ಕೋವಿಡ್ ಲಸಿಕೆ ಜಾಗೃತಿ ಕಾರ್ಯಕ್ರಮ

ಬೀದರ:ಜೂ.7: ನಗರದ ಕುಂಬಾರವಾಡಾ ಏರಿಯಾದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪುಟ್ಟಪರ್ತಿ ಬಾಬಾ ಏಜ್ಯುಕೇಶನ್ ಸೊಸೈಟಿ ಅಡಿಯಲ್ಲಿ ನಡೆಯುತ್ತಿರುವ ಪ್ರಗತಿ ಆಯುರ್ವೇದ ಮತ್ತು ಪಂಚಕರ್ಮ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಇತ್ತಿಚೀಗೆ ನಗರದ ಸಾರ್ವಜನಿಕರು ಹೆಚ್ಚಿನ ಕೋವಿಡ್ ಲಸಿಕೆ ಪಡೆಯುವ ಮೂಲಕ ಕೋವಿಡ್ ಮಹಾಮಾರಿಯಿಂದ ಪಾರಾಗಬೇಕೆನ್ನುವ ಸದುದ್ದೇಶದಿಂದ ಜಾಗೃತಿ ಮೂಡಿಸಲಾಯಿತು.

ಪುಟ್ಟಪರ್ತಿ ಬಾಬಾ ಏಜ್ಯುಕೇಶನ್ ಸೂಸೈಟಿ ಅಧ್ಯಕ್ಷೆ ಡಾ.ಸುಜಾತಾ ಹೊಸಮನಿ ಲಸಿಕೆ ಕುರಿತ ಜಾಗೃತಿ ಮೂಡಿಸಿ ಮಾತನಾಡಿ, ನಮ್ಮ ದೇಶದಲ್ಲಿ ಎರಡು ರೀತಿಯ ಲಸಿಕೆಗಳು ನೀಡುತ್ತಿದ್ದು, ಅವೇರಡು ಅಷ್ಟೇ ಶಕ್ತಿಶಾಲಿಯಾಗಿವೆ. ಅವೆರಡರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಕೋವ್ಯಾಕ್ಷಿನ್ ಮಾತ್ರ 6 ವಾರಗಳ ಒಳಗಾಗಿ ಎರಡನೇ ಲಸಿಕೆ ಪಡೆಯಬೇಕು. ಕೋವಿಶೀಲ್ಡ್ ಮಾತ್ರ 14 ವಾರಗಳ ಒಳಗಾಗಿ ಪಡೆಯಬೇಕು. ಇವೆರಡು ಕೋವಿಡ್ ತಡೆಯಲು ಶೇಕಡಾ 80ಕ್ಕೂ ಅಧಿಕ ಪ್ರಮಾಣದಲ್ಲಿ ಕಾರ್ಯ ಮಾಡಲಿವೆ. ಅದಕ್ಕಾಗಿ ಕೋವಿಡ್ ಮುಕ್ತ ಭಾರತಕ್ಕೆ ಎಲ್ಲರು ಕೈಜೋಡಿಸುವ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಡಾ.ದಿವ್ಯಾ, ಔಷಧ ವೊಭಾಗದ ಶೇಖ್ ಅಬ್ದುಲ್ ಸೇರಿದಂತೆ ಇತರೆ ಸಿಬ್ಬಂದಿಗಳು ಹಾಗೂ ಹಲವಾರು ಲಸಿಕೆ ಪಡೆಯಲು ಬಂದ ಸಾರ್ವಜನಿಕರು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.