ಕೋವಿಡ್ ಲಸಿಕಾ ಅಭಿಯಾನಕ್ಕೆ ಸಹಕರಿಸಿ: ಜಾಧವ

ಗದಗ,ಮಾ25 : ಸಾರ್ವಜನಿಕರು ಕೊರೊನಾ ಮಹಾಮಾರಿ ಬಗ್ಗೆ ಭಯಪಡುವುದು ಅಗತ್ಯವಿಲ್ಲ. ಈಗಾಗಲೇ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ಸಾಕಷ್ಟು ನಿಯಮಗಳನ್ನು ಜಾರಿಗೆ ತಂದಿದೆ. ಪ್ರತಿಯೊಬ್ಬ ನಾಗರಿಕರು ಲಸಿಕೆ ಹಾಕಿಸಿಕೊಳ್ಳಲು ಮುಂದಾಗಬೇಕು. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ನಡೆಸುತ್ತಿರುವ ಈ ಅಭಿಯಾನಕ್ಕೆ ಸಹಕರಿಸುತ್ತಿರುವ ಸಂಘಟನೆಗಳ ಪಾತ್ರ ಬಹಳ ಪ್ರಮುಖವಾಗಿದೆ ಎಂದು ನಗರಸಭೆ ಪೌರಾಯುಕ್ತ ರಮೇಶ ಜಾಧವ ಹೇಳಿದರು.

ಗದಗ ತಾಲೂಕ ಆರೋಗ್ಯ ಇಲಾಖೆ, ಜೈ ಭೀಮ್ ಸಂಘರ್ಷ ಸಮಿತಿ, ಜಿಲ್ಲೆ ಶಿಕ್ಷಣ ಇಲಾಖೆ ವತಿಯಿಂದ ಬುಧವಾರ ಕೊರೊನಾ ಮಹಾಮಾರಿ ವಿರುದ್ಧ ಕೋವಿಡ್ ಲಸಿಕೆ ಹಾಕಿಸಿ ಕೊರೊನಾ ಅಳಿಸಿ ಎಂಬ ಜನಜಾಗೃತಿ ಅಭಿಯಾನಕ್ಕೆ ನಗರದ ಡಿ.ಸಿ.ಮಿಲ್ ಹತ್ತಿರ ತಳಗೇರಿ ಓಣಿಯಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ ಪ್ರತಿಮೆಗೆ ಮಾಲಾರ್ಪಣೆಗೈದು ಚಾಲನೆ ನೀಡಿ ಅವರು ಮಾತನಾಡಿದರು.
ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ, ರಾಜ್ಯ ದಲಿತ ಮುಖಂಡರಾದ ಎಸ್.ಎನ್. ಬಳ್ಳಾರಿ ಮಾತನಾಡಿ, ನಿರಂತರ ಜಗತ್ತನ್ನು ಕಾಡುತ್ತಿರುವ ಕೊರೊನಾ ಅಳಿಸಿ ಹಾಕಲು ಜನರಲ್ಲಿ ಜಾಗೃತಿ ಮೂಡಿಸುವದೊಂದೆ ಅತಿ ದೊಡ್ಡ ಮಾರ್ಗವಾಗಿದ್ದು, ಸಾರ್ವಜನಿಕರು ತಮ್ಮ ಜೀವದ ಜೊತೆ ಪ್ರತಿಯೊಬ್ಬರ ಜೀವವು ಅಮೂಲ್ಯವೆಂದು ಭಾವಿಸಿ ಆರೋಗ್ಯ ಇಲಾಖೆಯು ನೀಡುವ ನಿಯಮಗಳನ್ನು ಪಾಲಿಸಿ ಲಸಿಕೆ ಹಾಕಿಸಿಕೊಳ್ಳಲು ತಿಳಿಸಿದರು.
ತಾಲೂಕಾ ವೈದ್ಯಾಧಿಕಾರಿ ಡಾ. ನೀಲಗುಂದ ಮಾತನಾಡಿ, ಕೋವಿಡ್ ಲಸಿಕೆಯ ಅಭಿಯಾನ ಕುರಿತು ತಿಳಿಸಿ 60 ವರ್ಷ ಮೇಲ್ಪಟ್ಟ ಎಲ್ಲ ಜನತೆಗೆ ಹಾಗೂ ಏಪ್ರೀಲ್ 1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಉಚಿತವಾಗಿ ನೀಡುತ್ತಿದ್ದು, ಸಾರ್ವಜನಿಕರು ತಪ್ಪದೇ ಲಸಿಕೆ ಹಾಕಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಲು ತಿಳಿಸಿದರಲ್ಲದೆ ಕಾಲ ಕಾಲಕ್ಕೆ ಇಲಾಖೆ ವತಿಯಿಂದ ಸಿಬ್ಬಂದಿಯವರು ತಮ್ಮ ಮನೆ ಬಾಗಿಲಿಗೆ ಬಂದು ನೀಡುವ ಮಾಹಿತಿಯನ್ನು ತಪ್ಪದೇ ಪಾಲಿಸಬೇಕು ಎಂದರು.
ಜಾಥಾವು ನಗರದ ಡಿ ಸಿ ಮಿಲ್ ಹತ್ತಿರ, ತಳಗೇರಿ ಓಣಿ ಜವಳಗಲ್ಲಿ, ಡೋರಗಲ್ಲಿ, ಮ್ಯಾಗೇರಿ ಓಣಿ, ಅಂಬೇಡ್ಕರ ನಗರ, ಜನತಾ ಕಾಲೋನಿ, ಗಂಗಾಪೂರ ಪೇಟೆ, ಬಸವೇಶ್ವರ ನಗರ, ಮುಂತಾದ ಕಡೆ ಸಂಚರಿಸಿ ಜನಜಾಗೃತಿ ಮೂಡಿಸಲಾಯಿತು.
ಜೈ ಭೀಮ ಸಂಘರ್ಷ ಸಮಿತಿ ಗದಗ ಜಿಲ್ಲಾ ಶಾಖೆ ಅಧ್ಯಕ್ಷರಾದ ಗಣೇಶ ಹುಬ್ಬಳ್ಳಿ, ಸಿ.ಆರ್.ಪಿ ರವಿ ಹೆಬ್ಬಳ್ಳಿ, ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್.ಕೆ. ಮಂಗಳಗುಡ್ಡ, ಆರೋಗ್ಯ ಇಲಾಖೆಯ ಅಕ್ಕಿ, ವಿನಾಯಕ ಬಳ್ಳಾರಿ, ಪ್ರೇಮ ಬಳ್ಳಾರಿ, ಐ.ಕೆ. ಹೊಸಮನಿ, ಜೆ.ಜಿ. ಬಿಸರಳ್ಳಿ, ರವಿ ಹಾದಿಮನಿ, ಉಪಾಧ್ಯಕ್ಷರಾದ ಮಂಜುನಾಥ ಎಫ್. ತೌಜಲ್, ರಾಷ್ಟ್ರೀನ್ ಜೋಸೆಪ್, ಹೇಮಂತ ಹುಬ್ಬಳ್ಳಿ, ವಿಜಯ ಪೂಜಾರ, ಬಸವರಾಜ ಬದಾಮಿ, ಹುಚ್ಚಪ್ಪ ಪೂಜಾರ, ರಾಜೇಶ ವಿ. ಶೆಟ್ಟರ್, ಪರಶುರಾಮ ಪಾತ್ರೋಟ, ದಲಿತ ಮುಖಂಡರಾದ ಬಾಬು ಬಳ್ಳಾರಿ, ಪ್ರೇಮ ಹುಬ್ಬಳ್ಳಿ, ಶ್ರೀಕಾಂತ, ವಿಶ್ವನಾಥ ಹುಬ್ಬಳ್ಳಿ, ವಿಶ್ವ ಎಸ್. ಹೊಸಮನಿ, ಹರೀಶ ಗೋಕಾವಿ, ರಮೇಶ, ಶ್ರೀಕಾಂತ ಹಲವಾಗಲಿ, ದುರ್ಗಣ್ಣ ತೌಜಲ್, ನಾಗರಾಜ ಕೊರಕಲ್, ವಿನಾಯಕ ಎ. ಬಳ್ಳಾರಿ, ಅಣ್ಣಪ್ಪ ರಾಮಗಿರಿ, ಶಿವು ಕಡಿವಾಲ ಸೇರಿದಂತೆ ಇತರರು ಪಾಲ್ಗೊಂಡಿದ್ದರು.