ಕೋವಿಡ್ ಭೀತಿ : ಸ್ಯಾನಿಟೈಸರ್ ಸಿಂಪಡಣೆ

ಕಾಳಗಿ. ಮೇ.19 : ಕೊಡದೂರ ಗ್ರಾಮದಲ್ಲಿ ಮಂಗಳವಾರ ರಸ್ತೆಗಳಲ್ಲಿ ಸ್ಯಾನಿಟೈಸರ್ ಸಿಂಪಡನೆ ಮಾಡಲಾಯಿತು.
ಸಾರ್ವಜನಿಕರಲ್ಲಿ ಕೋವಿಡ್ ಸೋಂಕಿನ ಬೀತಿ ಎದುರಾಗಿದೆ. ಈ ಬಾರಿ ಸಾವಿನ ಪ್ರಕರಣ ಜಾಸ್ತಿಯಾಗುತ್ತಿರುವ ಕಾರಣ ಗ್ರಾಮೀಣ ಭಾಗದ ಪ್ರತಿಯೊಂದು ಗ್ರಾಮ ಬಡಾವಣೆಗಳಲ್ಲಿ ಆತಂಕದಲ್ಲಿದ್ದಾರೆ. ಕೆಲ ಗ್ರಾಮಸ್ಥರು ಸ್ವಯಂ ಆಗಿ ಲಾಕ್‍ಡೌನ್ ಮಾಡಿಕೊಂಡಿದ್ದಾರೆ. ಹೀಗಾಗಿ, ವಲಸೆ ಕಾರ್ಮಿಕರು ಈಗಾಗಲೇ ರಸ್ತೆಯಲ್ಲಿ ಓಡಾಡಿದ ಪ್ರಯುಕ್ತ ಸ್ಯಾನಿಟೈಸರ್ ಸಿಂಪರಣೆ ಮಾಡುವ ಮೂಲಕ ಜನರಲ್ಲಿ ಕೋವಿಡ್ ಭೀತಿ ದೂರಮಾಡ ಬಹುದಾಗಿದೆ’ ಎಂದು ತಿಳಿಸಿದರು.
ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಸಿದ್ದಣ, ಶರಣು ಮಜ್ಜಗೆ, ಮೋಹನ ಚಿನ್ನ, ಆನಂದ ಮಂಗೊಂಡ, ಬಂಡು ಪಾಟೀಲ, ಮರಲಿಂಗ ಮೇಲಕೇರಿ, ಯಲ್ಲಾಲಿಂಗ ಗಂಗಾಪುಳ ಇದ್ದರು.