ಕೋವಿಡ್ ಲಸಿಕೆಯಿಂದ ಹಾನಿಯಿಲ್ಲ,ಭಯಬೇಡ: ಶ್ರೀಪತಿಗೌಡ

ಇಂಡಿ :ಎ.6:ಕೋವಿಡ್ ಲಸಿಕೆಯಿಂದ ಯಾವುದೇ ಹಾನಿ ಇರುವುದಿಲ್ಲ.ಸಾರ್ವಜನಿಕರು ಭಯಪಟ್ಟುಕೊಳ್ಳಬಾರದು. ಕೋವಿಡ್-19 2 ನೇ ಅಲೆಯಿಂದ ಎಚ್ಚರಿಕೆಯಿಂದ ಇರಬೇಕು. ಸಾಮಾಜಿಕ ಅಂತರ,ಮಾಸ್ಕ,ಸ್ಯಾನಿಟೈಜರ ಬಳಕೆ ಮಾಡಿಕೊಂಡು ಕೊರೋನಾದಿಂದ ದೂರ ಇರಬೇಕು ಎಂದು ಉದ್ದೀಮೆದಾರ ಶ್ರೀಪತಿಗೌಡ ಬಿರಾದಾರ ಹೇಳಿದರು.

ಅವರು ಸೋಮವಾರ ಕೋವಿಡ್ ಲಸಿಕೆ ಹಾಕಿಸಿಕೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಗತ್ತಿನ ಯಾವ ದೇಶವೂ ಕೊರೋನಾ ಲಸಿಕೆ ಕಂಡು ಹಿಡಿಯುವಲ್ಲಿ ಹಿಂದೆ ಬಿದ್ದಿವೆ. ಆದರೆ ನರೇಂದ್ರ ಮೋದಿ ಅವರ ನೇತ್ರತ್ವದಲ್ಲಿ ದೇಶದ ವಿಜ್ಞಾನಿಗಳು ಎಲ್ಲ ದೇಶಗಳಿಗಿಂತ ಮುಂಚೆ ಲಸಿಕೆ ಕಂಡು ಹಿಡಿದು ದೇಶದ ಕೀರ್ತಿ ಬೆಳಗಿಸಿದ್ದಾರೆ.ಹೀಗಾಗಿ ಪ್ರತಿಯೊಬ್ಬರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಹೇಳಿದರು.