ಕೋವಿಡ್ ಮೃತರ ಕುಟುಂಬಕ್ಕೆ ನೆರವು, ಶವ ಸಾಗಿಸಲು ವಾಹನದ ವ್ಯವಸ್ಥೆ

ಬಸವಕಲ್ಯಾಣ,ಏ.6- ನಗರಸಭೆಯ ಭಾರತೀಯ ಜನತಾ ಪಕ್ಷದ ಸದಸ್ಯ (ಕೌನ್ಸಲೆರ್) ಹಾಗೂ ಮಾದಿಗ ದಂಡೋರ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷರಾದ ಮಾರುತಿ ಡಿ. ಲಾಡೆ ಅವರು ಕೋವಿಡ್-19 ನಿಂದಾಗಿ ಮೃತಪಟ್ಟಿದ್ದು, ಇವರ ಪ್ರಾರ್ಥಿವ ಶವ ಸಾಗಿಸಲು ಬೀದರ್‍ನ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ಅಧ್ಯಕ್ಷರಾದ ಸೂರ್ಯಕಾಂತ ನಾಗಮಾರಪಳ್ಳಿ ಅವರು ಸೋಮವಾರ ಉಚಿತವಾಗಿ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿಸುವ ಮೂಲಕ ಮಾನವೀಯತೆ ಮೆರೆದರು.
ಜಿಂದಗೀಕೆ ಸಾಥ್ ಭೀ, ಜಿಂದಗೀಕೇ ಬಾದ್ ಭೀ ಎನ್ನುವ ಘೋಷ ವಾಕ್ಯದೊಂದಿಗೆ ಕೋವಿಡ್‍ನಿಂದ ಮೃತಪಡುವವರ ಅಂತ್ಯಕ್ರಿಯೆಗೆ ಸಕಲ ವ್ಯವಸ್ಥೆ ಮಾಡಿರುವ ಸೂರ್ಯಕಾಂತ ನಾಗಮಾರಪಳ್ಳಿ ಅವರು, ಬಸವಕಲ್ಯಾಣ ನಗರಸಭೆಯ ಬಿಜೆಪಿ ಸದಸ್ಯ ಮಾರುತಿ ಡಿ. ಲಾಡೆ ಅವರ ಕುಟುಂಬಸ್ಥರಿಗೆ ಸ್ಥಳದಲ್ಲೇ 30 ಸಾವಿರ ರೂ.ಗಳ ನಗದು ನೆರವು ನೀಡಿದರಲ್ಲದೆ, ಶವ ಸಾಗಿಸಲು ಸಕಲ ವ್ಯವಸ್ಥೆ ಮಾಡಿಸಿದರು.
ಈ ವೇಳೆ ಫೌಂಡೇಶನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಯುವ ಮುಖಂಡ ಫರ್ನಾಂಡಿಸ್ ಹಿಪ್ಪಳಗಾಂವ್ ಸೇರಿದಂತೆ ಹಲವರು ಇದ್ದರು.