ಕೋವಿಡ್ ಭತ್ಯೆ ನೀಡುವಂತೆ ಒತ್ತಾಯಿಸಿ ಡಾಕ್ಟರ್‍ಗಳ ಪ್ರತಿಭಟನೆ

ಚಾಮರಾಜನಗರ, ನ.30:- ಕಳೆದ 6 ತಿಂಗಳುಗಳಿಂದ ಕೋವಿಡ್ ಭತ್ಯೆಯನ್ನು ಸರ್ಕಾರ ನೀಡದ ಹಿನ್ನೆಲೆಯಲ್ಲಿ ನಗರದ ಯಡಪುರ ಬಳಿರುವ ಚಾಮರಾಜನಗರ ಜಿಲ್ಲಾ ವೈದ್ಯಕೀಯ ಬೋಧನಾ ಅಸ್ಪತ್ರೆಯ ಮುಂಭಾಗ ವೈದ್ಯರು ಇಂದಿನಿಂದ ಅನಿರ್ದಿμÁ್ಟವಧಿ ಧರಣಿ ಪ್ರಾರಂಭಿಸಿದ್ದಾರೆ.
ಸಿಮ್ಸ್‍ನಲ್ಲಿ 136 ಮಂದಿ ಕಿರಿಯ ವೈದ್ಯರಿದ್ದು, ತುರ್ತು ಚಿಕಿತ್ಸೆ ಬಿಟ್ಟು ಉಳಿದವರು ಸೇವೆಯಿಂದ ದೂರ ಉಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಹೊರರೋಗಿಗಳು ತೀವ್ರ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಕಿರಿಯ ವೈದ್ಯರ ಸಂಘದ ಅಧ್ಯಕ್ಷ ಡಾ. ಧೀಮಂತ್ ಮಾತನಾಡಿ, ಸಿಮ್ಸ್ ಆವರಣದಲ್ಲಿ ಮೊದಲ ದಿನ ಪ್ರತಿಭಟಿಸಿದ ಅವರುಗಳು ಇಂದು ಕೂಡ ನಗರದ ಭುವನೇಶ್ವರಿ ವೃತ್ತದಲ್ಲಿ ಹಾಗೂ ಜಿಲ್ಲಾ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಸರ್ಕಾರ ಮಣಿಯದಿದ್ದಲ್ಲಿ ನಾಳೆಯಿಂದ ತುರ್ತು ವಿಭಾಗದಿಂದಲೂ ಹೊರಗುಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ ಮೇ ತಿಂಗಳಿನಲ್ಲಿ ಸರ್ಕಾರ ಕಿರಿಯ ವೈದ್ಯರು, ಇಂಟರ್ನಿಗಳಿಗೆ ಪ್ರತಿ ತಿಂಗಳು 10 ಸಾವಿರ ಕೋವಿಡ್ ಭತ್ಯೆ ನೀಡುವುದಾಗಿ ಘೋಷಿಸಿತ್ತು. ಆದರೆ, ಈ ವರೆಗೆ ಸರ್ಕಾರ ಹಣವನ್ನು ಬಿಡುಗಡೆ ಮಾಡಿಲ್ಲ. ನವೆಂಬರ್ ನಲ್ಲಿ ವೈದ್ಯರ ಹೋರಾಟ ತಾರಕಕ್ಕೇರಿದ್ದರಿಂದ ಸಚಿವ ಡಾ. ಕೆ ಸುಧಾಕರ್ ಹಣ ಬಿಡುಗಡೆಗೆ 10 ದಿನ ಸಮಯಾವಕಾಶ ಪಡೆದಿದ್ದರು. ಆದರೆ, ಅವರ ಭರವಸೆ ಕೂಡ ಹುಸಿಯಾದ ಹಿನ್ನೆಲೆಯಲ್ಲಿ ವೈದ್ಯರು ಮತ್ತೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಜ್ಯೂನಿಯರ್ ಡಾಕ್ಟರ್ಸ್ ಅಸೋಸಿಯೇಷನ್ ವತಿಯಿಂದ ನೂರಕ್ಕೂ ಹೆಚ್ಚು ಜ್ಯೂನಿಯರ್ ವೈದ್ಯರು ಕಪ್ಪು ಪಟ್ಟಿ ಧರಿಸಿ, ರಾಜ್ಯ ಸರ್ಕಾರ ವಿರುದ್ದ ಘೋಷಣೆ ಕೂಗಿದರು. ಬೆಳಗ್ಗೆಯಿಂದ ಕರ್ತವ್ಯಕ್ಕೆ ಗೈರು ಹಾಜರಾಗಿ ಪ್ರತಿಭಟನೆ ನಡೆಸುತ್ತಿದ್ದರು.
ಮಾಜಿ ಸಂಸದ ಆರ್. ಧ್ರುವನಾರಾಯಣ್ ಬೆಂಬಲ :
ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ನಿನ್ನೆ ಮಾಜಿ ಸಂಸದ ಹಾಗು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ವೈದ್ಯ ವಿದ್ಯಾರ್ಥಿಗಳ ಧರಣಿಯಲ್ಲಿ ಸ್ವಲ್ಪ ಹೊತ್ತು ಭಾಗವಹಿಸಿ, ಬೆಂಬಲ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಂ ಮನವಿ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಸಂಕಷ್ಟದಲ್ಲಿ ಸೇವೆ ಸಲ್ಲಿಸಿರುವ ವೈದ್ಯ ಭತ್ಯೆಯನ್ನು ತಕ್ಷಣ ಬಿಡುಗಡೆ ಮಾಡಬೇಕೇಂಬ ಸಾಮಾನ್ಯ ಜ್ಞಾನವು ವೈದ್ಯಕೀಯ ಸಚಿವರಿಗೆ ಇಲ್ಲ. ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸಿರುವ ವೈದ್ಯರಿಗೆ ಇನ್ನು ಸಹ ಭತ್ಯೆ ನೀಡದಿರುವುದು ದುರದೃಷ್ಟಕರ. ಕೂಡಲೇ ಸರ್ಕಾರ ಎಲ್ಲಾ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಸಂದರ್ಭದಲ್ಲಿ ದುಡಿದಿರುವ ಜ್ಯೂನಿಯರ್ ವೈದ್ಯರಿಗೆ ಕೋವಿಡ್ ಭತ್ಯ ನೀಡುವಂತೆ ಒತ್ತಾಯಿಸಿದರು.
ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ನಮ್ಮ ಪಕ್ಷದ ನಾಯಕರು ಹಾಗು ನಮ್ಮ ಶ್ರಮ ಬಹಳ ಇದೆ. ನಾನು ಸಂಸದನಾಗಿದ್ದ ಸಂದರ್ಭದಲ್ಲಿ ವೈದ್ಯಕೀಯ ಕಾಲೇಜು ಮಂಜೂರಾಗಿದೆ. ಸುಂದರ ಕಟ್ಟಡ ನಿರ್ಮಾಣವಾಗಿದೆ. ತಾವೆಲ್ಲರು ವೈದ್ಯಕೀಯ ತರಬೇತಿಯನ್ನು ಪಡೆದು ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ನೀಡಬೇಕೆಂದು ಕಿವಿಮಾತು ಹೇಳಿದರು. ಇಷ್ಟರಲ್ಲೇ ವಿಧಾನಸಭಾ ಅಧಿವೇಶನ ಆರಂಭವಾಗಲಿದ್ದು, ನಮ್ಮ ಪಕ್ಷದ ಶಾಸಕರು ಈ ವಿಚಾರವನ್ನು ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ ನಿಮಗೆ ನ್ಯಾಯ ದೊರಕಿಸಿಕೊಡಲು ಪ್ರಯತ್ನ ಮಾಡುತ್ತೇನೆ. ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗಮನಕ್ಕೂ ತರುವುದಾಗಿ ಧ್ರುವನಾರಾಯಣ್ ತಿಳಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೈಯದ್ ಮೊಸಾಹಿಬ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಲ್ಲೂರು ಮಹದೇವಸ್ವಾಮಿ, ಜ್ಯೂನಿಯರ್ ಡಾಕ್ಟರ್ ಅಸೋಷಿಯಷನ್‍ನ ಅಧ್ಯಕ್ಷ ಡಾ. ಯು.ವೈ. ದೇಮಂತ್, ಉಪಾಧ್ಯಕ್ಷ ಡಾ. ಎಂ. ಸಹನ, ಪ್ರಧಾನ ಕಾರ್ಯದರ್ಶಿಗಳಾದ ಡಾ. ಮೋಹನ್, ಡಾ. ತೇಜಸ್ವನಿ ಅರುಣ್, ಡಾ. ಎನ್. ಗಣೇಶ್, ಸಹ ಕಾರ್ಯದರ್ಶಿ ಡಾ. ಅಶಾ, ಡಾ. ದೀಲಿಪ್ ಕುಮಾರಿ, ಸಿ.ಎ. ಹರೀಶ್ ಮೊದಲಾದವÀÀರು ಇದ್ದರು.