ಕೋವಿಡ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ: ತಾಂದಳೆ

ಬೀದರ: ಎ.25:ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೊಧಕ ಆಸ್ಪತ್ರೆಯಲ್ಲಿ ಕೋವಿಡ್ ಪಾಸಿಟಿವ್ ರೊಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಗುತ್ತಿದೆ ಎಂದು ಜಿಲ್ಲೆಯ ಹಿರಿಯ ಛಾಯಾಗ್ರಾಹಕ ಮಾರೂತಿರಾವ ತಾಂದಳೆ ತಿಳಿಸಿದ್ದಾರೆ.

ಇಂದು ನಮ್ಮ ಜಿಲ್ಲಾ ಪ್ರತಿನಿಧಿ ಶಿವಕುಮಾರ ಸ್ವಾಮಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಅವರು, ತಾನು ಕಳೆದ ಮೂರ್ನಾಲ್ಕು ದಿನಗಳಿಂದ ಸ್ವಲ್ಪ ಕೆಮ್ಮು ಹಾಗೂ ನಿಶಕ್ತದಿಂದ ಬಳಲುತ್ತಿದ್ದೆ. ಅಂಥದರಲ್ಲಿಯೇ ಕೋವ್ಯಾಕ್ಸಿನ್ ಚಿಕಿತ್ಸೆ ಪಡೆದಿದ್ದೆ. ಅದಕ್ಕಿಂತ ಪೂರ್ವದಲ್ಲಿಯೇ ನಾನು ಕೋವಿಡ್ ತಪಾಸಣೆಗೆ ಒಳಗಾಗಿದ್ದೆ. ವರದಿ ನೆಗೆಟಿವ್ ಬಂದಿದ್ದರೂ ಸ್ವಲ್ಪ ನಿಶಕ್ತತೆ ಉಂಟಾದ ಹಿನ್ನಲೆಯಲ್ಲಿ ಖಾಸಗಿ ವೈದ್ಯರೊಬ್ಬರ ಸಲಹೆ ಮೆರೆಗೆ ನಿನ್ನೆ ರಾತ್ರಿ ಜಿಲ್ಲಾಸ್ಪತ್ರೆಗೆ ಬಂದು ದಾಖಲಾಗಿದ್ದೇನೆ. ಈಗ ತನ್ನ ಆರೋಗ್ಯ ಸ್ಥಿರವಾಗಿದೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಸ್ಪಂದಿಸುತ್ತಿಲ್ಲ. ಬೆಡ್ ಇಲ್ಲದೇ ಹೊರಗೆ ಮಲಗಿಸಿದ್ದಾರೆ ಎಂಬ ಅಪವಾದ ಮಿಥ್ಯದಿಂದ ಕೂಡಿದ್ದು, ಕಾಲ ಕಾಲಕ್ಕೆ ಬಂದು ಇಲ್ಲಿಯ ವೈದ್ಯರು ಹಾಗೂ ಸಿಬ್ಬಂದಿ ಸ್ಪಂದಿಸುತ್ತಿದ್ದಾರೆ. ದಿನಕ್ಕೆ ಒಂದು ಉಪಹಾರ, ಎರಡು ಊಟ, ಸಂಜೆ ಚಹಾ ಬಿಸ್ಕತ್ತು ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಆದರೂ ಆಸ್ಪತ್ರೆಯ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದು ಅಲ್ಲಿಯ ಸಿಬ್ಬಂದಿಗಳ ಉತ್ಸಾಹಕ್ಕೆ ತಣ್ಣಿರು ಎರಚಿದಂತೆ ಭಾಸವಾಗುತ್ತಿದೆ. ಮಾಧ್ಯಮಗಳು ಈ ಸತ್ಯವನ್ನು ಸಹ ಬಿಂಬಿಸಬೇಕಿದೆ. ಕೋವಿಡ್ ಪಾಸೆಟೀವ್‍ಗೆ ಹೆದರಿ ಪ್ರಾಣ ಕಳೆದುಕೊಳ್ಳುತ್ತಿರುವ ರೋಗಿಗಳಿಗೆ ಧೈರ್ಯ ತುಂಬುವ ಕೆಲಸ ನಾವೆಲ್ಲರು ಸೇರಿ ಮಾಡಬೇಕಿದೆ. ಜಿಲ್ಲೆಯ ಸಾರ್ವಜನಿಕರು ಮಿಥ್ಯ ವಾಕ್ಯಗಳಿಗೆ ಕಿವಿಗೊಡದೇ ಕೋವಿಡ್ ಪಾಸೆಟೀವ್ ಬಂದರೂ ಮನೆಯಲ್ಲೇ ಐಸುಲೇಶನ್‍ನಲ್ಲಿಯೇ ಇರಿ. ಉಸಿರಾಟದ ತೊಂದರೆ ಹೆಚ್ಚಾದಾಗ ಮಾತ್ರ ಸ್ಥಳಿಯ ವೈದ್ಯರ ಸಲಹೆ ಮೆರೆಗೆ ಬ್ರಿಮ್ಸ್ ಆಸ್ಪತ್ರೆಗೆ ಬಂದು ದಾಖಲಾಗಬೇಕೆಂದು ಅವರು ಸಂಜೆವಾಣಿ ಮಾಧ್ಯಮದ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.