ಕೋವಿಡ್ ಭೀತಿ : ಹೋಳಿ ಆಚರಣೆ ನೀರಸ

ಹೂವಿನಹಡಗಲಿ ಮಾ 30 : ಪಟ್ಟಣದಲ್ಲಿ ಸಂಭ್ರಮ, ಉತ್ಸಾಹದಿಂದ ಆಚರಿಸುತ್ತಿದ್ದ ಹೋಳಿ ಹಬ್ಬವನ್ನು ಕೋವಿಡ್ ಭೀತಿಯಿಂದಾಗಿ ಈ ಬಾರಿ ರಂಗ ಕಳೆದುಕೊಂಡಿತು.
ಈ ಬಾರಿ ರ್ಸಾಜನಿಕರು ಸಾಮೂಹಿಕವಾಗಿ ಬಣ್ಣದ ಹಬ್ಬದಲ್ಲಿ ಪಾಳ್ಗೊಳ್ಳದೇ ಮನೆ, ಹಾಗೂ ಬಡಾವಣೆಗಳಿಗೆ ಸೀಮಿತವಾಗಿ ಹೋಳಿ ಆಚರಿಸಿದರು. ಚಿಕ್ಕ ಮಕ್ಕಳು, ಯುವಕರು ಆಯಾ ಬಡಾವಣೆಗಳಲ್ಲೇ ಹಣ್ಣದ ಆಟದಲ್ಲಿ ತೊಡಗಿದ್ದು ಕಂಡು ಬಂತು. ಪಟ್ಟಣದ ಮುಖ್ಯ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಸಾಮೂಹಿಕ ಹೋಳಿ ಆಚರಣೆ ಕಂಡು ಬರಲಿಲ್ಲ.
ಹೋಳಿ ಆಚರಣೆ ಹಿನ್ನೆಲೆಯಲ್ಲಿ ಪಟ್ಟಣದ ಮುಖ್ಯರಸ್ತೆಯ ಅಂಗಡಿ ಮುಂಗಟ್ಟೆಗಳು ಮುಚ್ಚಲ್ಪಟ್ಟಿದ್ದವು. ಪದ್ದತಿಯಂತೆ ಬೆಳಗಿನ ಜಾವ ಕಾಮನಕಟ್ಟೆಯ ಬಳಿ ಸಾಂಪ್ರದಾಯಿಕವಾಗಿ ಕಾಮ ದಹನ ನಡೆಸಲಾಯಿತು.
ಹೊಳಲು ಗ್ರಾಮದಲ್ಲಿ ಅದ್ದೂರಿ ಆಚರಣೆ : ಹೊಳಲು ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಹಾಗೂ ಕರವೇ ಕಾರ್ಯಕರ್ತರು ಸಾಮೂಹಿಕವಾಗಿ ಹೋಳಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕುತ್ತಾ ಯುವಕರು ಸಂಭ್ರಮಿಸಿದರು. ಬಹುತೇಕ ಜನರು ಗುಂಪು ಹೋಳಿಯಲ್ಲಿ ಪಾಲ್ಗೊಳ್ಳದೇ, ಮನೆ, ಓಣಿಗೆ ಸೀಮಿತವಾಗಿ ಬಣ್ಣದ ಆಟದಲ್ಲಿ ತೊಡಗಿದ್ದರು.