ಕೋವಿಡ್ ಮುಂದೆ ಯಾರು ಸಮರ್ಥರು, ಅಸಮರ್ಥರು ಇಲ್ಲ: ಖೂಬಾ

ಬೀದರ:ಎ.28: ಕೋವಿಡ್ -19 ನಿಂದ ಇಡೀ ಪ್ರಪಂಚವೇ ನಲುಗಿಹೋಗಿದೆ. ಇಲ್ಲಿ ಯಾರೂ ಸಮರ್ಥರೂ ಅಲ್ಲ ಅಸಮರ್ಥರು ಇಲ್ಲ ಕೇವಲ ರಾಜಕೀಯಕ್ಕೊಸ್ಕರ ಮನ ಬಂದಂತೆ ಮಾತನಾಡಬೇಡಿ ಎಂದು ಸಂಸದ ಭಗವಂತ ಖೂಬಾ ಹೇಳಿದ್ದಾರೆ.
ಇಂದು ಭಾಲ್ಕಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ರೋಗಿಗಳೋಂದಿಗೆ ಮಾತನಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಸಮರ್ಥವಾಗಿದ್ದರೆ ಅದು ಮಧ್ಯಪ್ರದೇಶದಲ್ಲಿ ಹರಡುತ್ತಿರಲಿಲ್ಲ. ಕಾಂಗ್ರೆಸ್ ಸಮರ್ಥವಾಗಿದ್ದರೆ ಅದು ಚತ್ತೀಸ್ಗರ್‌ನಲ್ಲಿ ಹರಡುತ್ತಿರಲಿಲ್ಲ. ಶಿವಸೇನೆ ಸಮರ್ಥವಾಗಿದ್ದರೆ ಅದು ಮಹಾರಾಷ್ಟ್ರದಲ್ಲಿ ಹರಡುತ್ತಿರಲಿಲ್ಲ. ಕೇಜ್ರಿವಾಲ್ ಸಮರ್ಥರಾಗಿದ್ದರೆ, ಅದು ದೆಹಲಿಯಲ್ಲಿ ಹರಡುತ್ತಿರಲಿಲ್ಲ. ಯೋಗಿ ಸಮರ್ಥರಾಗಿದ್ದರೆ, ಅದು ಯುಪಿಯಲ್ಲಿ ಹರಡುತ್ತಿರಲಿಲ್ಲ. ಮೋದಿಯವರು ಸಮರ್ಥರಾಗಿದ್ದರೆ ಅದು ಭಾರತದಲ್ಲಿ ಹರಡುತ್ತಿರಲಿಲ್ಲ. ಮನ ಬಂದಂತೆ ಮಾತನಾಡುವ ರಾಜಕೀಯ ನಾಯಕರು ಸಮರ್ಥರಾಗಿದ್ದರೆ, ಕರೋನಾ ಅವರಿಗೇ ಹರಡುತ್ತಿರಲಿಲ್ಲ.ಪ್ರಪಂಚವೆಲ್ಲಾ ಕರೋನಾ ಹರಡುತ್ತಿದ್ದರುವುದಕ್ಕೆ ಯಾರು ಜವಾಬ್ದಾರಿ? ಎಂದು ಪ್ರಶ್ನೆ ಮಾಡಿದ ಸಂಸದರು,
ಕೊರೊನವನ್ನು ಹಣದಿಂದ ನಿಯಂತ್ರಿಸುವಂತಿದ್ದರೆ ಅದು ಅಮೆರಿಕದಲ್ಲಿ ಹರಡುತ್ತಿರಲಿಲ್ಲ. ವೈದ್ಯರು ಮತ್ತು ಚಿಕಿತ್ಸೆಯ ಸಹಾಯದಿಂದ ಇದನ್ನು ನಿಲ್ಲಿಸುವಂತಿದ್ದರೆ, ಅದು ಸ್ವೀಡನ್, ಫ್ರಾನ್ಸ್ ಮತ್ತು ಬೆಲ್ಜಿಯಂನಲ್ಲಿ ಹರಡುತ್ತಿರಲಿಲ್ಲ. ಕರೋನವನ್ನ ರಾಜಕೀಯ ಪಕ್ಷಗಳು ನಿಲ್ಲಿಸುವುದಾಗುತ್ತಾ? ಅಥವಾ ಸರ್ಕಾರಗಳು ನಿಲ್ಲಿಸುವುದಕ್ಕಾಗುತ್ತಾ? ಆದ್ದರಿಂದ ಅಸಂಬದ್ಧ ವಾದಗಳಿಗೆ ಹೋಗಬೇಡಿ ಎಂದು ಸ್ಥಳೀಯ ಶಾಸಕ ಈಶ್ವರ್ ಖಂಡ್ರೆ ಅವ ವಿರುದ್ಧ ಪರೋಕ್ಷವಾಗಿ ತಿವಿದರು. ಅನಗತ್ಯವಾಗಿ ಮನೆಯಿಂದ ಹೊರಬರಬೇಡಿ, ಯಾವಾಗಲೂ ಮಾಸ್ಕ್ ಧರಿಸಿ, ನಿಮ್ಮನ್ನು ರಕ್ಷಿಸಿಕೊಳ್ಳಿ ಮತ್ತು ನಿಮ್ಮ ಪ್ರೀತಿಪಾತ್ರರನ್ನು ರಕ್ಷಿಸಿ. ಮನೆಯಲ್ಲಿ ಸುರಕ್ಷಿತವಾಗಿರಿ. ನಮ್ಮ ಕುಟುಂಬಕ್ಕಾಗಿ ನಾವುಗಳು ನಮ್ಮ ಜವಾಬ್ದಾರಿಯುತವಾಗಿ ನಡೆದುಕೊಳೋಣ್ಣ ಇತರರ ಯೋಗಕ್ಷೇಮಕ್ಕಾಗಿ ನಾವು ಆಶಿಸೋಣ ಎಂದು ಸಂಸದರು ನುಡಿದರು. ಅಲ್ಲಿಯ ಆರೋಗ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು.