ಕೋವಿಡ್ ಲಸಿಕೆ ಆಂತಕ ಬೇಡ. ಎಲ್ಲರೂ ಕೋವಿಡ್ ಲಸಿಕೆ ಪಡೆಯಿರಿ

ಅರಕೇರಾ.ಏ.೦೯-ಮಾರಕ ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಆರಂಬಿಸುವ ಕೋವಿಡ್ ಲಸಿಕೆ ಪಡೆಯಲು ಆಸ್ಪತ್ರೆಗೆ ಹೋಗಿ ಲಸಿಕೆ ಪಡೆಯಲು ನೊಂದಾಣಿ ಮಾಡಿಕೊಂಡು ಪತ್ರಿಯೊಬ್ಬರು ಲಸಿಕೆಯನ್ನು ಪಡೆದುಕೊಳ್ಳಬೇಕೆಂದು ಕೆ.ಅನಂತರಾಜನಾಯಕ ಮನವಿ ಮಾಡಿಕೊಂಡರು
ಅವರು ಅರಕೇರಾ ಗ್ರಾಮದಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ -೧೯ ವ್ಯಾಕ್ಸೀನ್ ಲಸಿಕಾಕರಣ ಮತ್ತು ಪರೀಕ್ಷೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ನಮ್ಮ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿಬರುವ ಹಳ್ಳಿಗಳ ಸಾರ್ವಜನಿಕರು ಕೋವಿಡ್ ೧೯ ಲಸಿಕೆ ನೀಡುವ ಗುರಿಯಲ್ಲಿ ಹಿನ್ನಡೆಯಾದ ಪ್ರಯುಕ್ತ ನಾವೆಲ್ಲರೂ ಲಸಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಅವರಿಗೆ ಲಸಿಕೆ ಹಾಕಿಸಲು ಪ್ರತಿಯೊಬ್ಬರು ಸಹಕರಿಸಿ ನೀಡಿರುವ ಗುರಿಯನ್ನು ಸಾಧಿಸಲು ಜನಪ್ರತಿನಿಧಿಗಳು ಗ್ರಾಮ ಪಂಚಾಯತ ಸರ್ವ ಸದಸ್ಯರುಗಳು ಆಶಾಕಾರ್ಯಕರ್ತೆಯರು ಅಂಗನವಾಡಿಕಾರ್ಯಕರ್ತೆರು ಸ್ಥಳಿಯ ಖಾಸಗಿ ವೈದ್ಯಾಧಿಕಾರಿಗಳು ಮತ್ತು ಸಾರ್ವಜನಿಕರು ಎಲ್ಲರೂ ಸಹಕಾರದೊಂದಿಗೆ ಕೂಡಿಕೊಂಡು ಪ್ರತಿ ಮನೆಗೆ ತೆರಳಿ ೪೫ ವಯಸ್ಸಿನಿಂದ ೬೦ಕ್ಕೂ ಹೆಚ್ಚು ಇರುವ ಪ್ರತಿಯೊಬ್ಬರಿಗೂ ಲಸಿಕೆಯನ್ನು ಕೊಡಿಸಲು ಪಣತೊಡೊಣ ಎಂದು ಹೇಳಿದರು.
ಪತ್ರಿಯೊಬ್ಬರು ಲಸಿಕೆ ಪಡೆದುಕೊಳ್ಳಬೇಕು ಯಾರು ಈ ಲಸಿಕೆಯ ಬಗ್ಗೆ ಆತಂಕಪಡುವ ಆಗತ್ಯವಿಲ್ಲಾ ಸರಕಾರ ಉಚಿತವಾಗಿ ಲಸಿಕೆ ನೀಡುತ್ತಿದ್ದು ಇದರ ಸದುಪಯೋಗ ಪಡೆಯುವಂತೆ ಬಿಜೆಪಿಯ ಹಿರಿಯ ಮುಖಂಡರಾದ ಕೆ.ಅನಂತರಾಜನಾಯಕ ಸಾರ್ವಜನಿಕರಿಗೆ ಮನವಿಮಾಡಿದರು.
ರಾಯಚೂರು ರೀಮ್ಸ್ ವೈದ್ಯಕೀಯ ಮಂಡಳಿಯ ಸದಸ್ಯರಾದ ಡಾ.ಎಚ್. ಎ.ನಾಡಗೌಡ, ಮಾತನಾಡಿ ಮತ್ತೇರಾಜ್ಯದಲ್ಲಿ ಕೊರಾನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುದು ಹಾಗೂ ಸಾರ್ವಜನಿಕರು ನಮ್ಮಖಾಸಗಿ ಕ್ಲಿನಿಕೆ ಬರುವವರಿಗೆ ಎಲ್ಲರಿಗೂ ಮಾಹಿತಿನೀಡಿ ಲಸಿಕೆ ಪಡೆಲುತಿಳಿಸುವುದಾಗಿ ಹೇಳಿದರು ಹಿನ್ನೆಯಲ್ಲಿ ಎಲ್ಲಾರೂ ಕೋರಾನಾ ನಿಯಮಗಳನ್ನು ಪಾಲಿಸಬೇಕು ಪ್ರತಿಯೊಬ್ಬರು ಮಾಸ್ಕ್ ಧರಿಸುವಂತೆ ಇದೇ ಸಂದರ್ಭದಲ್ಲಿ ಮನವಿಮಾಡಿಕೊಂಡರು.
ಈ ಸಂದರ್ಭದಲ್ಲಿ ಆರೋಗ್ಯ ಸಮಿತಿಯ ಸದ್ಯಸರುಗಳಾದ ಚಂದ್ರಶೇಖರನಾಯಕ ಬದ್ರಿ, ರೈಮಾನಸಾಬ ಜಾನಿ, ಡಾ. ಶಿವುಕುಮಾರ, ಡಾ. ರಾಜೇಶ್ವರಿ, ಡಾ.ಕೆ. ಶೃತಿ, ಡಾ.ಸಂಜಯಬಾವಿಕಟ್ಟಿ, ಡಾ.ರಾಘವೇಂದ್ರವಡಿಗೇರಾ, ಡಾ.ಭಾರತಿ, ಯಮನಪ, ಕುಂಬಾರ ಗ್ರಾಮಪಂಚಾಯತ ಬಿಲ್‌ಕಲ್ಟೇರ್ ಮಲ್ಲಿಕಾರ್ಜುನ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ಚಿತ್ರಸುದ್ದಿ ಸಂಖ್ಯೆ ೮ ಅರಕೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್-೧೯ ವ್ಯಾಕ್ಸೀನ್ ಲಸಿಕಾಕರಣ ಮತ್ತು ಪರೀಕ್ಷೆಯ ಪೂರ್ವಭಾವಿ ಸಭೆ ಜರುಗಿತು.