
ನವದೆಹಲಿ,ಸೆ.4- ಕೋವಿಡ್-19 ಲಸಿಕೆ ಹೃದಯಾಘಾತದ ಅಪಾಯ ಹೆಚ್ಚಿಸುವುದಿಲ್ಲ ಎನ್ನುವ ವಿಷಯವನ್ನು ಅಧ್ಯಯನ ಹೊರಹಾಕಿದೆ.
2021 ಆಗಸ್ಟ್ ಮತ್ತು 2022ರ ಆಗಸ್ಟ್ ನಡುವೆ ದೆಹಲಿಯ ಜಿ ಬಿ ಪಂತ್ ಆಸ್ಪತ್ರೆಗೆ ದಾಖಲಾದ 1,578 ಹೃದಯಾಘಾತ ರೋಗಿಗಳ ಪ್ರಕರಣದ ಇತಿಹಾಸ ವಿಶ್ಲೇಷಣೆ ಮಾಡಿ ಈ ವಿಷಯವನ್ನು ಹೊರಹಾಕಿದೆ.
ಡಾ ಮೋಹಿತ್ ಗುಪ್ತಾ ನೇತೃತ್ವದ ತಂಡ,, ಒಟ್ಟು1,086 ರೋಗಿಗಳಲ್ಲಿ ಶೇ 69ರಷ್ಟು ಮಂದಿಗೆ ಲಸಿಕೆ ನೀಡಲಾಯಿತು ಮತ್ತು 492 ಪ್ರಕರಣಗಳಲ್ಲಿ ಶೇ 31 ರಷ್ಟು ಮಂದಿಗೆ ಲಸಿಕೆ ಹಾಕಿರಲಿಲ್ಲ.ಇದರ ಆಧಾರದ ಮೇಲೆ ಅಧ್ಯಯನ ನಡೆಸಿ ಮಾಹಿತಿ ಹೊರಹಾಕಲಾಗಿದೆ.
ಲಸಿಕೆ ಪಡೆದ ಗುಂಪಿನಲ್ಲಿ, 1,047 ಮಂದಿ ಅಂದರೆ ಶೇಕಡಾ 96 ಮಂದಿ ಎರಡು ಡೋಸ್ ಲಸಿಕೆ ಪಡೆದಿದ್ದರೆ 39 ಮಂದಿ ಅಂದರೆ ಶೇ. 4 ರಷ್ಟು ಒಂದೇ ಡೋಸ್ ಲಸಿಕೆ ಮಾತ್ರ ಪಡೆದಿದ್ದರು ಎಂದು ಅಧ್ಯಯನ ತಿಳಿಸಿದೆ
ಲಸಿಕೆ ನಂತರ ಹೃದಯಾಘಾತದ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.
“ಒಟ್ಟು 185 ಮಂದಿಯನ್ನು ಅಂದರೆ ಶೇಕಡಾ 12 ರಷ್ಟು ಮಂದಿ ಹೃದಯಕ್ಕೆ ರಕ್ತವನ್ನು ಪೂರೈಸುವ ಅಪಧಮನಿಗಳ ಭಾಗಶಃ ಅಥವಾ ಸಂಪೂರ್ಣ ತಡೆಗಟ್ಟುವಿಕೆಯಿಂದ ಉಂಟಾಗುವ ಹೃದಯಾಘಾತ ಉಂಟಾಗಿದ್ದನ್ನು ಪತ್ತೆ ಮಾಡಿತ್ತು ಎಂದು ತಿಳಿಸಲಾಗಿದೆ.
ಮೊದಲ 30 ದಿನಗಳಲ್ಲಿ ಕೇವಲ 28 ಮಂದಿಯಲ್ಲಿ ಹೃದಯಾಘಾತ ಪ್ರಕರಣಗಳು ಸಂಭವಿಸಿವೆ,” ಎಂದು ತಜ್ಞರು ಹೇಳಿದ್ದಾರೆ.
ಹೃದಯಾಘಾತದಿಂದ ಬಳಲುತ್ತಿರುವ 1,578 ರೋಗಿಗಳಲ್ಲಿ ಅಕ್ಯೂಟ್ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಕಾಣಿಸಿಕೊಂಡಿದೆ., 30-ದಿನಗಳಲ್ಲಿ 13 ಮಂದಿಯಲ್ಲಿ ಸಾವು ಸಂಭವಿಸಿದೆ ರಲ್ಲಿ ಸಂಭವಿಸಿದೆ ಸಂಶೋಧಕ ಡಾ. ಮೋಹಿತ್ ಗುಪ್ತ ತಿಳಿಸಿದ್ದಾರೆ..
ಹೃದ್ರೋಗಶಾಸ್ತ್ರಜ್ಞರು ಎರಡೂ ಗುಂಪುಗಳಲ್ಲಿ ಮೊದಲೇ ಅಸ್ತಿತ್ವದಲ್ಲಿರುವ ಅಪಾಯಕಾರಿ ಅಂಶಗಳ ವಿರುದ್ಧ ಸಂಭವವನ್ನು ಸರಿಹೊಂದಿಸಿದಾಗ, ಲಸಿಕೆ ಹಾಕಿದ ಜನಸಂಖ್ಯೆಯಲ್ಲಿ 30- ದಿನದ ನಡುವೆ ಸಾವಿನ ಲಕ್ಷಣ ಕಂಡು ಬಂದಿದ್ದವು ಎಂದು ಹೇಳಿದೆ.
“ವ್ಯತಿರಿಕ್ತವಾಗಿ, ಹೆಚ್ಚುತ್ತಿರುವ ವಯಸ್ಸು, ಮಧುಮೇಹಿಗಳು ಮತ್ತು ಧೂಮಪಾನಿಗಳಲ್ಲಿ ಹೃದಯಾಘಾತ ಹೆಚ್ಚಾಗಿತ್ತಿ ಎಂದು ತಿಳಿಸಿದ್ದಾರೆ.
30 ದಿನಗಳಿಂದ ಆರು ತಿಂಗಳ ಅವಧಿಯಲ್ಲಿ, 75 ರೋಗಿಗಳು ಸಾವನ್ನಪ್ಪಿದರು, ಅವರಲ್ಲಿ ಶೇ. 43.7 ರಷ್ಟು ಮಂದಿ ಲಸಿಕೆ ಹಾಕಲಾಗಿತ್ತು ಎಂದು ತಿಳಿಸಿದ್ದಾರೆ.