ಕೋವಿಡ್ ಲಕ್ಷಣಗಳಿಲ್ಲದ 722 ಪ್ರಕರಣಗಳು ಪತ್ತೆ

ಕಲಬುರಗಿ,ಜ.14 – ಜಿಲ್ಲೆಯಲ್ಲಿ ಕೋವಿಡ್ ಸೋಂಕುಗಳ ಲಕ್ಷಣಗಳಿಲ್ಲದ 722 ಪ್ರಕರಣಗಳು ಪತ್ತೆಯಾಗವೆ. ಜನವರಿ 13ರ ಅಂತ್ಯಕ್ಕೆ 958 ಕೋವಿಡ್ ಸಕ್ರೀಯ ಪ್ರಕರಣಗಳಲ್ಲಿದ್ದು, ಇದರಲ್ಲಿ 79 ಜನ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿ. ಎಚ್. ಓ ಡಾ. ಶರಣಬಸಪ್ಪ ಗಣಜಲಖೇಡ್ ತಿಳಿಸಿದ್ದಾರೆ.
ಸಾವ೯ಜನಿಕರು ಕೋವಿಡ್ ಹರಡುವಿಕೆ ತಡೆಗಟ್ಟಲು ಮುಂಜಾಗ್ರತೆಯ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಕೋರಿದ್ದಾರೆ.
ಜಿಲ್ಲೆಯ 958 ಸಕ್ರಿಯ ಪ್ರಕರಣಗಳಲ್ಲಿ 236 ಜನರಿಗೆ ಮಾತ್ರ ಕೋವಿಡ್ ಲಕ್ಷಣಗಳಿದ್ದು, ಇನ್ನುಳಿದ 722 ಜನರಿಗೆ ಯಾವುದೇ ಲಕ್ಷಣಗಳಿರುವುದಿಲ್ಲ. 79 ಜನ ಸದ್ಯಕ್ಕೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 958 ಸಕ್ರಿಯ ಪ್ರಕರಣಗಳ ಪೈಕಿ 566 ಪುರುಷರು ಮತ್ತು 392 ಮಹಿಳೆಯರಿದ್ದಾರೆ. ಇದರಲ್ಲಿ 0-6 ವಯಸ್ಸಿನ ಒಳಗಿನವರು 12 ಜನರಿದ್ದರೆ, 18 ವರ್ಷದೊಳಗಿನವರ ಸಂಖ್ಯೆ 134 ಇದೆ. 82 ಜನರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. 958 ಸಕ್ರಿಯ ಪ್ರಕರಣಗಳಲ್ಲಿ 646 ಜನ ಕಲಬುರಗಿ ನಗರದವರಾಗಿದ್ದಾರೆ ಎಂದು ಡಾ. ಗಣಜಲಖೇಡ್ ತಿಳಿಸಿದ್ದಾರೆ.