ಕೋವಿಡ್ ಮಾರ್ಗಸೂಚಿ ಪಾಲಿಸಲು ದಂಡಾಧಿಕಾರಿ ಮನವಿ

ಕನಕಪುರ, ಮೇ ೧- ತಾಲೂಕು ದಂಡಾಧಿಕಾರಿ ವಿಶ್ವನಾಥ್ ಹಾಗೂ ಟೌನ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಲಕ್ಷ್ಮಣ್‌ಗೌಡ, ನಗರಸಭೆಯ ಅಧ್ಯಕ್ಷ ಮುಕ್ಬುಲ್ ಪಾಷ ನಗರದ ಹಲವು ಭಾಗಗಳಿಗೆ ಬೇಟಿಕೊಟ್ಟು ಕೋವಿಡ್ ಬಗ್ಗೆ ಮಾಸ್ಕ್ ಧರಿಸಿ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಟ್ಟರು.
ಮೊದಲನೇ ಸುತ್ತಿನ ಸೇಮಿ ಲಾಕ್ ಡೌನ್ ನಂತರ ಸರ್ಕಾರದ ಮಾರ್ಗಸೂಚಿಯಂತೆ ಎಡನೇ ಸುತ್ತಿನ ಲಾಕ್ ಡೌನ್‌ನ್ನು ಕಟ್ಟುನಿಟ್ಟಿನಿಂದ ಪಾಲಿಸುಸ್ಥಳೀಯವಾಗಿ ಅಗತ್ಯ ಕಾನೂನುಕ್ರಮವನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ.
ಕಳೆದ ನಾಲ್ಕುದಿನಗಳಿಂದ ತಾಲೂಕಿನ ಜನನಿಭಿಡ ಪ್ರದೇಶಗಳಿಗೆ ಬೇಟಿಕೊಟ್ಟು ತಾಲೂಕು ಟಾಸ್ಕ್ ಪೋರ್ಸ್ ಕಮಿಟಿಯ ನೇತೃತ್ವದಲ್ಲಿ ಜನಸಾಮಾನ್ಯರನ್ನು ಮನೆಯಿಂದ ಅನಗ್ಯವಾಗಿ ಹೊರಬರದಂತೆ ಮನವಿ ಮಾಡಲಾಗುತ್ತಿದೆ.
ಇಂದು ಬೆಳಿಗ್ಗೆ ಎಪಿಎಂಸಿ ಮಾರುಕಟ್ಟೆ, ಗೂಡಿನಮಾರುಕಟ್ಟೆ, ಪೆಟ್ರೋಲ್ ಬಂಕು, ರಿಲೆಯನ್ಸ್ ಮಾರ್ಟ್ ಸೇರಿದಂತೆ ಜನಸಂಚಾರ ಹೆಚ್ಚು ಇರುವ ರಸ್ತೆಗಳಲ್ಲಿ ಮಾಸ್ಕ್ ಕಡ್ಡಾ ಹಾಕುವಂತೆ ಹಾಗೂ ಬೆಳಿಗ್ಗೆ ೬ಗಂಟೆಯಿಂದ ೧೦ಗಂಟೆಯ ಒಳಗೆ ಎಲ್ಲಾ ವ್ಯಾಪಾರ ವಹಿವಾಟು ಸ್ಥಗಿಗೊಳಿಸುವಂತೆ ವಿಶೇಷ ಸೂಚನೆ ನೀಡಲಾಗುತ್ತಿದೆ.
ಎಲ್ಲಿ ಸರ್ಕಾರದ ಕಾನೂನನ್ನು ದುರ್ಭಳಕೆ ಮಾಡಿಕೊಂಡು ರಸ್ತೆಗಳಿದ ಜನರಿಗೆ ದಂಡದ ಮೂಲಕ ಬಿಸಿಮುಟ್ಟಿಸುವ ಕೆಲಸವನ್ನು ಕನಕಪರು ಸರ್ಕಲ್ ಇನ್ಸ್ ಫೆಕ್ಟರ್ ತಮ್ಮ ಸಬ್ ಇನ್ಸ್ ಪೆಕ್ಟರ್‌ಗಳ ಮೂಲಕ ಮಾಡುತಿದ್ದಾರೆ.
ಹಾಗೆಯೇ ರಸ್ತೆ ಬದಿ ಅನಾಥ ಜನರಿಗೆ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮೂರುಹೊತ್ತು ಹಾರೂಹಳ್ಳಿಯ ಸಬ್ ಇನ್ಸ್ ಫೆಕ್ಟರ್ ಮುರುಳಿ ಹಾಗೂ ಸರ್ಕಲ್ ಇನ್ಸ್ ಫೆಕ್ಟರ್ ನೇತೃತ್ವದ ತಂಡ ಊಟದ ವ್ಯವಸ್ಥೆಯನ್ನು ಉಚಿತವಾಗಿ ಮಾಡುತ್ತಿರುವುದು ಜನಮೆಚ್ಚುಗೆ ಗಳಿಸಿದೆ.