ಕೋವಿಡ್ ಭೀತಿ: ದಕ್ಷಿಣ ಕನ್ನಡ ಸಂಘದ ಸಂಸ್ಥಾಪನಾ ದಿನ ಸರಳ ಆಚರಣೆ

ಕಲಬುರಗಿ.ಏ.22: ದಕ್ಷಿಣ ಕನ್ನಡ ಸಂಘದ 56 ನೇ ಸಂಸ್ಥಾಪನಾ ದಿನವನ್ನು ನಗರದ ರಾಮಮಂದಿರದಲ್ಲಿ ವಿಶೇಷ ಪೂಜೆಯೊಂದಿಗೆ ಸರಳವಾಗಿ ಆಚರಿಸಲಾಯಿತು.
ಸಂಘವನ್ನು 55 ವರ್ಷಗಳ ಹಿಂದೆ ರಾಮನವಮಿಯ ದಿನ ಕಲಬುರ್ಗಿಯಲ್ಲಿ ಹುಟ್ಟುಹಾಕಲಾಗಿತ್ತು. ಸಾಮಾಜಿಕ, ಸಾಂಸ್ಕøತಿಕ ಸಂಘವಾಗಿ ಬೆಳೆದು ನಿಂತಿದೆ. ಶಿಕ್ಷಣ, ಆರೋಗ್ಯ, ಸಮಾಜ ಸೇವೆಯ ಮೂಲಕ ತನ್ನ ಸಮಾಜಮುಖಿ ಕಾರ್ಯಗಳನ್ನು ನೆರವೇರಿಸುತ್ತಿದೆ. ಕೋವಿಡ್ ಹಿನ್ನಲೆಯಲ್ಲಿ ರಾಮಮಂದಿರದಲ್ಲಿ ಸಂಸ್ಥಾಪನಾ ದಿನದಂಗವಾಗಿ ಶ್ರೀರಾಮದೇವರಿಗೆ ವಿಶೇಷ ಪೂಜೆ ನೆರವೇರಿಸಿ ಲೋಕ ಕಲ್ಯಾಣರ್ಥವಾಗಿ ಪ್ರಾರ್ಥಿಸಲಾಯಿತು.
ಪೂಜಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಂಘದ ಗೌರವಾಧ್ಯಕ್ಷ ಪ್ರಶಾಂತ್ ಶೆಟ್ಟಿ ಇನ್ನಾ, ಅಧ್ಯಕ್ಷ ಡಾ. ಸದಾನಂದ್ ಪೆರ್ಲ, ಅನ್ನಬ್ರಹ್ಮ ಯೋಜನೆಯ ಸಂಚಾಲಕ ಶ್ರೀನಿವಾಸ್ ಆಚಾರ್ಯ, ಕಾರ್ಯದರ್ಶಿ ಶ್ರೀಮತಿ ಲಕ್ಷ್ಮೀ ಪ್ರಶಾಂತ್ ಪೈ, ಸದಸ್ಯರಾದ ಪ್ರಭಾಕರ್ ಉಪಾಧ್ಯಾಯ, ಪ್ರಶಾಂತ್ ಪೈ, ಶ್ರೀಮತಿ ಸುಶೀಲಾ ನಾಗೇಶ್, ಶ್ರೀಮತಿ ಚಂದ್ರಕಲಾ, ರಾಮ ಮಂದಿರದ ವ್ಯವಸ್ಥಾಪಕ ನಿರಂಜನ್ ರಾವ್, ಅರ್ಚಕ ನಾಗರಾಜ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.
ನಂತರ ರಾಮದೇವರ ವಿಶೇಷ ಪ್ರಸಾದ ಪಾನಕ, ಕೋಸುಂಬರಿ ಪಾಯಸ ವಿತರಿಸಲಾಯಿತು. ಸಂಘದ ಸದಸ್ಯರೆಲ್ಲರೂ ಕೋವಿಡ್ ನಿಯಮ ಪಾಲಿಸಿಕೊಂಡು ಆರೋಗ್ಯದ ಕುರಿತಾಗಿ ಹೆಚ್ಚಿನ ಕಾಳಜಿ ವಹಿಸುವಂತೆ ಕೋರಲಾಯಿತು.