ಕೋವಿಡ್ ರೋಗಿಗಳಿಗೆ ತುರ್ತಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುವುದು ಕಡ್ಡಾಯ: ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್

ವಿಜಯಪುರ, ಏ.22-ಜಿಲ್ಲೆಯಲ್ಲಿ ಕೋವಿಡ್ ಎರಡನೇ ಪ್ರಾರಂಭವಾಗಿರುವುದರಿಂದ ಎಲ್ಲಾ ಖಾಸಗಿ ಆಸ್ಪತ್ರೆಯ ತಜ್ಞವೈದ್ಯರು ಹಾಗೂ ಆಡಳಿತ ಮಂಡಳಿಯವರು ಸರ್ಕಾರದ ನಿರ್ದೇಶನದಂತೆ ಎಸ್‍ಎಎಸ್‍ಟಿ ಪೋರ್ಟಲ್‍ನಲ್ಲಿ ಡೆಸ್ಕ್‍ಟಾಪ್ ರಿವ್ಯೂವ್ ನೊಂದಣಿ ಮಾಡಿಕೊಂಡು ತೀವ್ರವಾಗಿ ಕೋವಿಡ್ ರೋಗದಿಂದ ಬಳಲುತ್ತಿರುವ ರೋಗಿಗಳನ್ನು ತುರ್ತಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ತಿಳಿಸಿದ್ದಾರೆ.
ಅದರಂತೆ ಅಂತಹ ರೋಗಿಗಳನ್ನು ಬಿಡುಗಡೆ ಮಾಡುವುದರೊಳಗೆ ಆಗಿ ಜಿಲ್ಲಾಡಳಿತದಿಂದ ಖeಜಿeಡಿಡಿಚಿಟ ಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ. ಖಾಸಗಿ ಆಸ್ಪತ್ರೆಗಳು ಯಾವುದೇ ಕಾರಣಕ್ಕೂ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಬಾರದು ಎಂದು ಅವರು ತಿಳಿಸಿದ್ದಾರೆ.
ಸದ್ಯ ಕೋವಿಡ್-19 ನೀಡುತ್ತಿರುವ ಖಾಸಗಿ ಆಸ್ಪತ್ರೆಗಳ ವಿವರ ಈ ಕೆಳಗಿನಂತೆ ಇರುತ್ತದೆ. ಅಲ್ ಆಮೀನ್ ಆಸ್ಪತ್ರೆ, ವಿಜಯಪುರ, ಅಲ್ ನಬಿ ಆಸ್ಪತ್ರೆ, ವಿಜಯಪುರ, ಆಯುಷ್ ಆಸ್ಪತ್ರೆ, ವಿಜಯಪುರ, ಬಂಜಾರಾ ಆಸ್ಪತ್ರೆ, ವಿಜಯಪುರ, ಭಾಗ್ಯವಂತಿ ಎಮ್.ಎಸ್ ಆಸ್ಪತ್ರೆ ಮತ್ತು ಆರ್‍ಸಿ ವಿಜಯಪುರ, ಬಿಎಲ್‍ಡಿಇ ಆಸ್ಪತ್ರೆ, ವಿಜಯಪುರ, ಚಿರಾಗ್ ಆಸ್ಪತ್ರೆ, ವಿಜಯಪುರ, ಚೌಧರಿ ಆಸ್ಪತ್ರೆ, ವಿಜಯಪುರ, ಡಾ.ಮುನೀರ್ ಬಾಂಗಿ ಆಸ್ಪತ್ರೆ, ವಿಜಯಪುರ, ಹುಸೇನ್ ಆಸ್ಪತ್ರೆ, ವಿಜಯಪುರ, ಮುಳವಾಡ ಆಸ್ಪತ್ರೆ, ವಿಜಯಪುರ, ನ್ಯಾಮಗೌಡ ಆಸ್ಪತ್ರೆ, ವಿಜಯಪುರ, ವೇದಾಂತ ಎಮ್.ಎಸ್ ಆಸ್ಪತ್ರೆ, ವಿಜಯಪುರ, ಯಶೋಧಾ ಆಸ್ಪತ್ರೆ, ವಿಜಯಪುರ, ಧನ್ವಂತರಿ ಆಸ್ಪತ್ರೆ, ವಿಜಯಪುರ, ಡಾ.ಬಿದರಿ ಅಶ್ವಿನಿ ಆಸ್ಪತ್ರೆ, ವಿಜಯಪುರ ಆಗಿರುತ್ತವೆ.
ಇನ್ನು ಯಾವುದಾದರೂ ಖಾಸಗಿ ಆಸ್ಪತ್ರೆಗಳು ಕೋವಿಡ್-19 ಚಿಕಿತ್ಸೆಗೆ ಮುಂದೆ ಬಂದರೆ ಅವರನ್ನು ಸಹ ಜಿಲ್ಲಾಡಳಿತದಿಂದ ಪರಿಗಣಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.