ಕೋವಿಡ್ ಮೂರನೇ ಅಲೆ ಎದುರಿಸಲು ಜಿಲ್ಲಾ ಆಡಳಿತದಿಂದ ಕ್ರಮಃ ಜಿಲ್ಲಾಧಿಕಾರಿ

ವಿಜಯಪುರ, ಜೂ.10-ಕೊರೋನಾ 3 ನೇ ಅಲೆಯ ಹಿನ್ನೆಲೆಯಲ್ಲಿ ಜಿಲ್ಲಾ ಆಡಳಿತವತಿಯಿಂದ ಈ ಕೆಳಕಂಡಂತೆ ಪೂರ್ವಭಾವಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಚಿವರ ಸಭೆಯಲ್ಲಿ ಮಾಹಿತಿ ನೀಡಿರುವ ಅವರು 18 ವರ್ಷ ಮಕ್ಕಳಲ್ಲಿ 1653 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಯಾವುದೇ ಮರಣ ಸಂಭವಿಸಿರುವುದಿಲ್ಲ. ಹಾಗೂ ಕೋವಿಡ್-19 ನಿಂದಾಗಿ ಇಬ್ಬರೂ ಪೆÇೀಷಕರನ್ನು ಕಳೆದುಕೊಂಡ ಮಕ್ಕಳ ಸಂಖ್ಯೆ-3 ಮತ್ತು ಓರ್ವ ಪೆÇೀಷಕರನ್ನು ಕಳೆದುಕೊಂಡ ಮಕ್ಕಳ ಸಂಖ್ಯೆ-289 ಇದ್ದು, ಇವರಿಗೆ ಗೃಹ ತನಿಖೆ ಮಾಡಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ರಕ್ಷಣೆ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಅದರಂತೆ ಕೋವಿಡ್-19 ಭಾಧಿತ ಮಕ್ಕಳಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ಐಶ್ವರ್ಯ ಮಹಿಳಾ ಸಂಸ್ಥೆ, ವಿಜಯಪುರ ಮತ್ತು ವಿಜಯಲಕ್ಷಿ ಎಜ್ಯುಕೇಶನ್ & ಸೊಶಿಯಲ್ ವೆಲ್‍ಫೇರ್ ಸೊಸೈಟಿ, ವಿಜಯಪುರ ಹೀಗೆ ಒಟ್ಟು
2-ಕ್ವಾರಂಟೈನ್ ಸೆಂಟರ್‍ಗಳನ್ನು ಮತ್ತು ಪೆÇೀಷಕರಿಬ್ಬರು ಮೃತಪಟ್ಟ ಮಕ್ಕಳಿಗಾಗಿ ಶ್ರೀ. ದಾನಮ್ಮದೇವಿ ಮಕ್ಕಳ ತೆರೆದ ತಂಗು ದಾಣ ಇಂಡಿ ಸಂಸ್ಥೆಯನ್ನು ಗುರುತಿಸಲಾಗಿದೆ. 6 ವರ್ಷದ ಮಕ್ಕಳಿಗಾಗಿ ಶ್ರೀ. ಸಿದ್ದೇಶ್ವರ ದತ್ತು ಸ್ವೀಕಾರ ಕೇಂದ್ರದಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿರುತ್ತದೆ. ಹಾಗೂ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳ ಪೆÇೀಷಕರು ಇಲಾಖೆಯಿಂದ ಸಹಾಯ ಬಯಸಿದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ: 1098, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದೂರವಾಣಿ ಸಂ: 08352-276354 ಹಾಗೂ ತಾಲೂಕಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 25 ಮಕ್ಕಳ ಪಾಲನಾ ಸಂಸ್ಥೆಗಳು ನೋಂದಣಿಯಾಗಿದ್ದು, ಪ್ರಸ್ತುತ 11 ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಕೋವಿಡ್-19 ನಿಂದಾಗಿ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ. ಉಳಿದ 14 ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ 44-ಹೆಣ್ಣು ಮತ್ತು 40-ಗಂಡು ಮಕ್ಕಳು ಇರುತ್ತಾರೆ. ಹಾಗೂ ಜಿಲ್ಲೆಯಲ್ಲಿ ಚಿಕ್ಕ ಮಕ್ಕಳಿಗೆ ಚಿಕಿತ್ಸೆ ಸಲುವಾಗಿ ಒಟ್ಟು 17 ಸರ್ಕಾರಿ/ಖಾಸಗಿ ಆಸ್ಪತ್ರೆಗಳನ್ನು ಗುರುತಿಸಲಾಗಿದ್ದು, ಅವುಗಳ ವಿವರಣೆ ಈ ಕೆಳಗಿನಂತಿರುತ್ತದೆ.
12 ಖಾಸಗಿ ಆಸ್ಪತ್ರೆಗಳು ಹಾಗೂ 5 ಸರ್ಕಾರಿ ಆಸ್ಪತ್ರೆಗಳು ಒಟ್ಟು 17 ಆಸ್ಪತ್ರೆಗಳಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 612 ಪೇಡಿಯಾಟ್ರಿಕ್ಸ್ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ 40 ಒಟ್ಟು 652 ಪೇಡಯಾಟ್ರಿಕ್ಸ ಗಳಿವೆ, ಖಾಸಗಿ ಆಸ್ಪತ್ರೆಗಳಲ್ಲಿ 344 ಜನರಲ್ ಬೆಡ್ ಗಳಿದ್ದು 15 ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 359 ಜನರಲ್ ಬೆಡ್ಗಳಿವೆ.
ಖಾಸಗಿ ಆಸ್ಪತ್ರೆಗಳಲ್ಲಿ 136 ಎನ್ ಐ ಸಿ ಯು ಸರ್ಕಾರಿ ಆಸ್ಪತ್ರೆಗಳಲ್ಲಿ 19 ಒಟ್ಟು 155 ಬೆಡ್ ಗಳಿವೆ.ಖಾಸಗಿ ಆಸ್ಪತ್ರೆಗಳಲ್ಲಿ 124 ಪಿ ಐ ಸಿಯು ಬೆಡ್ ಗಳಿದ್ದು ಸರ್ಕಾರಿ ಆಸ್ಪತ್ರೆಗಳಲ್ಲಿ 6 ಒಟ್ಟು 130 ಬೆಡ್ ಗಳಿವೆ.
ಖಾಸಗಿ ಆಸ್ಪತ್ರೆಗಳಲ್ಲಿ ಎನ್ ಐ ಸಿ ಯು 16 ವೆಂಟಿಲೇಟರಗಳಿದು ಸರ್ಕಾರಿ ಆಸ್ಪತ್ರೆಗಳಲ್ಲಿ 0 ಒಟ್ಟು16, ಖಾಸಗಿ ಆಸ್ಪತ್ರೆಗಳಲ್ಲಿ ಪಿ ಐ ಸಿಯು 13, ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ 0 ಒಟ್ಟು 13 ಇವೆ. ಎಸಿ ಖಾಸಗಿ ಆಸ್ಪತ್ರೆಗಳಲ್ಲಿ ಎಫ್ 18 ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ 0 ಒಟ್ಟು 18. ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಿಪಿಎಪಿ 15 ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ 2 ಒಟ್ಟು 17 ಗಳಾಗಿರುತ್ತವೆ.
ಸೆಂಟ್ರಲ್ ಆಕ್ಸಿಜನ್ ಲೈನ್ದ ವ್ಯವಸ್ಥೆ ಇರುತ್ತದೆ. ಪಿಡ್ರಿಯಾಟಿಕ್ಸ ಮಾಸ್ಕಗಳ ವ್ಯವಸ್ಥೆ, ಆಕ್ಸಿಜನ್ ಪೈಪುಗಳ ಮತ್ತು ಪಿಡ್ರಿಯಾಟಿಕ್ಸ ವಯೋ ಗುಂಪಿನ ಅನುಗುಣವಾಗಿ ಔಷಧ ದಾಸ್ತಾನು ಮಾಡಲಾಗಿದೆ. ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಒಬ್ಬ ತಜ್ಞ ವೈದ್ಯರು, ಸ್ಟಾಪ್ ನರ್ಸ ಮತ್ತು ಗ್ರುಪ್ “ಡಿ” ನೌಕರರು ಚಿಕ್ಕಮಕ್ಕಳ ಆರೈಕೆಗಾಗಿ ಲಭ್ಯವಿರುತ್ತಾರೆ.
ಕೋವಿಡ್-19 ಸಂಭವನೀಯ 3ನೇ ಅಲೆಯ ಕುರಿತು ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳ ಕುರಿತು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು / ವೈದ್ಯಾಧಿಕಾರಿಗಳು, ಚಿಕ್ಕ ಮಕ್ಕಳ ತಜ್ಞ ವೈದ್ಯರು, ಅಧ್ಯಕ್ಷರು, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಹಾಗೂ ಅಧ್ಯಕ್ಷರು, ಇಂಡಿಯನ್ ಅಕ್ಯಾಡೆಮಿ ಆಫ್ ಪೆಡಿಯಾಟ್ರಿಕ್ಸ್ ಇವರೊಂದಿಗೆ ಜಿಲ್ಲಾಧಿಕಾರಿಗಳ ಮೂಲಕ ಸಭೆ ನಡೆಸಿರುತ್ತಾರೆ.
ರಾಜ್ಯ ಸರ್ಕಾರದಿಂದ ಅಭಿವೃದ್ಧಿಪಡಿಸಲಾದ ಬೆಡ್ ಮ್ಯಾನೇಜ್‍ಮೆಂಟ್ ಸಿಸ್ಟಮ್‍ನಲ್ಲಿ ಕೋವಿಡ್-19 ಚಿಕಿತ್ಸೆಗಾಗಿ ಹಂಚಿಕೆ ಮಾಡಲಾದ ಬೆಡ್‍ಗಳ ಪೈಕಿ ಶೇ.50 ರಷ್ಟು ಹಾಸಿಗೆಗಳನ್ನು ಸರ್ಕಾರಿ ಕೋಟಾ ಎಂದು ಕಾಯ್ದಿರಿಸಲು ಹಾಗೂ ಇದುವರೆಗೆ ಎ.ಬಿ.ಎ.ಆರ್.ಕೆ. ಅಡಿಯಲ್ಲಿ ನೋಂದಣಿಯಾಗದ ಆಸ್ಪತ್ರೆಗಳು ಕೂಡಲೇ ನೋಂದಣಿ ಪ್ರಕ್ರಿಯೆ ಮುಕ್ತಾಯಗೊಳಿಸಲು ಕ್ರಮ ವಹಿಸಲಾಗುತ್ತಿದೆ.
ಜಿಲ್ಲೆಯ ತಾಲೂಕಾ ಆಸ್ಪತ್ರೆ / ಸಮುದಾಯ ಆರೋಗ್ಯ ಕೇಂದ್ರಗಳ ಸಲುವಾಗಿ ಒಟ್ಟು 500 ಜಂಬೊ ಆಕ್ಸಿಜನ್ ಸಿಲೆಂಡರ್ ಮತ್ತು ಡೀಸೆಲ್ ಜನರೇಟರ್‍ಗಳ ಖರೀದಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಹಾಗೂ ಅಜೀಂ ಪ್ರೇಮಜಿ ಫೌಂಡೇಶನ್ ವತಿಯಿಂದ ತಾಲೂಕಾ ಆಸ್ಪತ್ರೆ ಇಂಡಿಯಲ್ಲಿ 1 ಕೆ.ಎಲ್. ಸಾಮಥ್ರ್ಯದ ಆಕ್ಸಿಜನ್ ತಯಾರಿಕಾ ಘಟಕವನ್ನು ಸ್ಥಾಪಿಸಲಾಗುತ್ತಿದೆ. ಮತ್ತು ಬಸವನಬಾಗೇವಾಡಿ ಮತ್ತು ಮುದ್ದೇಬಿಹಾಳ ತಾಲೂಕುಗಳ ತಾಲೂಕಾ ಆಸ್ಪತ್ರೆಗಳಲ್ಲಿ 500 ಲೀ. ಸಾಮಥ್ರ್ಯದ ಆಕ್ಸಿಜನ್ ತಯಾರಿಕಾ ಘಟಕಗಳು ಸರ್ಕಾರದಿಂದ ಮಂಜೂರಾಗಿದ್ದು, ಸಿವ್ಹಿಲ್ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ.
ಸಿಂದಗಿ ತಾಲೂಕಾ ಆಸ್ಪತ್ರೆಯಲ್ಲಿ ಆಕ್ಸಿಜನ್ ತಯಾರಿಕಾ ಘಟಕ ಸ್ಥಾಪನೆ ಕುರಿತು ವಿಜನ್ ಕರ್ನಾಟಕ ಫೌಂಡೇಶನ್ ಬೆಂಗಳೂರು ಇವರಿಗೆ ಕೋರಲಾಗಿದೆ. ಜಿಲ್ಲೆಯ ಸರ್ಕಾರಿ/ಖಾಸಗಿ ಆಸ್ಪತ್ರೆಗಳಲ್ಲಿ ಸಾಕಷ್ಟು ಬೆಡ್‍ಗಳ ಲಭ್ಯತೆ ಇದ್ದು, ಯಾವುದೇ ರೀತಿಯ ತೊಂದರೆ ಇರುವುದಿಲ್ಲ.
ವೈದ್ಯಕೀಯ ಆಕ್ಸಿಜನ್‍ಃ ಜಿಲ್ಲೆಯ ಸರ್ಕಾರಿ/ಖಾಸಗಿ ಆಸ್ಪತ್ರೆಗಳಿಗೆ ಅವಶ್ಯಕತೆ ಇರುವಷ್ಟು ವೈದ್ಯಕೀಯ ಆಕ್ಸಿಜನ್ ಲಭ್ಯತೆ ಇದ್ದು, ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಹಾಗೂ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಉಪಯೋಗಕ್ಕಾಗಿ ಸರ್ಕಾರದಿಂದ-50 ಆಕ್ಸಿಜನ್ ಕಾನ್ಸಂಟ್ರೇಟರ್ ಮತ್ತು 3-ವೆಂಟಿಲೆಟರ್, ಜಿಲ್ಲಾಡಳಿತದಿಂದ ಆಕ್ಸಿಜನ್ ಕಾನ್ಸಂಟ್ರೇಟರ್-10 ಖರಿಧಿ ಮತ್ತು ದಾನಿಗಳಿಂದ ಒಟ್ಟು 81 ಆಕ್ಸಿಜನ್ ಕಾನ್ಸಂಟ್ರೇಟರ್‍ಗಳನ್ನು ಮತ್ತು 1 ವೆಂಟಿಲೆಟರ್‍ಗಳನ್ನು ದಾನವಾಗಿ ನೀಡಿದ್ದಾರೆ.
ಮನೆ-ಮನೆ ಸಮೀಕ್ಷೆಃ ಅಂಗನವಾಡಿ / ಆಶಾ ಕಾರ್ಯಕರ್ತೆಯರು ಮನೆ ಮನೆ ಸಮೀಕ್ಷೆ ಕಾರ್ಯಕೈಕೊಂಡು ಒಟ್ಟು 3799 ಕೋವಿಡ್-19 ಲಕ್ಷಣಗಳುಳ್ಳ ಜನರನ್ನು ಗುರುತಿಸಿ, ಕೋವಿಡ್-19 ಲಕ್ಷಣಗಳುಳ್ಳ ಜನರನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಾಗಲು ತಿಳುವಳಿಕೆ ನೀಡಿದ್ದು, ಹೋಂ-ಐಶೋಲೇಶನ್‍ದಲ್ಲಿರುವವರಿಗೆ ಔಷಧಿ ಕಿಟ್‍ಗಳನ್ನು ವಿತರಿಸಲಾಗಿದೆ ಹಾಗೂ ಅವರ ಗಂಟಲು ದ್ರವನ್ನು ಲ್ಯಾಬ್ ಟೆಸ್ಟ್ಗೆ ಕಳುಹಿಸಲಾಗಿದೆ.
ಮನೆ-ಮನೆ ಸಮೀಕ್ಷೆಯ ವಿವರಃ ಒಟ್ಟು ಸಿಸಿಸಿ 69, ಹಾಸಿಗೆಗಳು 3056, ಸಿಸಿಸಿ ನಲ್ಲಿರುವವರು 84, ಗುರುತಿಸಿದ ರೋಗಲಕ್ಷಣಗಳು ಇರುವವರ ಸಂಖ್ಯೆ 3799, ಗಂಟಲು ದ್ರವ ತಪಾಸಣೆಗೆ ತೆಗೆದುಕೊಂಡವರ ಸಂಖ್ಯೆ 3789, ವರದಿಯಾದ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1457, ಗುಣಮುಖರಾದವರ ಸಂಖ್ಯೆ 2964, ಮೆಡಿಕಲ್ ಕಿಟ್ ವಿತರಣೆ 3784, ಫುಡ್ ಕಿಟ್ ವಿತರಣೆ 3680 ಗಳಾಗಿರುತ್ತವೆ.
ಜಿಲ್ಲಾಧಿಕಾರಿಗಳವರು ಮತ್ತು ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು, ಜಿ.ಪಂ ಇವರೊಂದಿಗೆ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಮನೆ-ಮನೆ ಸಮೀಕ್ಷೆ ಮತ್ತು ಗ್ರಾಮ ಪಂಚಾಯತಿ ಕೋವಿಡ್-19 ಕಾರ್ಯಪಡೆಯನ್ನು ಸಭೆಯನ್ನು ಜರುಗಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿರುತ್ತಾರೆ.
ತಾಲೂಕಿನ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಪ್ರಕರಣಗಳಿರುವ 5-ಗ್ರಾಮಗಳನ್ನು ಗುರುತಿಸಿ, ಅಂತಹ ಗ್ರಾಮಗಳಿಗೆ ತಹಶೀಲದಾರರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕಾ ಪಂಚಾಯತಿ, ಇವರು ಜಂಟಿಯಾಗಿ ಸದರ ಗ್ರಾಮಕ್ಕೆ ಭೇಟಿ ನೀಡಿ, ಪಾಸಿಟಿವ್ ಪ್ರಕರಣಗಳು ಹೆಚ್ಚಾಗಲು ಕಾರಣವೇನು? ಎಂಬುದರ ಬಗ್ಗೆ ಪತ್ತೇ ಹಚ್ಚುವುದು ತಾಲೂಕಿನ ವ್ಯಾಪ್ತಿಯ ಬೇರೆ-ಬೇರೆ 10-ಗ್ರಾಮಗಳಿಗೆ ಪ್ರತಿದಿನ ಭೇಟಿ ನೀಡಿ, ಕೋವಿಡ್-19ರ ಕುರಿತು ಜನರಿಗೆ ತಿಳುವಳಿಕೆ ನೀಡುವುದು ಮತ್ತು ಆಯಾ ಗ್ರಾಮಗಳಲ್ಲಿ ಕೋವಿಡ್-19 ರ ಕುರಿತು ತೆಗೆದುಕೊಂಡ ಕ್ರಮದ ಕುರಿತು ಪರಿಶೀಲಿಸಲು ಸೂಚಿಸಿಲಾಗಿದೆ.
ಜಿಲ್ಲೆಯಲ್ಲಿ ದಿ.08/06/2021ರ ವರೆಗೆ ಒಟ್ಟು 156 ಬ್ಲ್ಯಾಕ್ ಫಂಗಸ್ ಪ್ರಕರಣಗಳು ವರದಿಯಾಗಿದ್ದು, ಅದರ ವಿವರ ಈ ರೀತಿ ಇದೆ.
ವರದಿಯಾದ ಪ್ರಕರಣಗಳು 143, ಗುಣಮುಖರಾದವರ ಸಂಖ್ಯೆ 45, ರೇಫರಲ್ 24, ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 72, ಹಾಗೂ 2 ಸಾವು ಸಂಭವಿಸಿರುತ್ತದೆ.
ಇದರ ಚಿಕಿತ್ಸೆಗೆ ಅವಶ್ಯಕವಿರುವ ಔಷಧಿಯನ್ನು ಕೆ.ಪಿ,ಎಂ.ಇ ವೆಬ್ ಸೈಟಿನಲ್ಲಿ ಸಲ್ಲಿಸಿರುವ ಆನ್ ಲೈನ್ ಕೋರಿಕೆಯ ಮೇರೆಗೆ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಸರಕಾರದಿಂದ ನೇರವಾಗಿ ಪೂರೈಸಲಾಗುತ್ತಿದೆ.
ಲಸಿಕಾ ಕಾರ್ಯಕ್ರಮದ ಫಲಾನುಭವಿಗಳುಃ ವೈದ್ಯಕೀಯ ಸಿಬ್ಬಂದಿಗಳು ಒಟ್ಟು ಗುರಿ 18643, ಪ್ರಥಮ ಡೋಜ್ ಪಡೆದವರು 15977, ಎರಡನೇ ಡೋಸ್ ಜನ 9596 ಪಡೆದಿದ್ದಾರೆ.
ಮುಂಚೂಣಿ ಕಾರ್ಯಕರ್ತರು ಒಟ್ಟು ಗುರಿ 25407, ಪ್ರಥಮ ಡೋಜ್ ಪಡೆದವರು 23754, ಎರಡನೇ ಡೋಸ್ 8018 ಜನ ಪಡೆದಿದ್ದಾರೆ. 40ರಿಂದ 45 ವರ್ಷ ಮೇಲ್ಪಟ್ಟವರು ಒಟ್ಟು ಗುರಿ 580305, ಪ್ರಥಮ ಡೋಜ್ ಪಡೆದವರು 244180,
ಎರಡನೇ ಡೋಸ್ 52246 ಜನ ಪಡೆದಿದ್ದಾರೆ.
ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ರೂ. 3000-ಅಸಂಘಟಿತ ಕಾರ್ಮಿಕರಿಗೆ (ಅಗಸರು, ಕ್ಷೌರಿಕರು, ಗೃಹ ಕಾರ್ಮಿಕರು, ಇತ್ಯಾದಿ ಒಟ್ಟು 12 ವರ್ಗಗಳಿಗೆ) ರೂ. 3000/- ಆಟೋ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರು ಮತ್ತು ಕಲಾವಿದರಿಗೆ, ರೂ. 3000/-ಹೂವು ಹಣ್ಣು ತರಕಾರಿ ಬೆಳೆಗಾರರಿಗೆ (1 ಹೆ, ಪ್ರದೇಶಕ್ಕೆ- ರೂ.10000/-, ಕನಿಷ್ಠ-2000/-) ಮತ್ತು ಅರ್ಚಕರಿಗೆ ರೂ. 3000/- ಪರಿಹಾರ ಧನವನ್ನು ಘೋಷಿಸಲಾಗಿದೆ. ಅರ್ಹ ಎಲ್ಲ ಫಲಾನುಭವಿಗಳಿಗೆ ಪರಿಹಾರ ಧನ ನೀಡುವ ಕುರಿತು ಕ್ರಮ ಜರುಗಿಸಲು ಸಂಬಂಧಿಸಿದ ಅಧಿಕಾರಿಗಳವರಿಗೆ ಸೂಚಿಸಲಾಗಿದೆ.
ಕೋವಿಡ್-19 ರ 1ನೇ ಅಲೆಯಲ್ಲಿ 1 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 2 ಅಂಗನವಾಡಿ ಸಹಾಯಕಿಯರು ಮರಣ ಹೊಂದಿದ್ದು, ಮರಣ ಪರಿಹಾರ ಭತ್ಯೆ ಮಂಜೂರು ಮಾಡಲಾಗಿದೆ. 2ನೇ ಅಲೆಯಲ್ಲಿ 5ಅಂಗನವಾಡಿ ಕಾರ್ಯಕರ್ತೆಯರು ಹಾಗೂ 2 ಅಂಗನವಾಡಿ ಸಹಾಯಕಿಯರು ಮರಣ ಹೊಂದಿರುತ್ತಾರೆ ಇವರಿಗೂ ಸಹ ಮರಣ ಪರಿಹಾರ ಭತ್ಯೆ ಮಂಜೂರು ಮಾಡುವ ಕುರಿತು ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಾದ ಪಿ ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ.