ಕೋವಿಡ್ ಲಸಿಕೆ ಪಡೆದ ಸ್ವಾಮೀಜಿ

ಸೇಡಂ,ಮಾ,22:ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಶ್ರೀ ಶಿವಶಂಕರ ಮಠದ ಪರಮಪೂಜ್ಯ ಶ್ರೀ ಶಿವಶಂಕರ ಶಿವಾಚಾರ್ಯರು ಹಾಗೂ ಹಾಲಪ್ಪಯ್ಯ ವಿರಕ್ತಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು ಬಂದು ಕೋವಿಡ್ ಲಸಿಕೆ ಪಡೆದರು.ಈ ವೇಳೆಯಲ್ಲಿ ಆಸ್ಪತ್ರೆಯ ಮೇಲ್ವಿಚಾರಕರಾದ ಡಾ. ಗೀತಾ ಪಾಟೀಲ್, ತಾಲೂಕಾ ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರಾದ ಶ್ರೀಮಂತ ಅವಂಟಿ ಸಿಬ್ಬಂದಿ ವರ್ಗದವರು ಇದ್ದರು.