ಕೋವಿಡ್ ಬಗ್ಗೆ ಅರಿವು ಮೂಡಿಸಲು ಟಾಮ್… ಟಾಮ್…

ಹನೂರು:ಏ:03: ಕರೋನಾ ಸೋಂಕು ಹರಡದಂತೆ ಮುಂಜಾಗ್ರತ ಕ್ರಮವಾಗಿ ಪಟ್ಟಣ ಪಂಚಾಯಿತಿ ವತಿಯಿಂದ ಟಾಮ್ ಟಾಮ್ ಮುಖಾಂತರ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾಂiÀರ್iಕ್ರಮವನ್ನು ಕೈಗೊಳ್ಳಲಾಗಿತ್ತು.
ದಿನೇ ದಿನೆ ಕೊರೊನಾ ಸೋಂಕು ವ್ಯಾಪಾಕವಾಗಿ ಹರಡುತ್ತಿರುವುದರಿಂದ ಸಾರ್ವಜನಿಕರು ಅನಗತ್ಯವಾಗಿ ಓಡಾಡಬಾರದು, ಕಡ್ಡಾಯವಾಗಿ ಮಾಸ್ಕ್, ಹಾಗೂ ಸಾಮಾಜಿಕ ಅಂತರವನ್ನು ಕಾಪಾಡುವ ನಿಟ್ಟಿನಲ್ಲಿ ಮುಂದಾಗಬೇಕು. ಅಗತ್ಯ ವಸ್ತುಗಳನ್ನು ಕೊಳ್ಳಲು ಸರ್ಕಾರ ಕೊವಿಡ್-19 ಮಾರ್ಗಸೂಚಿ ಪರಿಷ್ಕರಣೆ ತಂದಿರುವುದರಿಂದ ಸಾರ್ವಜನಿಕರು ಒಮ್ಮೆಲೇ ಅಗತ್ಯ ವಸ್ತುಗಳನ್ನು ಕೊಳ್ಳಲು ಮುಗಿ ಬೀಳಬಾರದು ಎಂಬುದು ಸೇರಿದಂತೆ ಕೊರೋನಾ ತಡೆಗಟ್ಟುವ ದಿಸೆಯಲ್ಲಿ ಸಾರ್ವಜನಿಕರು ಪಾಲಿಸಬೇಕಾದ ನಿಯಮಗಳ ಬಗ್ಗೆ ಅರಿವು ಮೂಡಿಸಿದರು.
ಟಾಮ್ ಟಾಮ್ ಮೂಲಕ ಪ.ಪಂ.ಯಿಂದ ಹೊರಟ ಪ.ಪಂ.ಮುಖ್ಯಾಧಿಕಾರಿ ಮೂರ್ತಿ ಮತ್ತು ಸದಸ್ಯರುಗಳ ತಂಡ ಪಟ್ಟಣದ ಖಾಸಗಿ ಬಸ್ ನಿಲ್ದಾಣ, ಡಾ.ಅಂಬೇಡ್ಕರ್ ವೃತ್ತ, ಡಾ.ಅಂಬೇಡ್ಕರ್ ಬಡಾವಣೆ, ಸೊಪ್ಪಿನಕೇರಿ, ಮೈಸೂರುಮ್ಮನ ರಸ್ತೆ, ಹಳೆ ಎಂ.ಡಿ.ಸಿ.ಸಿ.ಬ್ಯಾಂಕ್ ರಸ್ತೆ, ಬೆಟ್ಟಳ್ಳಿ ಮಾರಮ್ಮ, ರಸ್ತೆ, ವಿನಾಯಕ ನಗರ ಸೇರಿದಂತೆ ಪಟ್ಟಣದ ವಿವಿಧ ಬಡಾವಣೆಗಳಿಗೆ ತೆರಳಿ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಪ.ಪಂ.ಉಪಾಧ್ಯಕ್ಷರಾದ ಹರೀಶ್‍ಕುಮಾರ್, ಸದಸ್ಯರಾದ ಸಂಪತ್‍ಕುಮಾರ್, ಸೋಮಶೇಖರ್, ಸುದೇಶ್, ಮಹೇಶ್‍ನಾಯಕ್, ಮುಮ್ತತಾಜ್ ಬಾನು, ಸಿಬ್ಬಂದಿಗಳು ಇದ್ದರು.