ಕೋವಿಡ್ ಬಗ್ಗೆ ಭಯ ಬೇಡ ಪರೀಕ್ಷೆ ಮಾಡಿಸಿಕೊಳ್ಳಿ


ಜಗಳೂರು.ನ.೬; ಗ್ರಾಮಸ್ಥರು ಕೋವಿಡ್ ಪರೀಕ್ಷೆಗೆ ಸಹಕಾರ ನೀಡಬೇಕು ಮತ್ತು ನೆರೆಹೊರೆಯವರಿಗು ಪರೀಕ್ಷೇ ಮಾಡಿಸಿಕೊಳ್ಳುವಂತೆ ಸಲಹೆ ನೀಡಬೇಕು ಎಂದು ತಾಲೂಕು ಆರೋಗ್ಯಧಿಕಾರಿ ಜಿ.ಓ ನಾಗರಾಜ್ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು.ತಾಲೂಕಿನ ಬಸವನ ಕೊಟೆ ಗ್ರಾಮದಲ್ಲಿ ಆರೋಗ್ಯ ಇಲಾಖೆಯವರು ಪ್ರತಿಯೊಂದು ಮನೆಗಳಿಗೆ ತೆರಳಿ ಕೋವಿಡ್ ಬಗ್ಗೆ ಭಯ ಬೇಡ ಪರೀಕ್ಷೇ ಮಾಡಿಸಿಕೊಳ್ಳಿ ಎಂದು ಜಾಗೃತಿ ಮೂಡಿಸಿದರು.
ಈ ವೇಳೆ ಮಾತನಾಡಿದ ಅವರು ಕೋವಿಡ್ ಪರೀಕ್ಷೇ ಮಾಡಿಸಿಕೊಳ್ಳುವಂತೆ ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೆ ತೆರಳಿ ಅಲ್ಲಿನ ನಿವಾಸಿಗಳ ಮನವೊಸಲಾಗುತ್ತಿದೆ ಕೆಲವರು ಭಯ ಪಡುತ್ತಿದ್ದು ಪರೀಕ್ಷೆ ಮಾಡಿಸಿಕೊಳ್ಳುವಂತೆ ಅವರಿಗೆ ಜಾಗೃತಿ ಮೂಡಿಸಲಾಗುತ್ತಿದೆ ತಾಲೂಕಿನಲ್ಲಿ ಈ ಗಾಗಲೇ ೧೮ ಸಾವಿರ ಜನರಿಗೆ ಕೋವಿಡ್ ಪರೀಕ್ಷೆಮಾಡಲಾಗಿದೆ ಈ ರೋಗಕ್ಕೆ ಔಷ್ಧ ದೊರೆಯುವ ತನಕ ಪ್ರತಿಯೊಬ್ಬರು ಜಾಗೃತರಾಗಬೇಕು ಮತ್ತು ಕೊವಿಡ್ ನಿಯಮಗಳನ್ನು ಪಾಲಿಸ ಬೇಕು ಎಂದರು.
ಈ ಸಂದರ್ಭದಲ್ಲಿ ವೈದರು , ಆಶಾಕಾರ್ಯಕರ್ತೆಯರು ಹಾಜರಿದ್ದರು.