ಕೋವಿಡ್ ಲಸಿಕೆ ತಜ್ಞರ ಹೇಳಿಕೆ ಚರ್ಚೆಗೆ ಗ್ರಾಸ

ನ್ಯೂಯಾರ್ಕ್, ಏ. ೦೨: ಕೊರೊನಾ ವೈರಸ್ ವಿರುದ್ಧದ ಲಸಿಕೆ ಹಾಕಿಸಿಕೊಂಡರು ಮತ್ತೆ ಸೋಂಕಿಗೆ ಒಳಗಾಗುವುದಿಲ್ಲ ಅಥವಾ ಇತರರಿಗೂ ವೈರಸ್ ಹರಡುವುದಿಲ್ಲ ಎಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ನಿರ್ದೇಶಕ ಡಾ. ರೊಚೆಲ್ ವಾಲೆನ್ಸ್ಕಿ ನೀಡಿದ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ನಡುವೆಯೇ ತಮ್ಮ ಸಂಸ್ಥೆಯ ನಿರ್ದೇಶಕರು ನೀಡಿದ ಹೇಳಿಕೆಯನ್ನು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಸಂಸ್ಥೆ ಹಿಂದಕ್ಕೆ ಪಡೆದಿದೆ.
ಲಸಿಕೆ ಹಾಕದ ಜನರ ಬಳಿ ಕಡ್ಡಾಯವಾಗಿ ಮಾಸ್ಕ್ ಧರಿಸಿದೆ ಹೋಗಬಾರದು. ಲಸಿಕೆ ಹಾಕದ ಜನರ ಜತೆ ಬೆರೆಯಬಾರದು. ಸಂಪೂರ್ಣ ಲಸಿಕೆ ಪಡೆದವರಿಗೆ ಕೋವಿಡ್ ನಿಂದ ಮುಕ್ತರಾಗಬಹುದು. ಆದರೆ, ವೈರಸ್ ಅನ್ನು ಇತರರಿಗೆ ಹರಡಬಲ್ಲರೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಈ ಬಗ್ಗೆ ಪರೀಕ್ಷಾರ್ಥ- ಮೌಲ್ಯಮಾಪನ ಮುಂದುವರಿಸಲಾಗಿದೆ ಎಂದು ಹೇಳಿದೆ.
ಲಸಿಕೆ ಹಾಕಿಸಿಕೊಂಡವರಿಂದ ವೈರಸ್ ಹರಡಲು ಸಾಧ್ಯವಿಲ್ಲವೆಂದು ಹೇಳುವಷ್ಟು ಪ್ರಸ್ತುತ ಸಂಶೋಧನೆಗಳಲ್ಲಿ ಪ್ರಗತಿ ಕಂಡಿಲ್ಲ. “ಲಸಿಕೆ ಹಾಕಿಕೊಂಡವರಿಗೆ ಮತ್ತೆ ಸೋಂಕು ತಗಲುವುದು ಕಷ್ಟ, ಆದರೆ, ಅವರು ಮತ್ತೆ ಸೋಂಕಿಗೆ ಮುನ್ನಚ್ಚರಿಕೆ ವಹಿಸಬೇಕು. ಮುಖ್ಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯದ ಲಸಿಕೆ ಸಂಶೋಧನಾ ಕೇಂದ್ರದ ನಿರ್ದೇಶಕ ಪೌಲ್ ಡುಪ್ರೆಕ್ಸ್ ಹೇಳಿದ್ದಾರೆ.
ಎಂಎಸ್‌ಎನ್ ಬಿಎಸ್ ನ ರಾಚೆಲ್ ಮ್ಯಾಡೋವ್ ಟವಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ “ಕೋವಿಡ್ ಲಸಿಕೆ ಅತ್ಯುತ್ತಮವಾಗಿದ್ದು, ಎರಡು ಲಸಿಕೆಗಳ ಪೈಕಿ ಒಂದು ಡೋಸ್ ಶೇಕಡ ೮೦ರಷ್ಟು ಮತ್ತು ಫೈಜರ್-ಬಯೋಎನ್ ಟೆಕ್ ಲಸಿಕೆಯು ಶೇಕಡ ೯೦ರಷ್ಟು ಪರಿಣಾಮಕಾರಿ” ಎಂದು ಹೇಳಿದ್ದಾರೆ.

ಅಲ್ಲದೆ, “ ಲಸಿಕೆ ಹಾಕಿಕೊಂಡರಿಂದ ಕೋವಿಡ್ ಹರಡುತ್ತದೆ ಎನ್ನುವುದು ಅಸಂಭವ. ಡಾ. ಡಾ. ರೊಚೆಲ್ ವಾಲೆನ್ಸ್ಕಿ ನೀಡಿದ ಹೇಳಿಕೆ ಸಮಂಜಸವಾಗಿದೆ. ಲಸಿಕೆ ಸಂಪೂರ್ಣ ರಕ್ಷಣಾ ಪೂರ್ಣವಾಗಿದೆ. ಲಸಿಕೆ ಹಾಕಿಸಿಕೊಂಡವರಿಂದ ವೈರಸ್ ವರ್ಗಾವಣೆಯಾಗುವುದಿಲ್ಲ. ಇದು ಕೇವಲ ವೈದ್ಯಕೀಯ ಪ್ರಯೋಗಗಳಲ್ಲಿ ಮಾತ್ರವಲ್ಲ, ಇದು ನೈಜ ಜಗತ್ತಿನ ದತ್ತಾಂಶದಲ್ಲೂ ಇದೆ ” ರಾಚೆಲ್ ಮ್ಯಾಡೋವ್ ಹೇಳಿದ್ದಾರೆ.

ಆದರೂ, ಕೋವಿಡ್ ಲಸಿಕೆಗಳು ಸೋಂಕು ಅಥವಾ ಹರಡುವಿಕೆ ವಿರುದ್ಧ ಸಂಪೂರ್ಣ ರಕ್ಷಣೆಯನ್ನು ಒದಗಿಸುತ್ತವೆ ಎಂದು ಹಲವು ಸಂಶೋಧಕರು ಹೇಳಿದ್ದಾರೆ. ಈ ನಡುವೆಯೇ ಈಗಾಗಲೇ ಶೇಕಡ ೩೦ ರಷ್ಟು ಅಮೆರಿಕನ್ನರು ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಎರಡನೇ ಡೋಸ್ ಲಸಿಕೆಯನ್ನು ಶೇಕಡ ೧೭% ರಷ್ಟು ಮಂದಿ ಪಡೆದಿದ್ದಾರೆ.