ಕೋವಿಡ್ ಮಹಾಮಾರಿಗೆ ಇಕ್ಕಡಳ್ಳಿ ಕೆಂಪಯ್ಯ ವಿಧಿವಶ

ಹನೂರು: ಮೇ.26: ಕೋವಿಡ್ ಮಹಾಮಾರಿಗೆ ಹನೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಇಕ್ಕಡಳ್ಳಿ ಕೆಂಪಯ್ಯ ವಿಧಿವಶರಾಗಿದ್ದಾರೆ.
ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಕೆಂಪಯ್ಯ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮಾಜಿ ಸಚಿವ ದಿ.ಜಿ.ರಾಜೂಗೌಡ, ಶಾಸಕ ಆರ್.ನರೇಂದ್ರ ಅವರ ಕಟ್ಟಾ ಬೆಂಬಲಿಗರಾಗಿದ್ದ ಇವರು ಕಳೆದ 8 ವರ್ಷಗಳಿಂದ ಹನೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗಿ ಪಕ್ಷದ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದರು.
ಇತ್ತೀಚಿಗೆ ಕೆಂಪಯ್ಯ ಅವರ ಸಂಬಂಧಿ ಚಿಕ್ಕಲ್ಲೂರು ಗ್ರಾ.ಪಂ.ಅಧ್ಯಕ್ಷ ರಾಜು ಕೊರೊನಾಗೆ ಬಲಿಯಾಗಿದ್ದು, ಕುಟುಂಬಸ್ಥರು ಮತ್ತು ಕಾಂಗ್ರೇಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ.
ಮೃತರ ನಿಧನಕ್ಕೆ ಶಾಸಕ ಆರ್.ನರೇಂದ್ರ, ಮಾಜಿ ಸಂಸದ ಆರ್.ಧ್ರುವನಾರಾಯನ್ ಸೇರಿದಂತೆ ಇನ್ನಿತರೆ ಗಣ್ಯರು ತೀವ್ರ ಸಂತಾಪ ಸೂಚಿಸಿ ಮೃತರ ಆತ್ಮಕ್ಕೆ ಶಾಂತಿಕೋರಿದ್ದಾರೆ.