ಕೋವಿಡ್ ಲಸಿಕೆ ಪಡೆದುಕೊಳ್ಳಲು ಜಾಗೃತಿ ಕಾರ್ಯಕ್ರಮ

ಬೀದರ:ಎ.29: ತಾಲೂಕಿನ ಅಲಿಯಂಬರ ಗ್ರಾಮದಲ್ಲಿ ನೆಹರು ಯುವ ಕೇಂದ್ರ ಬೀದರ್ ಹಾಗೂ ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಯೂತ್ ಕ್ಲಬ್ ವತಿಯಿಂದ ಅಲ್ಲಿಯ ಜನರಲ್ಲಿ ವ್ಯಾಕ್ಸಿನ್ ಪಡೆಯಲು ಪ್ರೇರೆಪಿಸಲಾಯಿತು.

ಕಿಲ್ಲರ್ ಕೋವಿಡ್ ಮಹಾಮಾರಿಯ ಎರಡನೇ ಅಲೆಯಿಂದ ಪಾರಾಗಲು 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಕೋವ್ಯಾಕ್ಷಿನ್ ಅಥವಾ ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡು ಕೊರೋನಾದಿಂದ ಪಾರಾಗಲು ಮುಂದೆ ಬರುವಂತೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.

ಜೊತೆಗೆ ಮೇ.1ರಂದು 18 ವರ್ಷ ಮೇಲ್ಪಟ್ಟ ಎಲ್ಲರು ಲಸಿಕೆ ತೆಗೆದುಕೊಳ್ಳಬೇಕೆಂಬ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಅವರ ಹೆಸರು ಸ್ಥಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆಸರು ನೊಂದಣಿ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಲಾಯಿತು.

ಇದೇ ವೇಳೆ ಗ್ರಾಮದ ಹಿರಿಯರಲ್ಲಿ ತಿಳುವಳಿಕೆ ಮೂಡಿಸಿ ಪ್ರತಿಯೊಬ್ಬರು ಕೋವಿಡ್ ಲಸಿಕೆ ತೆಗೆದುಕೊಳ್ಳುವ ಮೂಲಕ ಕೊರೊನಾ ಬರದಂತೆ ತಡೆಯಲು ಶರೀರದಲ್ಲಿ ಶಕ್ತಿ ತಯ್ಯಾರಾಗುತ್ತದೆ. ಅದಕ್ಕಾಗಿ ಯಾವುದೇ ಸಂಕೋಚ ಪಡದೆ, ಯಾರ ಮಾತು ಕೇಳದೆ, ಅದರ ಬಗ್ಗೆ ತಾಸ್ಕಾರ ಮನೋಭಾವ ತಾಳಾದೆ ಕೋವಿಡ್ ಮೂಕ್ತ ಸಮಾಜಕ್ಕಾಗಿ ಪ್ರತಿಯೊಬ್ಬರು ವ್ಯಾಕ್ಸಿನ್ ಪಡೆಯಲು ಮುಂದೆ ಬರುವಂತೆ ಮಂಗಲಾ ಮಹಿಳಾ ಗ್ರಾಮೀಣಾಬೀವೃದ್ಧಿ ಸಂಸ್ಥೆಯ ಅಧ್ಯಕ್ಷರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕøತೆ ಕು.ಮಂಗಲಾ ಮರಖಲೆ ಹೇಳಿದರು.

ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ್ ಕೇಂದ್ರದ ಸಾಹಾಯಕಿ ಜ್ಯೋತಿ ಪಾಟೀಲ್, ಸಹಾಯಕ ರಮೇಶ ಡಿಕಲೆ, ಸಿಬ್ಬಂದಿಗಳಾದ ದೀಪಕ್ ಗದಾಗೆ, ರವಿ ಧೋಣೆ, ಯುವ ಸಂಘಧ ಪದಾಧಿಕಾರಿಗಳಾದ ಸಂಗಮೇಶ ಭಾವಿಧೋಡಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.