ಕೋವಿಡ್ ಮೊದಲ ಡೋಸ್ ಲಸಿಕೆ ಪಡೆದುಕೊಂಡ ವಿಕಲಚೇತನರು

ವಿಜಯಪುರ, ಮೇ.31-ನಗರದ ಬಾಗಲಕೋಟ ರಸ್ತೆಯಲ್ಲಿರುವ ಬಸವನಗರದ ಅನಾಥಾಶ್ರಮದಲ್ಲಿ, ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ, ಮತ್ತು ವಿಕಲಚೇತನರ ಸಂಘ-ಸಂಸ್ಥೆಗಳ ಅಡಿಯಲ್ಲಿ, ವಿಕಲಚೇತನರಿಗೆ ಕೋವಿಡ್ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ವಿವಿಧ ಬಡಾವಣೆಗಳಿಂದ ಆಗಮಿಸಿದ ನೂರಾರು ವಿಕಲಚೇತನರು ಮತ್ತು ಅವರ ಒಬ್ಬ ಆರೈಕೆದಾರರು ಕೋವಿಡ್ ಲಸಿಕೆಯನ್ನು ಪಡೆದು ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಿದರು.
ಈ ಸಂಧರ್ಭದಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಮತ್ತು ಕರ್ನಾಟಕ ರಾಜ್ಯ ವಿಕಲಚೇತನರ ಹೋರಾಟ ಸಮಿತಿ ಅಧ್ಯಕ್ಷರಾದ ಭೀಮನಗೌಡ.ಬಿ.ಪಾಟೀಲ್ (ಸಾಸನೂರ), ಎಸ್.ಎಸ್.ಕೆ ವಿಕಲಚೇತನರ ಅಭಿವೃಧ್ಧಿ ಸಂಸ್ಥೆ ಯ ಅಧ್ಯಕ್ಷರಾದ ಕಸ್ತೂರಿ ಬೂದಿಹಾಳ, ಎರಡೂ ಸಂಘಗಳ ಪಧಾಧಿಕಾರಿಗಳಾದ ಸುರೇಶ ಚವ್ಹಾಣ, ಪರಶುರಾಮ ಗುನ್ನಾಪುರ, ಸಂತೋಷ ಬೊಮ್ಮನಳ್ಳಿ, ಸುಮಿತ ಪಾಂಡಿಚೇರಿ, ಮಹಾದೇವಿ ಮುತ್ತಗಿ, ಮಂಗಲಾ ನಿರಂಜನ, ಲಾಲಸಾ ಮಮದಾಪುರ, ಮಹೇಶ ಮುಧೋಳ, ಮಹೇಶ ತೋಟದ ಸೇರಿದಂತೆ ನೂರಾರು ವಿಕಲಚೇತನರು ಕೋವಿಡ್ ಲಸಿಕೆಯನ್ನು ಪಡೆದುಕೊಂಡು ಲಸಿಕೆ ಅಭಿಯಾನವನ್ನು ಯಶಸ್ವಿಗೊಳಿಸಿದರು .