ಕೋವಿಡ್ ಮಾಹಿತಿ ಕೇಂದ್ರದ ಸದುಪಯೋಗಪಡಿಸಿಕೊಳ್ಳಿ

ಕಲಬುರಗಿ: ಎ.24:ಕೋವಿಡ್-19ಗೆ ಸಂಬಂಧಿಸಿದಂತೆ ಅದರ ಲಕ್ಷಣಗಳು, ಮುಂಜಾಗ್ರತಾ ಕ್ರಮಗಳು, ಚಿಕಿತ್ಸೆಗೆ ಲಭ್ಯವಿರುವ ಆಸ್ಪತ್ರೆಗಳ ಪಟ್ಟಿ, ಲಸಿಕೆ ಸೇರಿದಂತೆ ಮುಂತಾದ ಮಾಹಿತಿಯು ಜನಸಾಮಾನ್ಯರಿಗೆ ದೊರಯಲಿಯೆಂಬ ಉದ್ದೇಶದಿಂದ ನಗರದ ಅನೇಕ ಕಡೆ ಜಿಲ್ಲಾಡಳಿವು ಮಾಹಿತಿ ಕೇಂದ್ರ ತೆರೆದಿದ್ದು, ಅದರ ಸದುಪಯೋಗವನ್ನು ಪಡೆಸಿಕೊಂಡು ಕೋವಿಡ್-19 ನಿರ್ಮೂಲನೆಗೆ ಸರ್ಕಾರ ಮತ್ತು ಜಿಲ್ಲಾಡಳಿತ ಜೊತೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಆಳಂದ ಚೆಕ್ ಪೋಸ್ಟ್ ಕೋವಿಡ್ ಮಾಹಿತಿ ಕೇಂದ್ರದ ನೋಡೆಲ್ ಅಧಿಕಾರಿ ಸದಾಶಿವ ಮಿರ್ಜಿ ಸಲಹೆ ನೀಡಿದರು.

   ನಗರದ ಆಳಂದ ಚೆಕ್ ಪೋಸ್ಟ್‍ನಲ್ಲಿ ಜಿಲ್ಲಾಡಳಿತದಿಂದ ತೆರೆಯಲಾದ ಕೋವಿಡ್ ಮಾಹಿತಿ ಕೇಂದ್ರಕ್ಕೆ ಶನಿವಾರ ಭೇಟಿ ನೀಟಿ ಪರಿಶೀಲಿಸಿ ನಂತರ ಅವರು ಮಾತನಾಡುತ್ತಿದ್ದರು.

  ಸಮಾಜ ಸೇವಕ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, ಕೋವಿಡ್ ವಿರುದ್ದದ ನಿರಂತರ ಹೋರಾಟಕ್ಕೆ ನಾಗರಿಕರು ಕೂಜೋಡಿಸಬೇಕು. ಸರ್ಕಾರ ನಿಯಮಗಳನ್ನು ಪಾಲಿಸಬೇಕು. ಈ ಮಾಹಿತಿ ಕೇಂದ್ರವು ಮಹಾರಾಷ್ಟ್ರ ಭಾಗದಿಂದ ಆಗಮಿಸಿ, ನಗರದಲ್ಲಿ ಪ್ರವೇಶಾತಿ ಪಡೆಯುವ ಸ್ಥಳದಲ್ಲಿದ್ದು, ಹೆಚ್ಚಿನ ಜನರು ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿರುವುದು ಸಂತೋಷದ ವಿಷಯವಾಗಿದೆ. ಎಲ್ಲರೂ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಸುವುದು ಅಗತ್ಯವಾಗಿದೆಯೆಂದರು.

 ಈ ಸಂದರ್ಭದಲ್ಲಿ ಮಾಹಿತಿ ಸಿಬ್ಬಂದಿಗಳಾದ ಶಿವಕಾಂತ ಚಿಮ್ಮಾ, ಶರಣಬಸಪ್ಪ ಮೆಟೆಕಾರ, ಆರೋಗ್ಯ ಕಾರ್ಯಕರ್ತೆ ದೀಕ್ಷಾ, ಭದ್ರತಾ ಸಿಬ್ಬಂದಿ ಜಗದೇವಿ ರೆಡ್ಡಿ, ಸಮಾಜ ಸೇವಕರಾದ ಎಚ್.ಬಿ.ಪಾಟೀಲ, ರಾಜಕುಮಾರ ಬಟಗೇರಿ, ಮಾಹಿತಿ ಸ್ವೀಕೃತ ನಾಗರಿಕರಾದ ಸುನೀಲ ಭಾವಿಮನಿ, ಧನರಾಜ ಕಾಂಬಳೆ, ವಿಜಯಲಕ್ಷ್ಮೀ ಅಡಕಿ ಇದ್ದರು.