ಕೋವಿಡ್ ಭೀತಿ;ಬೆಂಗಳೂರಿನ ಕಲುಷಿತ ನೀರು ಪರೀಕ್ಷೆ

ಬೆಂಗಳೂರು, ಮೇ.27- ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಎರಡನೇ ಅಲೆ ನಡುವೆ ಸೋಂಕು ಹರಡದಿರಲು ತೀವ್ರ ನಿಗಾವಹಿಸಿರುವ ರಾಜ್ಯ ಸರ್ಕಾರ, ಒಳಚರಂಡಿ, ಕೊಳಚೆನೀರಿನ ಪರೀಕ್ಷೆಗೂ ಮುಂದಾಗಿದೆ.

ಮಳೆ ಅಥವಾ ಮ್ಯಾನ್ ಹೋಲ್ ಗಳಿಂದ ಮಾಲಿನ ನೀರು ರಸ್ತೆ ಮತ್ತು ಮನೆಗಳಿಗೆ ನುಗ್ಗುತ್ತಿದೆ.ಆದರೆ, ಇದರಿಂದ ಸೋಂಕು, ರೋಗಗಳು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಿರುವ ಕಾರಣ, ಇದರ ಪರೀಕ್ಷೆ ನಡೆಸಲಾಗಿದೆ.

ದೇಶದಲ್ಲೇ ಅಲ್ಲದೆ, ಏಷ್ಯಾ ಖಂಡದಲ್ಲೇ ಮೊದಲ ಬಾರಿಗೆ ನೀರಿನಲ್ಲಿರುವ ರೋಗದ ಬ್ಯಾಟರಿಯ ಪರೀಕ್ಷೆ ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ.ಇದಕ್ಕಾಗಿ ಬಿಬಿಎಂಪಿ ವ್ಯಾಪ್ತಿಯ 45 ವಾರ್ಡ್ ಗಳನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ನಗರಾಭಿವೃದ್ಧಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಮಾಲಿನ ನೀರು ಹೊರಬರದಂತೆ ಕ್ರಮ ಕೈಗೊಳ್ಳಲಾಗಿದ್ದು, ಕೋವಿಡ್ ಸೋಂಕು‌ ಹರಡುವಿಕೆ ತಗ್ಗಿಲು ಪ್ರಾರಂಭಿಕವಾಗಿ ಬಿಬಿಎಂಪಿ ವ್ಯಾಪ್ತಿಯ 45 ವಾರ್ಡ್‌ಗಳಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು.

ಡ್ರೈವ್ ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (ಯುಎಸ್ಎಐಡಿ) ಮತ್ತು ಸ್ಕೋಲ್ ಫೌಂಡೇಶನ್-ಬೆಂಬಲಿತ) ಕೋವಿಡ್ ಆಕ್ಷನ್ ಕೊಲಾಬ್ (ಸಿಎಸಿ) ಸಹಯೋಗದೊಂದಿಗೆ ಈ ಯೋಜನೆ ಕೈಗೊಂಡಿದ್ದು, ಈ ಸಂಸ್ಥೆಯೂ ಕೊಳಗೇರಿ ಪ್ರದೇಶದ ಬಡವರಿಗೆ ಕೋವಿಡ್ -19 ಪರಿಹಾರ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸಲು ಕೆಲಸ ಮಾಡುತ್ತಿದೆ.

ಕೋವಿಡ್ -19 ನಿಯಂತ್ರಣಕ್ಕೆ ಈ ಹೊಸ ವಿಧಾನ ಸಹಕಾರಿ ಆಗಿದ್ದು, ಹೆಲ್ತ್ ಕ್ಯಾಟಲಿಸ್ಟ್ ಉಪಕ್ರಮವಾದ ಪಿಸಿಎಂಹೆಚ್ ರಿಸ್ಟೋರ್ ಹೆಲ್ತ್ ಅಂಡ್ ವೆಲ್ನೆಸ್ ಮತ್ತು ಸ್ವಸ್ತಿ ಜೊತೆ ಸಿಎಸಿ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದೆ.ವಿಶ್ವದಾದ್ಯಂತದ ವಿಜ್ಞಾನಿಗಳು ತ್ಯಾಜ್ಯ ನೀರಿನ ಪರೀಕ್ಷೆಯ ನಡೆಸಿ ರೋಗಾಣು ಗಳ ಎಚ್ಚರಿಕೆ ನೀಡಿರುವ ಉದಾಹಣೆಗಳು ಸಾಕಷ್ಟಿವೆ ಎಂದು ಸಂಸ್ಥೆಯೂ ಮಾಹಿತಿ ನೀಡಿದೆ.