ಕೋವಿಡ್ ಮೂರನೇ ಹಂತದ ಲಸಿಕೆ: ಶೇ 90 ರಷ್ಟು ಯಶಸ್ವಿ

ನವದೆಹಲಿ,ನ.9- ಭಾರತ್ ಬಯೋಟೆಕ್ ಮತ್ತು ಅಮೇರಿಕಾದ ಫಿಫ್ ಜರ್ ಇಂಕ್ ಸೇರಿದಂತೆ ವಿವಿಧ ಸಂಸ್ಥೆಗಳು ಅಭಿವೃದ್ಧಿ ಪಡಿಸಿರುವ ಮೂರನೇ ಹಂತದ ಕೊರೋನಾ ಲಸಿಕೆ ಶೇ.90 ರಷ್ಟು ಯಶಸ್ವಿಯಾಗಿದೆ.

ಈ ಸಂಬಂಧ ಫಿಫ್ಜರ್ ಸಂಸ್ಥೆ ಅಧಿಕೃತ ವಾಗಿ ಈ ವಿಷಯವನ್ನು ಪ್ರಕಟಿಸಿದ್ದು ಶೀಘ್ರದಲ್ಲಿ ಲಸಿಕೆ ಸಿಗುವ ಭರವಸೆ ಹುಟ್ಟುಹಾಕಿದೆ.

ಲಸಿಕೆ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಹತ್ವದ ಮೈಲಿಗಲ್ಲನ್ನ ತಲುಪುತ್ತಿದ್ದೇವೆ, ಸೋಂಕಿನಪ್ರಮಾಣ ಹೊಸ ದಾಖಲೆಗಳನ್ನ, ಹೆಚ್ಚು ಸಾಮರ್ಥ್ಯಕ್ಕೆ ಹತ್ತಿರವಾದ ಆಸ್ಪತ್ರೆಗಳು ಮತ್ತು ಆರ್ಥಿಕತೆ ಕುಸಿದಿದೆ. ಈ ಜಾಗತಿಕ ಆರೋಗ್ಯ ಬಿಕ್ಕಟ್ಟನ್ನ ಕೊನೆಗಾಣಿಸಲು ನಾವು ಒಂದು ಮಹತ್ವದ ಹೆಜ್ಜೆಯನ್ನ ಇಡುತ್ತಿದ್ದೇವೆ
ಎಂದು ಫೈಜರ್ ಅಧ್ಯಕ್ಷ ಮತ್ತು ಸಿಇಒ ಡಾ. ಅಲ್ಬರ್ಟ್ ಬೋರ್ಲಾ ಹೇಳಿದ್ದಾರೆ.

ಮುಂಬರುವ ವಾರಗಳಲ್ಲಿ ಪರೀಕ್ಷೆ ನಡೆಸಲಾಗುವುದು ಅದರ ಫಲಿತಾಂಶದ ಆದಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

‘ವೈದ್ಯಕೀಯ ಪ್ರಯೋಗದಲ್ಲಿ ಪಾಲ್ಗೊಳ್ಳಲು ಸ್ವಯಂಸೇವಕರಾಗಿ ಬಂದ ಸಾವಿರಾರು ಜನರಿಗೆ, ಶೈಕ್ಷಣಿಕ ಸಹಯೋಗಿಗಳಿಗೆ ಮತ್ತು ಅಧ್ಯಯನ ತಾಣಗಳಲ್ಲಿ ಪರಿಶೋಧಕರು ಮತ್ತು ಪ್ರಪಂಚದಾದ್ಯಂತ ನಮ್ಮ ಸಹೋದ್ಯೋಗಿಗಳು ಮತ್ತು ಸಹಭಾಗಿಗಳಿಗೆ ಈ ನಿರ್ಣಾಯಕ ಪ್ರಯತ್ನಕ್ಕಾಗಿ ತಮ್ಮ ಸಮಯವನ್ನ ಅರ್ಪಿಸುತ್ತಿರುವವರಿಗೆ ನಾನು ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ’ ಎಂದಿದ್ದಾರೆ.

3ನೇ ಹಂತದ ವೈದ್ಯಕೀಯ ಪ್ರಯೋಗ ಜುಲೈ 27ರಿಂದ ಪ್ರಾರಂಭಗೊಂಡು, ಇದುವರೆಗೆ 43,538 ಸ್ಪರ್ಧಿಗಳನ್ನ ನೋಂದಾಯಿಸಲಾಗಿದೆ. ಅವರಲ್ಲಿ 38,955 ಮಂದಿಲಸಿಕೆಯ ಎರಡನೇ ಡೋಸ್ʼ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಲಸಿಕೆ ಅತೀ ಶೀಘ್ರದಲ್ಲೇ ಸಿಗುವ ಸಾದ್ಯತೆಗಳು ದಟ್ಟವಾಗಿವೆ.