ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ಕಲ್ಯಾಣ ಮಂಟಪದ ಮಾಲೀಕರ ವಿರುದ್ಧ ಪ್ರಕರಣ ದಾಖಲು

ಮೈಸೂರು: ಏ:24: ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಕಲ್ಯಾಣ ಮಂಟಪದ ಮಾಲೀಕರ ವಿರುದ್ಧ ಪ್ರಕರಣವೊಂದು ನಗರದಲ್ಲಿ ದಾಖಲಾಗಿದೆ.
ಸರಸ್ವತಿಪುರಂ ಕಲ್ಯಾಣಮಂಟಪವೊಂದರಲ್ಲಿ 70-80ಜನರನ್ನು ಸೇರಿಸಿ ನಿಶ್ಚಿತಾರ್ಥ ನಡೆಸುತ್ತಿರುವುದು ಕೋವಿಡ್ ಮಾರ್ಗಸೂಚಿಯನ್ವಯ ಕಾನೂನು ಉಲ್ಲಂಘನೆಯಾಗಿದ್ದು, ಮಾಹಿತಿ ಪಡೆದು ದಾಳಿ ನಡೆಸಿದ ಡಿಸಿಪಿ ಡಾ.ಎ.ಎನ್ ಪ್ರಕಾಶ್ ಗೌಡ ಮತ್ತು ಸಿಬ್ಬಂದಿಗಳು ಮಾಲೀಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಕಲ್ಯಾಣಮಂಟಪದ ಮಾಲೀಕರಾದ ರಾಮಚಂದ್ರೇಗೌಡ ಬಿನ್ ಪೆÇ್ರ.ಕೆ.ಆರ್.ರಂಗಯ್ಯ (45) ಮಾಲೀಕರು ಸೆಲೆಬ್ರೆಷನ್ ಕನ್ವೆನ್ಶನ್ ಸೆಂಟರ್, ನಿವೇದಿತಾ ನಗರ ಮೈಸೂರು ಇವರಾಗಿದ್ದು, ಲೋಹಿತ್ ಜೊತೆ ಧನಲಕ್ಷ್ಮಿ ಎಸ್ ರವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತಿತ್ತು. ವಿವಾಹದ ಉಸ್ತುವಾರಿಯನ್ನು ಸೋಮು ಟಿ.ಬಿನ್ ತಮ್ಮಣ್ಣ(45) ಬಸವರಾಜ ಸರ್ಕಲ್ ಹತ್ತಿರ ವಿಜಯ ನಗರ ಮೂರನೇ ಹಂತ ವಹಿಸಿರುವುದು ತಿಳಿದಿದ್ದು,ವಿವಾಹದ ನಿಶ್ಚಿತಾರ್ಥ ಕಾರ್ಯಕ್ರಮ ನಡೆಸಲು ಅನುಮತಿ ಇಲ್ಲದಿದ್ದರೂ ಸಹ 70-80 ಜನರನ್ನು ವಿವಾಹದ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಸೇರಿಸಿ ಜನರ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ವೈರಾಣು ಸೋಂಕನ್ನು ಹರಡುವ ನಿರ್ಲಕ್ಷ್ಯ ಕೃತ್ಯವೆಸಗಿರುವ ಕಲ್ಯಾಣ ಮಂಟಪದ ಮಾಲೀಕ ರಾಮಚಂದ್ರೇಗೌಡ ಬಿನ್ ಪೆÇ್ರ.ಕೆ.ಆರ್.ರಂಗಯ್ಯ ಮಾಲೀಕರು ಸೆಲೆಬ್ರೇಷನ್ ಕನ್ವೆನ್ಶನ್ ಸೆಂಟರ್, ನಿವೇದಿತಾ ನಗರ ಮೈಸೂರು ಹಾಗೂ ವಿವಾಹ ಉಸ್ತುವಾರಿ ಸೋಮು ಬಿನ್ ತಮ್ಮಣ್ಣ ಬಸವರಾಜ ಸರ್ಕಲ್ ಹತ್ತಿರ ವಿಜಯ ನಗರ 3ನೇ ಹಂತ ಮೈಸೂರು ನಗರ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರಸ್ವತಿಪುರಂ ಠಾಣಾ ಪಿಎಸ್‍ಐ ರಾಚಯ್ಯ ಎಸ್ ಅವರು ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ.