ಕೋವಿಡ್ ಭೀತಿ: ಸರಳವಾಗಿ ರಾಮನವಮಿ ಆಚರಣೆ

ಕಲಬುರಗಿ.ಏ.21: ನಗರದ ಶ್ರೀ ಶರಣಬಸವೇಶ್ವರ್ ದೇವಸ್ಥಾನದ ಆವರಣದಲ್ಲಿ ಶ್ರೀ ಆದಿಪುರುಷ ರಾಮನವಮಿ ಉತ್ಸವ ಸಮಿತಿಯ ವತಿಯಿಂದ ಬುಧವಾರ ಅತೀ ಸರಳವಾಗಿ ಕೋವಿಡ್ ನಿಯಮಗಳನ್ನು ಪಾಲಿಸಿ ರಾಮನವಮಿಯನ್ನು ಆಚರಿಸಲಾಯಿತು.
ಸಮಿತಿಯ ಗೌರವಾಧ್ಯಕ್ಷ ಸಿದ್ದಲಿಂಗ್ ಸ್ವಾಮೀಜಿ ಆಂದೋಲಾ, ಸಂಸ್ಥಾಪಕ ಅಧ್ಯಕ್ಷ ಮಹೇಶ್ ಎಚ್. ಗೊಬ್ಬೂರ್ ಹಾಗೂ ಡಾ. ಅಪ್ಪಾರಾವ್ ಸರಡಗಿ ದೇವಿ ಮುತ್ಯಾ, ನಿಜಗುಣಾನಂದ್ ಸ್ವಾಮೀಜಿ ಭೂಸನೂರ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಶರಣಗೌಡ ಅಲ್ಲಮಪ್ರಭು ಪಾಟೀಲ್, ಸಂತೋಷ್ ದಣ್ಣೂರ್, ರವಿ ದೇಗಾಂವ್, ಸೈನಿಕ್ ರಾಠೋಡ್, ಚಂದ್ರಕಾಂತ್ ಕಾಳಗಿ, ಸಚಿನ್ ಶಿಂಧೆ, ಮಹಾಂತೇಶ್ ಕಲಶೆಟ್ಟಿ, ರಮೇಶ್ ದೇಸಾಯಿ, ಸಂತೋಷ್ ಮದನೆ, ರಾಕೇಶ್ ಜಮಾದಾರ್, ಈಶ್ವರ್ ಹಿಪ್ಪರಗಿ, ಸಚಿನ್ ಕುಮಸಿ, ಮಹೇಶ್ ಯಾದವ್, ವೀರೇಶ್ ಸುತಾರ್, ಗುಂಡು ಪಾಟೀಲ್, ಮಹೇಶ್ ಕೆಂಭಾವಿ, ಬಸವರಾಜ್ ಮೇತ್ರಿ, ಆನಂದ್ ಎಘಶೆಟ್ಟಿ, ಅರುಣ್ ಸುಲ್ತಾನಪುರ, ಮಂಜುನಾಥ್ ಕುಲಕರ್ಣಿ ಹಾಗೂ ಶ್ರೀರಾಮ ಸೇನೆ ಕಾರ್ಯಕರ್ತರು ಪಾಲ್ಗೊಂಡಿದ್ದರು.