ಕೋವಿಡ್ ಮುಕ್ತ ಗ್ರಾಮೀಣ ಪ್ರದೇಶಕ್ಕೆ ಪಣತೊಡದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ: ಕಿಶೋರಕುಮಾರ

ಆಳಂದ:ಜೂ.3: ಗ್ರಾಮೀಣ ಮಟ್ಟದಲ್ಲಿ ತೀವ್ರತರಹ ಹರಡುತ್ತಿರುವ ಕೊರೊನಾ ವೈರಸ್ ನಿಯಂತ್ರಣಕ್ಕೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ನಿಯಂತ್ರಣಕ್ಕೆ ನಿಷ್ಕಾಳಜಿ ವಹಿಸದೆ ವಿನಹ ಕಾರಣ ಗೈರಾದರೆ ಇಂಥವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ತಾಪಂ ಆಡಳಿತಾಧಿಕಾರಿ ಆಗಿರುವ ಜಿಪಂ ಯೋಜನಾಧಿಕಾರಿ ಕಿಶೋರಕುಮಾರ ಅವರು ಇಂದಿಲ್ಲಿ ಎಚ್ಚರಿಸಿದರು.

ಪಟ್ಟಣದ ತಾಪಂ ಕಚೇರಿಯಲ್ಲಿ ಬುಧವಾರ ಕರೆದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಳ್ಳಿಗಳಲ್ಲಿ ಕೋವಿಡ್ ಹೆಚ್ಚಿನ ತಪಾಸಣೆ ಕೈಗೊಳ್ಳುವಂತೆ ನೋಡಿಕೊಂಡು ಪತ್ತೆಯಾದ ಸಾಮಾನ್ಯ ಸೋಂಕಿತರನ್ನು ಯಾರನ್ನು ಬಿಡದೆ ಎಲ್ಲರನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ಕಡ್ಡಾಯವಾಗಿ ದಾಖಲಿಸಬೇಕು. ಗಂಭೀರವಾಗಿ ಬಳಲುತ್ತಿರುವ ಸೋಂಕಿತರಿಗೆ ನೆರವಾಗಿ ಆಸ್ಪತ್ರೆಗೆ ದಾಖಲಿಸಬೇಕು. ಒಂದು ಮನೆಯಲ್ಲಿನ ಒರ್ವ ಸೋಂಕಿತನಿಗೆ ಬೇರ್ಪಡಿಸಿ ಚಿಕಿತ್ಸೆಗೆ ಸಹಕಾರಿಯಾದರೆ ಈ ಮನೆಯಲ್ಲಿನ ಐವರ ಜೀವ ಉಳಿಸದಂತಾಗುತ್ತದೆ. ಈ ಕೆಲಸವನ್ನು ಗಂಭೀರವಾಗಿ ಪರಿಗಣಿಸಿ ಚಾಚೂತಪ್ಪದೆ ಪಾಲನೆ ಮಾಡಬೇಕು ಎಂದು ತಾಕೀತು ಮಾಡಿದರು.

ಇಷ್ಟಾಗಿಯೂ ಕುಂಟುನೆಪ ಹೇಳಿದರೆ ಎಲ್ಲಡೆ ಕೈಗೊಳ್ಳುವ ಮಿಂಚಿನ ಸಂಚಾರದಲ್ಲಿ ಸಿಕ್ಕಿಬಿದ್ದರೆ ಕ್ರಮ ಜರುಗಿಸಲು ಹಿಂದೆ ಮುಂದೆ ನೋಡುವುದಿಲ್ಲ. ಕೇಂದ್ರಸ್ಥಾನದಿಂದ ಯಾವುದೇ ಸ್ಥಳಕ್ಕೆ ಹೋದರೆ ನಡೆತೆ ಪುಸ್ತಕದಲ್ಲಿ ಕಾರಣ ನಮೋದಿಸಿ ಹೋಗಬೇಕು. ಹಠಾತಾಗಿ ಭೇಟಿ ನೀಡಿದ ವೇಳೆ ಗೈರು ಕಂಡುಬಂದರೆ ನೀವೆ ಹೊಣೆಯಾಗುತ್ತಿರಿ. ಕೋವಿಡ್ ಕೆಲಸಕ್ಕೆ ರಾಜ್ಯದ ಮುಖ್ಯಮಂತ್ರಿಗಳಿಂದ ಹಿಡಿದು ಯೋಜನೆಯ ಅಪಾರ ಮುಖ್ಯ ಕಾರ್ಯದರ್ಶಿ ಡಾ| ಶಾಲಿನಿ, ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಅವರು ಪರಿಶ್ರಮ ಪಡುತ್ತಿದ್ದಾರೆ. ನಿತ್ಯ ಗ್ರಾಮೀಣ ಅಂಕಿಅಂಶಗಳನ್ನು ಗಮನಿಸುತ್ತಿದ್ದಾರೆ. ಇದಕ್ಕೆ ಗ್ರಾಮೀಣ ಮಟ್ಟದ ಅಧಿಕಾರಿಗಳು ಸಹ ಕೈಜೋಡಿಸಿ ಚುನಾಯಿತ ಪ್ರತಿನಿಧಿಗಳ ಮತ್ತು ಜನರ ಸಹಕಾರದೊಂದಿಗೆ ಕಾರ್ಯಪಡೆಯ ಯಶಸ್ವಿಗೊಳಿಸಿ ಕೊರೊನಾ ಮುಕ್ತಗೊಳಿಸಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.

ತಾಪಂ ಕಾರ್ಯನಿರ್ವಾಹಕ ಅಭಿಯಂತರ ನಾಗಮೂರ್ತಿ ಶೀಲವಂತ ಅವರು ಸಭೆಯಲ್ಲಿ ಮಾತನಾಡಿ, ಈಗಾಗಲೇ ಗ್ರಾಮೀಣ ಮಟ್ಟದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ನಿಯಮಾವಳಿ ಅನುಷ್ಠಾನಕ್ಕೆ ಬದ್ಧರಾಗಿ ಕಾರ್ಯನಿರ್ವಹಿಸಬೇಕು. ಹಣಕಾಸಿನ ತೊಂದರೆ ನಿವಾರಣೆಗೆ 14 ಮತ್ತು 15ನೇ ಕಣಕಾಸಿನಿಂದ ಬಳಿಸಿಕೊಂಡು ಸಾರ್ವಜನಿಕರಿಗೆ ಲಸಿಕೆ ಪಡೆಯಲು ಪ್ರೇರಪಿಸಿ ಜನರ ಆರೋಗ್ಯದ ಕಡೆ ಯುದ್ದೋಪಾದಿಯಲ್ಲಿ ಕಾರ್ಯರ್ವಹಿಸಬೇಕು ಎಂದು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ| ಜಿ. ಅಭಯಕುಮಾರ ಅವರು, ಸೋಂಕಿತರ ತಪಾಸಣೆ ಮತ್ತು ಅವರಿಗೆ ಮುಂಜಾಗೃತ ಕುರಿತು ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡಿ ಅಂಕಿ ಅಂಶಗಳನ್ನು ಸಭೆಯ ಗಮನಕ್ಕೆ ತಂದರು.

ಉದ್ಯೋಗ ಖಾತ್ರಿ ಎಡಿ ಮೊದ್ಮದ್ ಸಲೀಂ ಉಪಸ್ಥಿತರಿದ್ದರು. ಇದೇ ವೇಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಮಂಜುರ ಪಟೇಲ್, ಶರಣಬಸಪ್ಪ ಕಡಗಂಚಿ, ರಾಮದಾಸ್ ಪೂಜಾರಿ, ಲಕ್ಷ್ಮಣ ಪೂಜಾರಿ, ಪ್ರಮೋದ, ಪ್ರಭು ಗಡಿಗಿ, ವನಿತಾ, ವಿದ್ಯಾರಾಣಿ ಕೋವಿಡ್ ನಿಯಂತ್ರಣ ಕಾರ್ಯದ ಬಗ್ಗೆ ವಿವರಣೆ ನೀಡಿದರು.