ಕೋವಿಡ್ ಲಸಿಕೆಗೆ ಡಂಗೂರ ಸಾರದ ಈಚನಾಳ ಪಿಡಿಓ

ಅಸಮಾಧಾನ ಹೊರಹಾಕಿದ ಆಶಾ ಕಾರ್ಯಕರ್ತೆಯರು
ಲಿಂಗಸುಗೂರು.ಮಾ.೩೧-ತಾಲೂಕಿನ ಈಚನಾಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೋವಿಡ್ ೧೯ ಲಸಿಕೆಗಳನ್ನು ಗ್ರಾಮದಲ್ಲಿ ಮೊದಲೇ ಸಾರ್ವಜನಿಕರಿಗೆ ಮಾಹಿತಿ ನೀಡಬೇಕಾದರೆ ಸರ್ಕಾರದ ನಿಯಮ ಪ್ರಕಾರ ಡಂಗೂರ ಸಾರಬೇಕು. ಆದರೆ ಗ್ರಾಮದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಗ್ರಾಮದ ಜನರು ಹಾಗೂ ಆಶಾ ಕಾರ್ಯಕರ್ತೆಯರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಇಲ್ಲಿ ಮಾತ್ರ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ವಿಧದ ಕಾಮಗಾರಿ ಪರಿಶೀಲನೆ ಮತ್ತು ನರೇಗಾ ಯೋಜನೆ ಅಡಿಯಲ್ಲಿ ಮಾಡಿದ ಕಾಮಗಾರಿ ಪರಿಶೀಲನೆ ಹಾಗೂ ಸರ್ಕಾರದಿಂದ ಅನೇಕ ಯೋಜನೆಗಳನ್ನು ರೂಪಿಸುವುದು ಪ್ರತಿಯೊಂದು ಹಂತದಲ್ಲೂ ಹಣ ಕೊಟ್ಟರೆ ಮಾತ್ರವೇ ಕಾಮಗಾರಿ ಅನುಮತಿ ನಿಡುತ್ತಾರೆ.
ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇನ್ನು ಗ್ರಾಮ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೂಂದುಡಿದ ನರೇಗಾ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮ ಸಭಾ.
೨೦೨೦-೨೦೨೧ ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ ನಡೆಯುವ ಕುರಿತು ಗ್ರಾಮ ಪಂಚಾಯತ್ ಪಿಡಿಒ ಅಧಿಕಾರಿಗಳು ನರೇಗಾ ಕಾರ್ಮಿಕರಿಗೆ ಮಾಹಿತಿ ನೀಡದೇ ಇದ್ದ ಕಾರಣಕ್ಕೆ ಇಂದು ಗ್ರಾಮ ಸಭೆಗೇ ಒಬ್ಬ ಮಹಿಳಾ ಕಾರ್ಮಿಕರು ಹಾಜರಿದ್ದಿಲ್ಲ, ಜೆಇ ಕೂಡ ಈ ಗ್ರಾಮ ಸಭೆಗೇ ಗೈರು ಹಾಜರಾಗಿದ್ದ ಕಾರಣಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಇಂದಿಗೆ ೧೭ ನೇ ದಿನ ಈಚನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ -೧೯ ವ್ಯಾಕ್ಸಿನ್ ಲಸಿಕೆ ನೀಡಿತ್ತಿದ್ದೂ ಈ ಕುರಿತು ಒಂದೇ ಒಂದು ಗ್ರಾಮ ಸಭೆ ಮಾಡದೇ ಸಾರ್ವಜನಿಕರಿಗೇ ಮಾಹಿತಿ ನೀಡಲು ಆಶಾ ಕಾರ್ಯಕರ್ತೆಯರ ಜೊತೆ ಸಹಕರಿಸದಿದ್ಧಕ್ಕೆ ಆಶಾ ಕಾರ್ಯಕರ್ತೆಯರು ಅಸಮಾಧಾನ ವ್ಯಕ್ತಪಡಿಸಿದರು. ದಿನಾಂಕ , ೫-೦೪-೨೦೨೧ ರಂದು ನರೇಗಾ ಲೆಕ್ಕ ಪರಿಶೋಧನೆ ಗ್ರಾಮ ಸಭೆ ನಡೆಸಲು ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆದಪ್ಪ ಎನ್.ಮೇಟಿ, ಗ್ರಾಮ ಪಂಚಾಯತ್ ಸದಸ್ಯರಾದ ಮರಿಯಪ್ಪ ಕಟ್ಟಿಮನಿ, ಅಮರಪ್ಪ, ಖೇಮಪ್ಫ, ಮೊತೆಪ್ಫ, ಹನುಮಪ್ಪ, ಲೋಕೇಶ್, ಪಿಡಿಒ ಖಾಜಾ ಬೇಗಂ, ಸಾಮಾಜಿಕ ಲೆಕ್ಕ ಪರಿಶೋಧನೆ ವಿಭಾಗದ ಜಿಲ್ಲಾ ಸಂಯೋಜಕರಾದ ಬಸವರಾಜ ನಾಗೋಲಿ, ತಾಪಂ ಯೋಜನಾಧಿಕಾರಿಗಳಾದ ಮೆಹೆಬೂಬ್ ಸಾಬ್, ತಾಲೂಕಾ ಸಂಯೋಜಕರಾದ ಚಂದ್ರಶೇಖರ್ ಪವಾರ್ ಸೇರಿದಂತೆ ಇನ್ನಿತರು ಇದ್ದರು.