ಕೋವಿಡ್ ಲಸಿಕೆ ಪಡೆದುಕೊಳ್ಳಿ: ಸಂತೋಷ ಶೆಟ್ಟಿ

ಹುಬ್ಬಳ್ಳಿ,ಮಾ30: ಜೆಂಟ್ಸ್ ಗ್ರೂಪ್ ಆಫ್ ಹುಬ್ಬಳ್ಳಿ ಮೆನ್ ಪರಿವಾರ, ವತಿಯಿಂದ ನಗರದ ವಿದ್ಯಾನಗರದ ಶಿವಲಿಲಾ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ, ಕೋವಿಡ್ ವ್ಯಾಕ್ಸಿನ್ ವಿತರಣೆ ಕಾರ್ಯಮದಲ್ಲಿ ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ಸಮಾಜ ಸೇವಕಾರಾದ ಸಂತೋಷ ಆರ್. ಶೆಟ್ಟಿ ಕೊವಿಡ್ 19 ಲಸಿಕೆ ಪಡೆದರು.
ನಂತರ ಮಾತನಾಡಿದ ಅವರು, ಈಗ ಮತ್ತೆ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಆದ ಕಾರಣ ಸರ್ಕಾರದ ಮಾರ್ಗ ಸೂಚಿಯಂತೆ ಪ್ರತಿಯೊಬ್ಬರು ಮಾಸ್ಕ್, ಮತ್ತು ಸಾಮಾಜಿಕ ಅಂತರವನ್ನು ಪಾಲನೆ ಮಾಡಬೇಕು. ಮತ್ತು ಕೋವಿಡ್ ವ್ಯಾಕ್ಸಿನ್ ಮೊದಲನೆ ಡೋಸ್ ಪಡೆದು, ಈ ಸಾಂಕ್ರಾಮಿಕ ರೋಗದ ವಿರುದ್ಧ ಭಾರತಕ್ಕೆ ಶಕ್ತಿ ನೀಡಿದ, ಅದ್ಭುತ ವೈದ್ಯಕೀಯ ವೃತ್ತಿಪರರು ಮತ್ತು ವಿಜ್ಞಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ವಿ.ಜಿ. ಪಾಟೀಲ್, ಶಾಂತಣ್ಣ ಕಡಿವಾಳ, ಸುನಂದಾ ಹೊಸಪೇಟೆ, ಅನೀಲ ಮಿಸ್ಕಿನ್, ಡಾ. ವಿ.ಎಮ್ ಹಿರೇಮಠ, ಜಾನ್ವಿಗೌಡಾ, ಡಾ. ಜಗದೀಶ್ ತುಬಚಿ, ದೀಪಕ ಕರ್ಜಗಿ, ವಿನೋದ ಆಲಾಡಿ, ಆಕಾಶ ಮಡ್ಡಳ್ಳಿ, ಹಾಗೂ ಉಪಸ್ಥಿತರಿದ್ದರು.