ಕೋವಿಡ್ ಲಸಿಕೆ ಪಡೆದ ಜಿ.ಟಿ.ದೇವೇಗೌಡ ದಂಪತಿ

ಮೈಸೂರು,ಏ.26:- ರಾಜ್ಯದಲ್ಲಿ ಕೊರೋನಾ ವೈರಸ್ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಏತನ್ಮಧ್ಯೆ ಮೈಸೂರಿನ ಕಾಂಗರು ಆಸ್ಪತ್ರೆಯಲ್ಲಿ ಇಂದು ಶಾಸಕರಾದ ಜಿಟಿ ದೇವೇಗೌಡ ಮತ್ತವರ ಧರ್ಮಪತ್ನಿ ಲಲಿತಾ ಜಿ.ಟಿ.ದೇವೇಗೌಡ ಅವರು ಕೋವಿಡ್ ಲಸಿಕೆಯನ್ನು ಪಡೆದರು.
ಲಸಿಕೆ ಪಡೆದ ಬಳಿಕ ಮಾತನಾಡಿದ ಶಾಸಕರು 18 ವರ್ಷಕ್ಕಿಂತ ಮೇಲ್ಪಟ್ಟವರು ಮೇ ಒಂದರಿಂದ ಲಸಿಕೆಯನ್ನು ಕಡ್ಡಾಯವಾಗಿ ಪಡೆಯುವಂತೆ ಮನವಿ ಮಾಡಿದರು. ಈ ಕೊರೋನಾ ಸಮಯದಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಎಚ್ಚರಿಸಿದರು.