ಕೋವಿಡ್ ಲಸಿಕೆ ಪಡೆದುಕೊಳ್ಳಿ

ಧಾರವಾಡ ಎ.28-ಜಾಗತಿಕ ಮಾಹಾಮಾರಿ ಕೊರೋನಾದ ಎರಡನೇ ಅಲೆಯ ಹಿನ್ನೆಲೆಯಲ್ಲಿ ಜನರು ಜಾಗೃತರಾಗಬೇಕು. ಎಲ್ಲರೂ ಕೋವಿಡ್ ಮೊದಲನೇ ಹಾಗೂ ಎರಡನೇ ಲಸಿಕೆಗಳನ್ನು ಪಡೆದುಕೊಂಡು ಸುರಕ್ಷಿತವಾಗಿರಬೇಕೆಂದು ಕೃವಿವಿ, ಧಾರವಾಡದ ಕುಲಪತಿಗಳಾದ ಡಾ. ಮಹಾದೇವ ಬ. ಚೆಟ್ಟಿ ವಿನಂತಿಸಿದರು.
ಅವರು ಕೃವಿವಿ ಧಾರವಾಡದ ಕೋವಿಡ್-19 ಲಸಿಕಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಲಸಿಕಾ ಕೇಂದ್ರದಲ್ಲಿ 150 ಜನರಿಗೆ ಲಸಿಕೆಯನ್ನು ನೀಡಲಾಯಿತು. ಈ ಕೇಂದ್ರದ ರೂವಾರಿಗಳಾದ ಕುಲಸಚಿವ ರಮೇಶ ದೇಸಾಯಿ ಇವರ ನೇತೃತ್ವದಲ್ಲಿ ಪ್ರಾರಂಭಿಸಲಾಯಿತು.
ಎಲ್ಲರು ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಲಾಯಿತು. ಪ್ರಾರಂಭದಲ್ಲಿ ಕುಲಪತಿ ಡಾ. ಎಮ್. ಬಿ. ಚೆಟ್ಟಿ ಕೇಂದ್ರದಲ್ಲಿ ಲಸಿಕೆಯನ್ನು ಪಡೆದರು. ಈ ಸಂದರ್ಭದಲ್ಲಿ ಕೃವಿವಿ, ಧಾರವಾಡದ ಅಧಿಕಾರಿಗಳು, ಪ್ರಾಧ್ಯಾಪಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.