ಕೋವಿಡ್ ಲಸಿಕೆ ಪಡೆದು ಸೋಂಕು ಹರಡದಂತೆ ತಡೆಗಟ್ಟಲು ಸಾರ್ವಜನಿಕರು ಸಹಕರಿಸಬೇಕುಃ ಯತ್ನಾಳ

ವಿಜಯಪುರ, ಮೇ.3-ಸಾರ್ವಜನಿಕರು ಕರೋನ ಸೋಂಕು ಕುರಿತಂತೆ ಆತಂಕ ಪಡದೆ ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತವಾಗಿ ಆರ್.ಟಿ-ಪಿ.ಸಿ.ಆರ್ ಹಾಗೂ ಹೆಚ್.ಆರ್.ಸಿ.ಟಿ ಪರೀಕ್ಷೆ ಮಾಡಿಸಿಕೊಳ್ಳಿ, ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಿರಿ ಎಂದು ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ಅವರು ನಗರಾದ್ಯಂತ ಉಚಿತವಾಗಿ ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಮನೆ ಮನೆಗೆ ಲಸಿಕೆ ಹಾಕುವ ಕಾರ್ಯಕ್ರಮದಡಿ, ಉಚಿತ ಲಸಿಕೆ ಆಭಿಯಾನವನ್ನು ಹಮ್ಮಿಕೊಂಡಿದ್ದು, ಅದರಂತೆ ಇಂದು ವಾರ್ಡ ನಂ-35 ರಾಜಕುಮಾರ ಲೇಔಟ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಆವರಣ. ಹಾಗೂ ವಾರ್ಡ ನಂ-4, ಸರ್ಕಾರಿ ಶಾಲೆ ನಂ.51 ಭೂತನಾಳ ತಾಂಡಾದಲ್ಲಿ ಉಚಿತ ಕೋವಿಡ್ ಲಸಿಕೆ ಆಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರೋನ ಸೋಂಕು ಕುರಿತಂತೆ ಸಾರ್ವಜನಿಕರು ಆತಂಕ ಪಡಬಾರದು, ಕರೋನ ಲಿಸಿಕೆ ಬಗ್ಗೆ ಅಪಪ್ರಚಾರ ಸುಳ್ಳು ವದಂತಿ ಹಬ್ಬಿಸುತ್ತಿರುವವರ ಊಹಾಪೂಹಗಳನ್ನು ನಂಬಬಾರದು, ಕೋವಿಡ್ ಲಸಿಕೆ ಪಡೆದು ಸೋಂಕು ಹರಡದಂತೆ ತಡೆಗಟ್ಟಲು ಸಾರ್ವಜನಿಕರು ಸಹಕರಿಸಬೇಕು ಎಂದರು.
ಕರೋನ ವೈರಸ್ ಲಕ್ಷಣಗಳಾದ ತೀರ್ವ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಂಡುಬಂದರೆ ಸಮೀಪದ ಆರೋಗ್ಯ ಕೇಂದ್ರಗಳಿಗೆ ತೆರಳಿ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು, ಮುಂಜಾಗೃತಾ ದೃಷ್ಟಿಯಿಂದ ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರವನ್ನು ಬಳಸಿ, ಸಾರ್ವಜನಿಕ ಸ್ಥಳದಲ್ಲಿ ಉಗಳಬಾರದು, ಸಾಮಾಜಿಕ ಅಂತರ ಕಾದುಕೊಳ್ಳಿ, ಮಾಸ್ಕ ಧರಿಸಿ, ಕೈಗಳನ್ನು ಆಗಾಗ ಸೋಪಿನಿಂದ ತೊಳೆಯಿರಿ, ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. ರೋಗದ ಲಕ್ಷಣಗಳನ್ನು ಹೊಂದಿರುವವರು ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತವಾಗಿ ಆರ್.ಟಿ-ಪಿ.ಸಿ.ಆರ್ ಹಾಗೂ ಹೆಚ್.ಆರ್.ಸಿ.ಟಿ ಪರೀಕ್ಷೆ ಮಾಡಿಸಿಕೊಳ್ಳಿ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದರು.
ಕರೋನ ವಾರಿಯರ್ಸಗಳಾದ ವೈದ್ಯರು, ಸ್ವಚ್ಛತಾ ಕರ್ಮಿಗಳು, ಪೊಲೀಸ್ ಸಿಬ್ಬಂದಿಗಳನ್ನು ಗೌರವದಿಂದ ಕಾಣಿ, ಮಾಸ್ಕ್ ಧರಿಸದೆ ಅನಗತ್ಯವಾಗಿ ಹೊರಗಡೆ ತಿರಗುವದು ಹಾಗೂ ಕರೋನ ಮಾರ್ಗಸೂಚಿ ಮುರಿದು ಪೊಲೀಸ್ ಸಿಬ್ಬಂದಿಗಳೊಂದಿಗೆ ವಾದಕ್ಕಿಳಿಯದೇ ಎಲ್ಲರೂ ಸಹ ಜವಾಬ್ದಾರಿಯುತ ನಾಗರಿಕರಾಗಿ ನಡೆದುಕೊಳ್ಳಬೇಕು, ಸರಿಯಾದ ಕ್ರಮದಲ್ಲಿ ಮಾಸ್ಕ್ ಧರಿಸಬೇಕು, ದೈಹಿಕ ಅಂತರ ಕಾದುಕೊಳ್ಳಬೇಕು, ಕೇವಲ ವ್ಯವಸ್ಥೆಯನ್ನು ದೂರುವದಕ್ಕಿಂತ ಮೊದಲು ಜವಾಬ್ದಾರಿಯುತ ನಾಗರಿಕರಾಗಬೇಕು ಎಂದರು.
ಒಬ್ಬ ಜನಪ್ರತಿನಿಧಿಯಾಗಿ ನಾನು ನನ್ನ ಜವಾಬ್ದಾರಿಗಳನ್ನ ಮಾಡುತ್ತಿದ್ದೇನೆ, ಈ ಲಸಿಕೆ ಕಾರ್ಯಕ್ರಮಗಳನ್ನು ಯಶಶ್ವಿಯಾಗಿ ಮಾಡೋಣ, ಸಾರ್ವಕನಿಕರು ಸಹ ಈ ಕಾರ್ಯಕ್ಕೆ ಸಹಕಾರ ನೀಡಿ, ಈ ಮೂಲಕ ಕರೋನ ಮಹಾಮಾರಿಯನ್ನ ತಡೆಗಟ್ಟಿ ವಿಜಯಪುರ ನಗರವನ್ನು ರಾಜ್ಯಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಮಾದರಿಯಾಗಿ ಮಾಡೋಣ ಎಂದು ಹೇಳಿದರು.
ಈ ಕೋವಿಡ್ ಮಹಾಮಾರಿ ಎರಡನೇ ಅಲೆ ಅತ್ಯಂತ ಭಯಾನಕಾಗಿದೆ, ಮೂರನೇ ಅಲೆ ಬರುವದಕ್ಕಿಂತ ಮೊದಲು ನಾವೆಲ್ಲ ಜಾಗರೂಕರಾಗಿರಬೇಕು, ಎಚ್ಚರ ವಹಿಸಬೇಕು ಹೀಗಾಗಿ ಎಲ್ಲರು ತಪ್ಪದೆ ಲಸಿಕೆ ಹಾಕಿಸಿಕೊಳ್ಳಿ ಕೋವಿಡ್ ಮುಕ್ತ ವಿಜಯಪುರಕ್ಕೆ ಕೈ ಜೋಡಿಸುವಂತೆ ಕೇಳಿಕೊಮಡರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸಂಜಯ್ ಪಾಟೀಲ್ ಕನಮಡಿ, ಚಂದ್ರು ಚೌಧರಿ, ಸಂತೋಷ ಪಾಟೀಲ್, ಡಾ.ಜನ್ನತ್ ಮುಶ್ರಿಫ್, ಡಾ. ಉಮೇಶ ನಾಲಾ, ಚಿದಾನಂದ ಹಿರೇಮಠ, ಎಂ.ಎಸ್. ರುದ್ರಗೌಡ್ರ, ಆರ್.ಎಸ್.ಮನಗೂಳಿ, ಆರ್.ಎಸ್.ಕೋಳಿ, ರವಿ ದೇಶಪಾಂಡೆ, ರಾಜಶೇಖರ ಭಜಂತ್ರಿ, ನಾಗರಾಜ ಮುಳವಾಡ ಉಪಸ್ಥಿತರಿದ್ದರು.