೇಶದಲ್ಲಿ ವ್ಯಾಪಾಕವಾಗಿ ಹರಡುತ್ತಿರುವ ಕೊರೋನ ರೋಗ ತಡೆಗಟ್ಟಬೇಕಾದರೆ ಇಂದಿನ ಯುವಕರು ಲಸಿಕೆ ಪಡೆಯಬೇಕು ಮತ್ತು ಕೋವಿಡ ನಿಯಮ ಪಾಲಿಸಬೇಕು ಎಂದರು
18 ವರ್ಷದ ಮೇಲ್ಪಟ್ಟ ಎಲ್ಲರೂ ಕೋವಿಡ್ 19 ಲಸಿಕೆ ಹಾಕಿಸಿಕೊಳ್ಳಬೇಕು ಮತ್ತು ಕೋವಿಡ್-19 ಬಗ್ಗೆ ಭಯ ಬೇಡ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಕಡ್ಡಾಯವಾಗಿ ಮಾಸ್ಕ್ ಗಳನ್ನು ಧರಿಸಬೇಕು ಎಂದರು.
ಇಂದಿನ ಯುವಕರೇ ನಾಳಿನ ದೇಶದ ಪ್ರಜೆಗಳು ಎನ್ನುವಂತೆ ಚಿಂಚೋಳಿ ತಾಲೂಕಿನ ಎಲ್ಲ ಯುವಕರು ನಿರ್ಲಕ್ಷ್ಯ ಮಾಡದೆ ಕೋವಿಡ್ 19 ಲಸಿಕೆ ಕಡ್ಡಾಯವಾಗಿ ತೆಗೆದುಕೊಂಡು ಚಿಂಚೋಳಿ ತಾಲ್ಲೂಕು ಕೋವಿಡ್ ಮುಕ್ತ ಮಾಡಬೇಕೆಂದು ಕರೆ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಮತ್ತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಸಂಸದ ಡಾ ಉಮೇಶ್ ಜಾಧವ್. ಜಿಲ್ಲಾ ಉಸ್ತುವಾರಿ ಸಚಿವರಾದ ಮುರುಗೇಶ ನಿರಾಣಿ. ಚಿಂಚೋಳಿಯ ಶಾಸಕರಾದ ಡಾ. ಅವಿನಾಶ ಜಾಧವ ಅವರು ಕೊರೋನ ರೋಗ ತಡೆಯಲು ಹಗಲು ರಾತ್ರಿ ಶ್ರಮಿಸುತ್ತಿರುವ ಅವರಿಗೆ ಎಲ್ಲರೂ ಕೈಜೊಡಿಸಿ ಬೆಂಬಲ ನೀಡುವಂತೆ ಅವರು ಮನವಿ ಮಾಡಿದರು.