ಕೋವಿಡ್ ಬಂದಾಗಿನಿಂದ ಸಿಟಿ ಸ್ಕ್ಯಾನ್ ಗೆ ಮುಗಿಬಿದ್ದ ಜನತೆ: ಅನಾವಶ್ಯಕ ಸ್ಕ್ಯಾನ್ ಬೇಡ ಎಂದ ಡಿಸ್ಟ್ರಿಕ್ಟ್ ಸರ್ಜನ್

ವಿಜಯಪುರ, ಮೇ.4-ಕೋವಿಡ್ ಎರಡನೇ ಅಲೆ ಆರಂಭವಾದಗಿನಿಂದ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಳವಾಗಿದೆ ಎಂದು ಡಿಸ್ಟಿಕ್ ಸರ್ಜನ್ ಶರಣಪ್ಪ ಕಟ್ಟಿ ಹೇಳಿದ್ದಾರೆ.
ವಿಜಯಪುರದಲ್ಲಿ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು ಕೋವಿಡ್ ಅಲೆಗಿಂತ ಮೊದಲೆಲ್ಲ 1000 ದಿಂದ 1200 ರಷ್ಟು ಜನ ತಿಂಗಳಿಗೆ ಸಿಟಿ ಸ್ಕ್ಯಾನ್ ಮಾಡಿಸಿ ಕೊಳ್ಳುತ್ತಿದ್ದರು, ಕೋವಿಡ್ ಎರಡನೇ ಅಲೆ ಆರಂಭವಾದಾಗಿನಿಂದ 1800 ರಿಂದ 2000 ಜನ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳುತ್ತಿದ್ದಾರೆ. ಜನರು ಹೆದರಿಕೆಯಿಂದ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳುತ್ತಿದ್ದಾರೆ.
ಒಂದು ಸಿಟಿ ಸ್ಕ್ಯಾನ್ ದಿಂದ 200 ರಿಂದ 300 ಎಕ್ಸರೇ ರೇಡಿಯೇಷನಷ್ಟು ದೇಹದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಸುಖಾ ಸುಮ್ಮನೆ ಸಿಟಿ ಸ್ಕ್ಯಾನ್ ಮಾಡಿಸಬಾರದು. ಕೋವಿಡ್ ಪೀಡಿತರೊಂದಿಗೆ ಸಂಪರ್ಕ ಬಂದ ತಕ್ಷಣ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳಬಾರದು. ಸ್ವಲ್ಪ ದಿನಗಳ ಕಾಲ ಕಾದು ಸಿಟಿ ಸ್ಕ್ಯಾನ್ ಮಾಡಿಸಿದರೆ, ಸರಿಯಾದ ಮಾಹಿತಿ ಲಭ್ಯವಾಗುತ್ತದೆ. ಅವಶ್ಯಕತೆ ಇದ್ರೆ ಮಾತ ಸಿಟಿ ಸ್ಕ್ಯಾನ್ ಮಾಡಿಸಿ ಎಂದರು.