ಕೋವಿಡ್ ರೋಗಿಗಳಿಗೆ ಫ್ರೂಟ್ಸ್ ಕಿಟ್ ವಿತರಣೆ

ದಾವಣಗೆರೆ,ಮೇ.30;  ಚಾರಿಟೇಬಲ್ ಟ್ರಸ್ಟ್ ವತಿಯಿಂದ  ಶಾಮನೂರಿನ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿರುವ ಬಿಸಿಎಂ ಹಾಸ್ಟೆಲ್, ಶಿರಮಗೊಂಡನಹಳ್ಳಿಯಲ್ಲಿರುವ ತರಳಬಾಳು ಮಹಿಳಾ ವಸತಿ ನಿಲಯ, ದಾವಣಗೆರೆಯ ಬೂದಳ್ ರಸ್ತೆಯಲ್ಲಿರುವ ತಾಜ್ ಪ್ಯಾಲೆಸ್‌ನಲ್ಲಿರುವ ಕೋವಿಡ್ ಸೋಂಕಿತ ರೋಗಿಗಳಿಗೆ ಫ್ರೂಟ್ಸ್ ಕಿಟ್‌ಗಳನ್ನು ವಿತರಣೆ ಮಾಡಲಾಯಿತು. ಈ ವೇಳೆ ಅಸಗೋಡಿನ  ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಹನುಮಂತಪ್ಪ, ಜಿಲ್ಲಾ ಎನ್.ಸಿ.ಡಿ ಸಂಯೋಜಕ ಡಾ.ಯತೀಶ್.ಕೆ.ಹೆಚ್, ಕಾರ‍್ತಿಕ್ ಗೌಡ, ನಚಿಕೇತ್ ಇವರುಗಳು ಹಾಜರಿದ್ದರು.