ಕೋವಿಡ್ ಲಸಿಕೆ ಅಭಿಯಾನ

ಧಾರವಾಡ,ಏ5: ಇಲ್ಲಿಗೆ ಸಮೀಪದ ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ಅಮ್ಮಿನಬಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಕೋವಿಡ್-19 ನಿವಾರಣಾ ಲಸಿಕೆ ಚುಚ್ಚುಮದ್ದು ನೀಡಿಕೆ ಅಭಿಯಾನ ಜರುಗಿತು.
ಅಭಿಯಾನದಲ್ಲಿ ಒಟ್ಟು 108 ಜನರಿಗೆ ಕೋವಿಡ್-19 ನಿವಾರಣಾ ಚುಚ್ಚುಮದ್ದು ನೀಡಲಾಯಿತು. ಹಾರೋಬೆಳವಡಿ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ತಳವಾರ, ಉಪಾಧ್ಯಕ್ಷ ವೀರೇಶ ಕನಾಜಿ, ಸಂತೋಷಗೌಡ ಪಾಟೀಲ, ಮಹಾಂತೇಶ ಭಂಗಿ, ಶಿವಪುತ್ರಪ್ಪ ಬೆಟಗೇರಿ, ಬಸಪ್ಪ ಕನಾಜಿ, ಹಲವಾರು ಗ್ರಾ.ಪಂ. ಸದಸ್ಯರು ಈ ಜನಪರ ಅಭಿಯಾನಕ್ಕೆ ಸಹಕರಿಸಿದರು.
ಅಮ್ಮಿನಬಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಬೀನಾ ಶೂರಪಾಲಿ, ಆರೋಗ್ಯ ಕಾರ್ಯಕರ್ತ ಗಂಗಾಧರ ಆವಾರಿ, ಎಚ್.ಜಿ.ಲತಾ, ವಜ್ರೇಶ್ವರಿ ಔಂದಕರ, ಆಶಾ ಕಾರ್ಯಕರ್ತೆ ಪ್ರೇಮಾ ಕಬ್ಬೂರ, ನಂದಾ ದೊಡಮನಿ, ಯಲ್ಲವ್ವ ಭೋವಿ ಕೋವಿಡ್-19 ನಿವಾರಣಾ ಲಸಿಕೆ ನೀಡಿಕೆ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.