ಕೋವಿಡ್ ಲಸಿಕಾ ಅಭಿಯಾನ ಜಾಗೃತಿ

ಹುಬ್ಬಳ್ಳಿ ಏ 9 : ಸಿವಿಲ್ ಡಿಪೆನ್ಸ ಹುಬ್ಬಳ್ಳಿ ಧಾರವಾಡ ಹಾಗೂ ಧಾರವಾಡ ಕೈಗಾರಿಕಾ ಅಭಿವೃಧಿ ಕೇಂದ್ರ ಬೇಲೂರ, ಜಿಲ್ಲಾ ಆರೋಗ್ಯ ಇಲಾಖೆ ಧಾರವಾಡ, ಇವರ ಸಂಯೋಜನೆಯೊಂದಿಗೆ ಬೇಲೂರ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ಉದ್ಯಮಿಗಳು ಹಾಗೂ ಕಾರ್ಮಿಕರುಗಳಿಗೆ ಕೊವೀಡ್-19 ಲಸಿಕಾ ಅಭಿಯಾನ ಜಾಗೃತಿ ಕಾರ್ಯಕ್ರಮವನ್ನು ಗುರುವಾರದಂದು ಬೇಲೂರು ಕೈಗಾರಿಕಾ ಪ್ರದೇಶ ಇಎಸ್‍ಐ ಆಸ್ಪತ್ರೆಯಲ್ಲಿ ನೇರವೇರಿಸಲಾಯಿತು.
ಸಿವಿಲ್ ಡಿಪೆನ್ಸ ಚಿಪ್ ವಾರ್ಡನ್ ಡಾ, ಸತೀಶ ಇರಕಲ್, ವಾರ್ಡ್ ನ್ ಕಿರಣ ಹೀರೆಮಠ, ಧಾರವಾಡ ಕೈಗಾರಿಕಾ ಅಭಿವೃಧಿ ಕೇಂದ್ರ ಬೇಲೂರ ಸೆಕ್ರೆಟರಿಯಾದ ಪ್ರಕಾಶಚಂದ್ರ ಹಾಗೂ ಅನೇಕರು ಈ ಒಂದು ಕೋವಿಡ್-19 ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳುವಲ್ಲಿ ಶ್ರಮಿಸಿದರು.
ಈ ಅಭಿಯಾನದಲ್ಲಿ ಡಿಎಚ್‍ಒ ನೋಡಲ್ ಅಧಿಕಾರಿ ಡಾ. ಹೊನಕೇರಿ, ಇಇಸ್‍ಐ ಆಸ್ಪತ್ರೆಯ ಡಾ. ಮಂಜುಳಾ ಇವರು ಸಹಯೋಗ ನೀಡಿದರು. ಈ ಕಾರ್ಯಕ್ರಮದಲ್ಲಿ ಅನೇಕ ಕಂಪನಿಗಳ ಮುಖ್ಯಸ್ಥರು, ಕಾರ್ಮಿಕರು ಪಾಲ್ಗೊಂಡು 100ಕ್ಕಿಂತಲೂ ಹೆಚ್ಚು ಜನರು ಕೋವಿಡ್-19 ಲಸಿಕೆಯನ್ನು ಪಡೆಯುವದರೊಂದಿಗೆ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿವಿಲ್ ಡಿಪೆನ್ಸ ಚಿಪ್ ವಾರ್ಡನ್‍ರಾದ ಡಾ. ಸತೀಶ ಇರಕಲ್ ಅವರು ವಿಶ್ವ ಆರೋಗ್ಯ ದಿನದ ಅಂಗವಾಗಿ ಮಾತನಾಡಿ ಕೋವಿಡ್-19 ಮಹಾಮಾರಿಯನ್ನು ವಿಶ್ವಾದ್ಯಂತ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೈಜೋಡಿಸಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವದು, ಸ್ಯಾನಿಟೈಸರ್ ಉಪಯೋಗಿಸುವುದು, ಹಾಗೂ ಯಾವುದೇ ಭಯವಿಲ್ಲದೆ ಕೊವಿಡ್ ಲಸಿಕೆಯನ್ನು ಮಾಡಿಸಿಕೊಂಡು ಇತರರಿಗೂ ಮಾದರಿಯಾಗಿ ಆರೋಗ್ಯವಂತರಾಗಿರುವಂತೆ ಕೋರಿದರು.