ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ

ವಿಜಯಪುರ, ಜೂ.9-ನಗರ ಶಾಸಕ ಬಸನಗೌಡ ರಾ. ಪಾಟೀಲ್ ಯತ್ನಾಳರವರು ನಗರಾದ್ಯಂತ ಉಚಿತವಾಗಿ ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಮನೆ ಮನೆಗೆ ಲಸಿಕೆ ಹಾಕುವ ಕಾರ್ಯಕ್ರಮದಡಿ, ಉಚಿತ ಲಸಿಕೆ ಆಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಅದರಂತೆ ಇಂದು ವಾರ್ಡ ನಂ.4 ರ ಸುಕುನ್ ಕಾಲೋನಿಯ ಶ್ರೀಗಣಪತಿ ಗುಡಿ ಆವರಣ ಹಾಗೂ ವಾರ್ಡ ನಂ.18 ರ ಹರಣಶಿಕಾರಿ ಓಣಿಯಲ್ಲಿ ಹಮ್ಮಿಕೊಂಡಂತ ಉಚಿತ ಲಸಿಕಾ ಅಭಿಯಾನಕ್ಕೆ ನಗರ ಶಾಸಕರ ಅನುಪಸ್ಥಿತಿಯಲ್ಲಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಉಚಿತ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಲಕ್ಷ್ಮಣ ಜಾಧವ್, ಪಾಲಿಕೆ ಮಾಜಿ ಸದಸ್ಯರಾದ ಅಶೋಕ ಬೆಲ್ಲದ, ಆರೋಗ್ಯಾಧಿಕಾರಿಗಳಾದ ಡಾ.ಕೇಸರಸಿಂಗ್ ಗುಂಡಬಾವಡಿ, ಮುಖಂಡರಾದ ಚಂದ್ರು ಚೌಧರಿ, ಬಸವರಾಜ ಗೊಳಸಂಗಿ, ಅಮಿತ್ ಬಿರಾದಾರ, ಪ್ರಕಾಶ ಸಿದ್ದಾಪೂರ, ವಿಜಯಕುಮಾರ ಕೊರಗುಟಗಿ, ಪ್ರಮೋದ ಬೋಸ್ಲೆ, ಶರಣು ಮಸೂತಿ ಉಪಸ್ಥಿತರಿದ್ದರು.